എസ് വി എ യു പി എസ് സ്വർഗ്ഗ ಎಸ್.ವಿ.ಎ.ಯು.ಪಿ.ಎಸ್.ಸ್ವರ್ಗ/അക്ഷരവൃക്ഷം/ Eartha destroyed by Corona

Eartha destroyed by Corona


ಇಳೆಯನ್ನು ಕಂಗೆಡಿಸಿದ ಕೊರೋನ

ಹಚ್ಚಹಸಿರ ಗಿಡಮರಗಳು
ತೂಗೋ ಗ್ರಹವಿದು।
ಏಕಮಾತ್ರ ಜೀವವಾಸ
ಇರುವ ಭುವಿಯಿದು॥
           ಎಂದು ಮುಗಿಯದಂತ
            ಗಾಳಿ ಇಲ್ಲಿ ಬೀಸಲು।
            ಪ್ರಾಣಿಪಕ್ಷಿಗಳು ನಿನ್ನ
            ನಾಮ ಸಾರಲು॥
ಕೊರೋನವೆಂಬ ಮಹಾಮಾರಿಯ
ನೀನು ಬಲ್ಲೆಯಾ?।
ಮನೆ ಹೊರಗಡೆ ಕಾಲಿಡಲು
ತುಂಬಾನೇ ಭಯ!॥
         ಇದಕೆ ಬೇಗ ಮದ್ದು
         ಸಿಗಲಿ ಎಂಬ ಆಸೆಯು ।
         ಉಗ್ರ ತಾಂಡವ
         ಮಾಡುತಿದೆ ಈ ಕೊರೋನವು॥
ಯಾಕೆ ಭುವಿಯ ನಶಿಸುತ್ತಿರುವೆ
ಓ ಕೊರೋನವೇ ....... ।
ನೀನು ಎಂತ ಅನ್ಯಾಯವ
ಮಾಡುತಲಿರುವೇ॥
      ಜೀವವಾಸವಿರುವುದು
      ಬರಿ.... ಇಳೆಯಲಿ ಮಾತ್ರ।
      ನಿನ್ನ ಅಂತ್ಯ ಹಾಡಲಿದೆ
      ಔಷಧಿ ಅಸ್ತ್ರ ॥
 ನಿನಗೆ ಹೆದರಿ ಮನುಜರೆಲ್ಲಾ ಕಂಗಾಲಾದರು।
ದಿನೇ ದಿನೇ ಬೆದರಿಕೊಂಡು
ಬದುಕುತಿರುವರು॥
     ಮನುಜರೆಲ್ಲಾ ನಿನ್ನ
     ದೂರಗೊಳಿಸಲೆಂದು।
     ಜಾಗೃತಿಗಳ ಮೂಡಿಸುವರು
     ಒಂದರ ಮೇಲೊಂದು ॥
ಬಿಟ್ಟು ಓಡು ಧರಣಿಯ
ಇಲ್ಲದಿದ್ದರೆ ಸಾವು।
ನೀನು ಓಡಿ ಹೋಗದಿದ್ರೆ
ಓಡಿಸ್ತೀವಿ ನಾವು..... ॥
      

GREESHMA.B
5 - എസ് വി എ യു പി എസ് സ്വർഗ്ഗ ಎಸ್.ವಿ.ಎ.ಯು.ಪಿ.ಎಸ್.ಸ್ವರ್ಗ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - കവിത