ഉള്ളടക്കത്തിലേക്ക് പോവുക

എസ്.എൻ.എച്ച്.എസ്. പെർള/അക്ഷരവൃക്ഷം/ Ahankarakke thakka shikshe

Schoolwiki സംരംഭത്തിൽ നിന്ന്
15:47, 8 മേയ് 2026-നു ഉണ്ടായിരുന്ന രൂപം സൃഷ്ടിച്ചത്:- Schoolwikihelpdesk (സംവാദം | സംഭാവനകൾ) (Schoolwikihelpdesk എന്ന ഉപയോക്താവ് എസ്. എന്. എച്ച്എസ്. പെർള/അക്ഷരവൃക്ഷം/ Ahankarakke thakka shikshe എന്ന താൾ എസ്.എൻ.എച്ച്.എസ്. പെർള/അക്ഷരവൃക്ഷം/ Ahankarakke thakka shikshe എന്നാക്കി മാറ്റിയിരിക്കുന്നു)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
Ahankarakke thakka shikshe
ಚಂಪಕ ಎನ್ನುವ ಒಂದು ವನದಲ್ಲಿ ಒಂದು ನರಿಯು ವಾಸವಾಗಿತ್ತು.ಅದು ಕಾಡಿನಲ್ಲಿರುವ ಸಣ್ಣ ಪುಟ್ಟ ಪ್ರಾಣಿಗಳನ್ನು ಹೆದರಿಸಿ ಬೆದರಿಸಿ ಮೋಸ ಮಾಡಿ ತಿಂದು ವಾಸಿಸುತ್ತಿತ್ತು.ಅದಕ್ಕೆ ಎಲ್ಲಾ ಪ್ರಾಣಿಗಳು ನರಿ ಮೋಸ ಮಾಡಿ ತಿನ್ನುತ್ತದೆ ಎಂದು ಹೆದರುತ್ತಿದ್ದವು.ಯಾವ ಪ್ರಾಣಿಯೂ ಹೊರ ಬರುತ್ತಿರಲಿಲ್ಲ.ಇದರಿಂದ ನರಿಗೆ ಯಾವ ಪ್ರಾಣಿಗಳೂ ಸಿಗುತ್ತಿರಲಿಲ್ಲ.ಆದುದರಿಂದ ನರಿಯು ಹಸಿವಿನಿಂದ ನರಳುತ್ತಿತ್ತು.ಅದಕ್ಕೆ ಒಂದು ಉಪಾಯ ಹೊಳೆಯಿತು "ನನಗೆ ಕಾಡಿನಲ್ಲಿ ತಿನ್ನಲು ಎನೂ ಸಿಗುವುದಿಲ್ಲ ನಾನು ನಾಡಿಗೆ ಹೋಗುತ್ತೇನೆ"ಎಂದು ಯೋಚಿಸಿತು.ಹೌದು "ನನಗೆ ತಿನ್ನಲು ಸಿಗಬಹುದು.ನಾನು ಕಾಡಿಗೆ ಹೋಗಿ ಬದುಕುತ್ತೇನೆ" ಎಂದು ಕಾಡಿನಲ್ಲಿ ಪ್ರಜ್ಞೆ ಮಾಡಿತು.ಆಗ ಪ್ರಾಣಿಗಳೆಲ್ಲ ಸಂತೋಷದಿಂದ ಹೋಗು ಹೋಗು ಎಂದು ಹೇಳಿದವು.ತನ್ನಷ್ಟಕೆ ತಾನೇ ಯೋಚಿಸಿತು ನಾನು ಇನ್ನು ನಾಡಿನ ಒಳಗೆ ಹೋಗಿ ಕೋಳಿಗಳನ್ನು ಹಿಡಿದು ತಿನ್ನಬಹುದು.ಆಗ ಚಿನ್ನು ಗಿಳಿಯು ಮನಸ್ಸಿನ ಒಳಗೆ ಹಲವಾರು ಬಾರಿ ಶಾಪ ಹಾಕಿತು.ನನ್ನ ಕಂದನನ್ನು ತಿಂದ ನೀನು ನಾಡಿಗೆ ಹೋಗು ಇಲ್ಲಿಂದ ಹೋಗು ಎಂದು.

ಆಗ ಕಿಟ್ಟು ಮೊಲವು ನನ್ನ ಅಮ್ಮನನ್ನು ತಿಂದೆ ನೀನು ನಾಡಿಗೆ ಹೋಗು ಎಂದು ಮನಸ್ಸಿನ ಒಳಗೇ ಯೋಚಿಸಿತು.ನರಿಯು ನಾಡಿಗೆ ಹೋಯಿತು.ಅದಕ್ಕೆ ಒಂದು ಕೋಳಿ ಕಾಣಿಸಿತು.ಅದನ್ನು ತಿನ್ನಬೇಕು ಎಂದು ಕೋಳಿಯನ್ನು ಹಿಂದಿನಿಂದ ಹಿಡಿಯಲು ಹೋಯಿತು.ಕೂಡಲೇ ಕೋಳಿಯು ಜೋರಾಗಿ ಕೂಗಿತು.ಮನೆಯವರೆಲ್ಲ ಓಡಿ ಬಂದು ನರಿಗೆ ಹೊಡೆದರು.ಪೆಟ್ಟು ತಿಂದ ನರಿಯು ನಂತರ ನಾಡಿಗೆ ಬರಲೇ ಇಲ್ಲ.


POORNIMA
6 B എസ്. എന്. എച്ച്എസ്. പെർള
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ


 സാങ്കേതിക പരിശോധന - pcsupriya തീയ്യതി: 08/ 05/ 2026 >> രചനാവിഭാഗം - കഥ