ഉള്ളടക്കത്തിലേക്ക് പോവുക

എസ് .ഡി. പി. എച്ച്. എസ്. ധർമ്മത്തടുക്ക/പ്രവർത്തനങ്ങൾ/2026-27

Schoolwiki സംരംഭത്തിൽ നിന്ന്

Felicitation ceremony of A+ Achiever's of SDPHSS in SSLC exam 2025 26


ಧರ್ಮತ್ತಡ್ಕ ಪ್ರೌಢಶಾಲೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ದತ್ತಿನಿಧಿ ವಿತರಣೆ. ಮೇ30 ; ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಧರ್ಮತ್ತಡ್ಕದಲ್ಲಿ 2026-27 ನೇ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ವಿದ್ಯಾರ್ಥಿಗಳ ಹೆತ್ತವರಿಗಾಗಿ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. 2025-26ನೇ ಶೈಕ್ಷಣಿಕ ವರ್ಷದ SSLC ವಾರ್ಷಿಕ ಪರೀಕ್ಷೆಬರೆದ ಎಲ್ಲಾ 240 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶಾಲೆಗೆ ನೂರು ಶೇಕಡಾ ಫಲಿತಾಂಶ ಲಭಿಸಿದೆ. ಈ ಸಂದರ್ಭದಲ್ಲಿ ಎಲ್ಲಾ ವಿಷಯಗಳಲ್ಲೂ A+ ಪಡೆದ ಒಟ್ಟು 12 ವಿದ್ಯಾರ್ಥಿಗಳಿಗೆ ಹಾಗೂ ಒಂಬತ್ತು ವಿಷಯಗಳಲ್ಲಿ A+ ಪಡೆದ 5 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಅಲ್ಲದೇ ಆರ್ಥಿಕವಾಗಿ ಹಿಂದುಳಿದ, ಕನ್ನಡ ಮಾಧ್ಯಮದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುವ "ಮೇಪೋಡು ಶ್ರೀ ಸುಬ್ರಾಯ ಮಯ್ಯ" ದತ್ತಿನಿಧಿಯನ್ನು ಆಯ್ದ 5 ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕಿ ಶ್ರೀಮತಿ ಈಶ್ವರಿ.ಡಿ ವಿತರಿಸಿದರು.

ಪಿ.ಟಿ.ಎ ಅಧ್ಯಕ್ಷ ಶ್ರೀ ಅಶೋಕ್ ಭಂಡಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ "ಅಧ್ಯಾಪಕರ, ಹೆತ್ತವರ ಬೆಂಬಲದಿಂದ ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು" ಎಂದು ಅಭಿಪಾಯಪಟ್ಟರು. ಶಾಲಾ‌‌ ಮೇನೇಜರ್ ಶಂಕರನಾರಾಯಣ ಭಟ್ ಗೌರವ ಉಪಸ್ಥಿತರಿದ್ದು ಮಾತನಾಡುತ್ತಾ "ಈ ವರ್ಷ ನೂತನ ಪಠ್ಯಪುಸ್ತಕ ಜಾರಿಯಾಗಿ ಹೊಸ ಪಠ್ಯಕ್ರಮದ ಕಲಿಕೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿದ್ದಾರೆ" ಎಂದು ಅಭಿಪ್ರಾಯ ಪಟ್ಟರು. ಮುಖ್ಯೋಪಾಧ್ಯಾಯರಾದ ಶ್ರೀ ಶಶಿಕುಮಾರ್ ಪಿ ಪ್ರಾಸ್ತಾವಿಕ ಮಾತನಾಡಿದರು. ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ದಿವ್ಯಾಭಾರತಿ ಶುಭಹಾರೈಸಿದರು.

ಶ್ರೀಮತಿ ಸುನಿತಾ ಕೆ ಸ್ವಾಗತಿಸಿ, ಶ್ರೀ ಪ್ರದೀಪ್ ಕೆ ವಂದಿಸಿದರು. ಶ್ರೀ ಪ್ರಶಾಂತ ಹೊಳ್ಳ ಎನ್, ನಿರೂಪಿಸಿದರು. ಶ್ರೀ ಸೂರ್ಯನಾರಾಯಣ ಭಟ್ ಪ್ರಾರ್ಥಿಸಿದರು.