ജി.വി.എച്ച്.എസ്.എസ്. കാറഡുക്ക/അക്ഷരവൃക്ഷം/ ಅರಿವು

Schoolwiki സംരംഭത്തിൽ നിന്ന്
13:45, 6 മേയ് 2020-നു ഉണ്ടായിരുന്ന രൂപം സൃഷ്ടിച്ചത്:- Mohammedrafi (സംവാദം | സംഭാവനകൾ)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
ಅರಿವು

ಅರಿವು ಅದೊಂದು ಪುಟ್ಟ ಹಳ್ಳಿ. ಅ ಹಳ್ಳಿಯಲ್ಲಿ ಒಂದು ಸಣ್ಣ ಕುಟುಂಬ ವಿತ್ತು. ಆ ಮನೆಯಲ್ಲಿ ದಂಪತಿಗಳು ಹಾಗೂ ಅವರ ಇಬ್ಬರು ಮಕ್ಕಳಿದ್ದರು. ಅವರು ಇದ್ದ ಸೌಲಭ್ಯಗಳನ್ನು ಬಳಸಿಕೊಂಡು ಸುಖಜೀವನವನ್ನು ನಡೆಸುತ್ತಿದ್ದರು. ಮಕ್ಕಳಿಬ್ಬರೂ ತಮ್ಮ ತಮ್ಮ ವಿದ್ಯಾಭ್ಯಾಸವನ್ನು ಊರಿನ ಸರಕಾರಿ ಶಾಲೆಯಲ್ಲಿ ಪಡೆಯುತ್ತಿದ್ದರು. ಇಬ್ಬರು ಉನ್ನತ ವಿದ್ಯಾಭ್ಯಾಸವನ್ನು ಮುಗಿಸಿಕೊಂಡರು. ಮಗಳಿಗೆ ಮದುವೆ ಪ್ರಾಯ ವಾದಾಗ ಮದುವೆ ಮಾಡಿಬಿಟ್ಟರು. ಮಗ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದನು. ಮುಂದೆ ತಂದೆ-ತಾಯಿ ಇಬ್ಬರು ಕೂಲಿ ಕೆಲಸವನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಹಲವು ವರ್ಷ ಹೀಗೆ ಜೀವನವನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ತಂದೆ ಹಾಸಿಗೆ ಹಿಡಿದರು. ಈ ಸಮಯದಲ್ಲಿ ತಾಯಿಗೆ ಏನು ಮಾಡಬೇಕೆಂದು ಗೋಚರಿಸದೆ ನೆರೆ*ಕರೆಯವರಲ್ಲಿ ತನ್ನ ಮಗನಿಗೆ ಈ ಸುದ್ದಿಯನ್ನು ತಿಳಿಸಬೇಕೆಂದು ವಿನಂತಿಸಿಕೊಂಡರು. ಈ ಅತ್ಯಾವಶ್ಯಕ ಸಮಯದಲ್ಲಿ ತನ್ನ ಮಗನು ಹಲವು ಕಾರಣಗಳನ್ನು ಉಂಟು ಮಾಡಿಕೊಂಡು ಊರಿಗೆ ಬರುವುದನ್ನು ತಪ್ಪಿಸಿಕೊಳ್ಳುತ್ತಾನೆ. ತಂದೆ ಹಾಸಿಗೆ ಹಿಡಿದ ಸಮಯದಲ್ಲಿ ಹೇಳಿದ ಹಲವು ಸುಳ್ಳು ಕಾರಣಗಳನ್ನು ತಂದೆ ತೀರಿಕೊಂಡ ಸಮಯದಲ್ಲೂ ಪುನರುಚ್ಚರಿಸಿದನು . ಮುಂದಿನ ದಿನಗಳಲ್ಲಿ ತಾಯಿ ಅಕ್ಕಪಕ್ಕದವರ ಸಹಾಯಹಸ್ತವನ್ನು ಸ್ವೀಕರಿಸಿಕೊಂಡು ಬದುಕುತ್ತಿದ್ದಳು.

    1. ವಿದೇಶದಲ್ಲಿ ಕೋರೋನ ಎಂಬ ಮಹಾಮಾರಿ ಹರಡಿದ ವೇಳೆಯಲ್ಲಿ...............##

ವಿದೇಶದಲ್ಲಿ ತನ್ನ ಕುಟುಂಬದ ಕಡೆ ಗಮನಕೊಡದೆ ಸಾಕಿ-ಸಲಹಿದ ತಂದೆ-ತಾಯಿಯ ಮೇಲೆ ಕರುಣೆ ತೋರಿಸದೆ ತನ್ನಪಾಡಿಗೆ ಕೆಲಸ ಮಾಡಿಕೊಂಡು ಇದ್ದ ಮಗನು ತಾನಿದ್ದ ದೇಶದಲ್ಲಿ ಕೋರೋನ ಎಂಬ ಮಹಾಮಾರಿಯ ಸುದ್ದಿ ಬೀಸಿದ ತಕ್ಷಣ ಊರಿಗೆ ತೆರಳಲು ಸಿದ್ಧನಾದನು.

ಅವನು ತನ್ನ ಸ್ವಂತ ದೇಶವಾದ ಭಾರತಕ್ಕೆ ಮರಳಿ ಬರುವಷ್ಟರಲ್ಲಿ ಭಾರತ ದೇಶದ ಹೆಮ್ಮೆಯ ಪ್ರಧಾನಿಯಾದ ನರೇಂದ್ರ ಮೋದಿಯವರು ಕೋರೋನ ಮಹಾಮಾರಿಯನ್ನು ಎದುರಿಸಲು ಬೇಕಾದ ಕ್ರಮಗಳನ್ನು ಕೈಗೊಂಡಿದ್ದರು. ಹಾಗೆ ಅವನು ತನ್ನ ಹುಟ್ಟೂರಿಗೆ ತಲುಪಿದನು.

ತನ್ನ ಸ್ವಂತ ತಂದೆ ಹಾಸಿಗೆ ಹಿಡಿದಾಗಲೂ ತೀರಿಕೊಂಡಾಗಲೂ ಬರದ ಮಗನು ಕೋರೋನ ಗಾಳ ಬೀಸಿದಾಗ ತನ್ನ ಜೀವ ರಕ್ಷಣೆಗಾಗಿ ತಾಯಿಯ ಬಳಿ ಬಂದ ಎಂದು ಅಕ್ಕಪಕ್ಕದವರೆಲ್ಲ ಆಡಿಕೊಳ್ಳುತ್ತಿದ್ದರು.

ವಿದೇಶದಿಂದ ಬಂದರೂ ತಾಯಿ ಹೇಳಿದ ಮಾತುಗಳನ್ನು ಕೇಳದೆ ಊರಿನಲ್ಲಿ ಸುತ್ತಾಡಿ ಕೊಂಡಿದ್ದ. ಸ್ವಲ್ಪ ದಿನಗಳು ಕಳೆದಾಗ ತಾಯಿಗೆ~ಶೀತ, ನೆಗಡಿ, ಕೆಮ್ಮು, ಜ್ವರ ಬಂದಾಗ ಊರಿನ ಆರೋಗ್ಯ ಕೇಂದ್ರ ಇಲಾಖೆಯವರು ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕೋರೋನ ಇದೆಯೆಂದು ದೃಢಪಡಿಸಿದರು. ಹಾಗೆ ಮಗನನ್ನು ಪ್ರತ್ಯೇಕಿಸಿದ ವಾರ್ಡಿನಲ್ಲಿ ಉಳಿದು ಕೊಳ್ಳಲು ಹೇಳಿದರು. ಆ ಸಮಯಕ್ಕೆ ವೈದ್ಯರು ಅವನ ಮನಮುಟ್ಟುವಂತೆ ಒಂದು ಮಾತು ಹೇಳಿದರು."ಎಲ್ಲಾ ಮಕ್ಕಳು ತನ್ನ ತಂದೆ-ತಾಯಿಯ ಜೀವವನ್ನು ರಕ್ಷಿಸಲು ಊರಿಗೆ ಬರುತ್ತಿದ್ದರು. ಆದರೆ ನೀನು ತನ್ನ ತಾಯಿಯ ಜೀವವನ್ನು ತೆಗೆಯಲು ಊರಿಗೆ ಬಂದೆಯಲ್ಲ!?"

ರಚನೆ: ಪ್ರಜ್ಞಾ. ಕೆ 8ನೇ ತರಗತಿ ಜಿ ವಿ ಹೆಚ್ ಎಸ್ ಎಸ್ ಕಾರಡ್ಕ


PRAJNA.K (ಪ್ರಜ್ಞಾ.ಕೆ)
8 K ജി.വി.എച്ച്.എസ്.എസ്. കാറഡുക്ക/ಜಿ ವಿ ಎಚ್ ಎಸ್ ಎಸ್ ಕಾರಡ್ಕ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ


 സാങ്കേതിക പരിശോധന - Mohammedrafi തീയ്യതി: 06/ 05/ 2020 >> രചനാവിഭാഗം - കഥ