ಪುಟ್ಟ ಗುಬ್ಬಿ ದೊಡ್ಡ ಮರದಿ ಗೂಡು ಕಟ್ಟಿತು
ಬೆಳೆದು ದೊಡ್ಡದಾಗಿ ಪುಟ್ಟ ಮೊಟ್ಟೆಯಟ್ಟಿತು
ಮೊಟ್ಟೆಯಿಟ್ಟು ಕಾವು ಕೊಟ್ಟು ಮರಿಯ ಮಾಡಿತು
ಅಲ್ಲಿ ಈಲ್ಲಿ ಸುತ್ತಿ ಸುಳಿದು ಕಾಳು ತಂದಿತು
ಪುಟ್ಟ ಮರಿಗೆ ಗುಟುಕ ಕೊಟ್ಟು ಸಾಕಿ ಬೆಳೆಸಿತು
ರೆಕ್ಕೆ ಪುಕ್ಕ ಬೆಳೆದು ಮರಿಯು ದೊಡ್ಡದಾಯಿತು
ಮರಿಗೆ ಹಕ್ಕಿ ಅತ್ತ ಇತ್ತ ಹಾರೆ ಕಲಿಸಿತು
ಹಾರ ಕಲಿತ ಮರಿ ಹಕ್ಕಿಯು ಹಾರಿಹೋಯಿತು
ಮರಿಯು ಹಾರೆ ಪುಟ್ಟಹಕ್ಕಿ ಹರುಷಪಟ್ಟಿತು