15:28, 28 ഏപ്രിൽ 2020-നു ഉണ്ടായിരുന്ന രൂപം സൃഷ്ടിച്ചത്:- Ajamalne(സംവാദം | സംഭാവനകൾ)('{{BoxTop1 | തലക്കെട്ട്= ತಾಯಿಯ ಮಮತೆ | color= 2 }} <center> <poem> ನನ್ನ...' താൾ സൃഷ്ടിച്ചിരിക്കുന്നു)
ನನ್ನ ಮುದ್ದು ಕಂದಮ್ಮ ಯಾಕೀ ಅಳಲು
ನಿನಗೆ ನೋವಾದರೆ ಕಿತ್ತುಹೋಗುವುದು ನನ್ನ ಕರುಳು
ನಿನ್ನ ಅಲಂಕಾರಕ್ಕೆ ತಂದಿರುವೆ ಬಣ್ಣದ ಹೂಗಳು
ಮಗುವೇ ನಕ್ಕಿಬಿಡು ನಿನ್ನ ನಗುವೇ ಬೆಳದಿಂಗಳು
ನಿನ್ನ ನಗುವ ಕಂಡು ಸೋತು ಹೋದ ಆ ಚಂದಿರ
ಸೋತು ಬರಲಾರ ಎನ್ನುವ ನಿನ್ನ ಹತ್ತಿರ
ಮುರಿದುಬಿಟ್ಟೆ ಅವನೇ ಚಂದ ಎನ್ನುವ ಅವನ ಅಹಂಕಾರ
ನೀನೇ ಚಂದಿರನ ಗೆದ್ದ ನನ್ನ ರಾಜಕುಮಾರ
ನಿನ್ನ ಜೊತೆ ಇದ್ದರೆ ಮರೆತು ಹೋಗುತ್ತದೆ ಚಿಂತೆ
ಸಮಯ ಹೋದದ್ದೇ ತಿಳಿಯದು ಇದ್ದು ನಿನ್ನ ಜೊತೆ
ನಿನ್ನ ಭವಿಷ್ಯಕ್ಕಾಗಿ ಈಗಲೇ ಜೋಡಿಸಿಟ್ಟಿರುವೆ ಹಣದ ಕಂತೆ
ಎಂದು ಕೊನೆ ಕಾಣದು ತಾಯಿಯ ಈ ಮಮತೆ