HEMMAARI KORONA(ಹೆಮ್ಮಾರಿ ಕೊರೋನ)
ಹೆಮ್ಮಾರಿ ಕೊರೊನಾ 🙁😷
ಜಗತ್ತನ್ನು ಆವರಿಸಿದೆ ಕೊರೊನಾ
ಹಾಳಾಗಿದೆ ಇದರಿಂದ ಎಲ್ಲರ ಜೀವನ
ಇದು ಮಾಡಿದೆ ಲಕ್ಷ ಲಕ್ಷ ಸಾವು
ಜಗತ್ತು ಅನುಭವಿಸಿದೆ ಇದರ ನೋವು
ಬಳಲುತ್ತಿದೆ ಹಸಿವಿನಿಂದ ಇಡೀ ಜಗತ್ತು
ಯಾಕೆ ಬಂತು ಜಗತ್ತಿಗೆ ಈ ಆಪತ್ತು
ಚೀನಾದಲ್ಲಿ ಹುಟ್ಟಿದ ಈ ಮಾರಿ
ಕೊರೊನಾ
ಆಳುತ್ತಿದೆ ,ಅಳಿಸುತ್ತಿದೆ ಜಗತ್ತನ್ನ
ರೂಪ,ಆಕಾರವಿಲ್ಲ ಇದಕ್ಕೆ
ಆದರೆ ಇದು ತಂದಿದೆ ಎಲ್ಲರ ಜೀವನಕ್ಕೆ ಧಕ್ಕೆ
ಅಧಿಕಾರಿಗಳ ಸಲಹೆ ಪಾಲಿಸೋಣ
ಸಾಮಾಜಿಕ ಅಂತರವ ಕಾಪಾಡೋಣ
ಕೊರೊನಾ ಹೋಗಲು ಪ್ರಾರ್ಥಿಸೋಣ
ಎಲ್ಲರ ಶ್ರಮ ಫಲಿಸಲಿ
ಈ ಕೊರೊನಾದ ಹೋರಾಟದಲಿ
ನಾವೂ ಕೈ ಜೋಡಿಸೋಣ
ಎಂದು ಮರಳದ ಊರಿಗೆ
ಸಾಗಲಿ ಈ ಕೊರೊನಾದ ಸವಾರಿ.....
ದೂರವಾಗಲಿ ಈ ಹೆಮ್ಮಾರಿ....
സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - കവിത
|