ಬಂದಿದೆ ಕೊರೋನ ಮಹಾಮಾರಿಯು
ಭೂಮಿಯನಿಂದು ಬೆದರಿಸಿದೆ
ಎಲ್ಲಿ ನೋಡಿದರೂ ಹಾಹಾಕಾರ
ಇಡೀ ವಿಶ್ವಕೇ ದುಃಖಕರ
ಪ್ರಕೃತಿಯ ಶೋಷಣೆ ಮಾಡುವ ಮನುಜಗೆ
ಪ್ರಕೃತಿಯೇ ಶಿಕ್ಷೆಯ ಕೊಡುತಿದೆಯೋ?
ಗಿಡ ಮರ ಪಕ್ಷಿ ಪ್ರಾಣಿಗಳೆಲ್ಲವೂ
ಮನುಜನ ನೋಡಿ ನಗುತುದೆಯೋ?
ವೈದ್ಯರು ವಿಜ್ಞಾನಿಗಳು ಎಲ್ಲರೂ
ಸಂಶೋಧನೆಯನು ಮಾಡುತಿರುವರು
ಪ್ರಕೃತಿಯ ಕೋಪಕೆ ಪರಿಹಾರವಿಲ್ಲದೆ
ಮನುಜರು ಯೋಚಿಸಿ ಪರಿತಪಿಸುವರು.
ಸಾಮಾಜಿಕ ಅಂತರವೇ ಔಷಧಿ
ಅದನೇ ಎಲ್ಲರು ಪಾಲಿಸುವ
ವಿಶ್ವಕೆ ಬಂದ ಮಹಾಮಾರಿಯನು
ಈ ವಿಧಾನದಲೇ ಓಡಿಸುವ
ಸರಕಾರದ ನಿರ್ದೇಶವ ಪಾಲಿಸಿ
ಮನೆಯಲೇ ಎಲ್ಲರು ಇದ್ದುಬಿಡೋಣ
ಪುರಾಣ ಕಥೆಗಳ ದೂರದರ್ಶನದಿ
ನೋಡುತ ಸಮಯವ ಕಳೆಯೋಣ
ಮನೆಯಲೇ ಇದ್ದು ನಮ್ಮನು ರಕ್ಷಿಸಿ
ಇತರರನೂ ನಾವು ರಕ್ಷಿಸುವ
ವಿಶ್ವದ ಎಲ್ಲರೂ ಬದುಕಿ ಉಳಿಯಲೆಂದು
ಭಗವಂತನಲಿ ಪ್ರಾರ್ಥಿಸುವ.