എസ്. എ.ടി.എച്ച്.എസ്. മഞ്ചേശ്വർ/അക്ഷരവൃക്ഷം/ ಅರಸು ದೈವಗಳ ಇತಿಹಾಸ
ಅರಸು ದೈವಗಳ ಇತಿಹಾಸ
ನಾರಯಣ ದೇವರು ಸೃಷ್ಟಿಮಾಡಿದ ದೈವಗಳೇ ಅರಸು ದೈವಗಳು . ಮೈ ಮೇಲೆ ಮಲ್ಲಿಗೆ ಹಾಗು ಸೊಂಟದಲ್ಲಿ ಕೇದಗೆಯ ಪರಿಮಳವನ್ನು ಗೊಂದಿಸಿಕೊಂಡು ಸಮುದ್ರದ ಮದ್ಯದಲ್ಲಿ ಉದಯಿಸಿದ ದೈವಗಳು ನಾಗದೇವರನ್ನು ದಷ್ಟರಿಗೋಸ್ಕರ ತಂದವರ ಸಾವಿರ ಜನರನ್ನು ಕಾವಲಿಗೆ ಇಟ್ಟವರು ಸಾವಿರ ಕಗ್ಗಾರದ ಮಾಯಯೇಯಾದ ಅರಸುಗಳೇ ಭಕ್ತರ ದೈವಗಳೆಂದು ನುಡಿನುತ್ತನ್ನು ಹೇಳುತ್ತಾರೆ ದೇವಲೋಕದಿಂದ ಈ ಲೋಕಕ್ಕೆ ಬಂದ ಮಹಾಮಾಯೆ ಭಗವತಿ ದೇವರನ್ನು ಒಂದಾಗಿ ಸೇರಿದವರು. ಮಾಯದ ಕವಚದಿಂದ ಬಂದಿರುವ ಚಿತ್ತಗಳನ್ನು (ದೈವ)ಕಾಲಕಾಲಕ್ಕೆ ಭಕ್ತರು ಅವರ ಸಾನಿದ್ಯಕ್ಕೆ ಬರುತ್ತಾರೆ.ನಾಲ್ಕು ಮಂದಿಯಾದ ದೈವಗಳು ಹಾಗೂ ನಾಲ್ಕು ಸಿಕ್ಕರು ೧೪ ಚಿತ್ತಗಳಿಂದ ಇದ್ದರು.ಉದ್ದಾರ ಎರಡು ಬಂಗಾರದ ಖಡದಿಂದ ಮಾಡಿದ ಪಾವು ಸೇರು ಮಣ್ಣಿನಿಂದ ಮೆಚ್ಚಿಗೆ ಇಲ್ಲ ಎಂದು ಹೇಳಿದವರು.ಬಾಗಿಲಿನಲ್ಲಿ ಕೆಸರು ಕಲ್ಲಿನ ದಾರಿಯಲ್ಲಿ ಕೊಟ್ಯ ಮಾಡವನ್ನು ಕಟ್ಟಿಸಿದವರು.ಭಕ್ತರಲ್ಲಿ ದಕ್ಷಿಣೆ ನೀಡಿ ಎಂದು ಹೇಳಿದವರು.ಹುಟ್ಟಿಸಿದ ಅಮ್ಮ ಸಾಕಿದ ಮಾವನಿಗೆ ಸರಿಸಮಾನವಾದ ದೈವಗಳು.ಈ ದೈವಗಳನ್ನು ಸತ್ಯ ದೈವಗಳೆಂದು ಕರೆಯುತ್ತಾರೆ.ಎಲ್ಲರು ಇಷ್ಟ ದೇವರೆಂದು ಕರೆದು ಪಾದಕ್ಕೆ ಅಡ್ಡ ಬೀಳುತ್ತಾರೆ.ಈ ಮಾಡ ಎನ್ನುವ ಸ್ಥಳದಲ್ಲಿ ಮತಭೇದ ಎನ್ನುವ ಭೇದ ಇಲ್ಲದಿರುವ ಮಣ್ಣು ಇದು.ಭಕ್ತರಿಗೆ ಯಾವಾಗಲೂ ಅಭಯವನ್ನು ಕೊಡಿ ಎಂದು ಬೇಡಿಕೊಳ್ಳುತ್ತಾರೆ.ರೀತಿನೀತಿ ಗಳನ್ನು ಕಲಿಸಿ ಸತ್ಯದ ದಾರಿಯಲ್ಲಿ ನಡೆಸಿ ಎಂದು ಭಕ್ತರು ಬೇಡಿಕೊಳ್ಳುತ್ತಾರೆ.ಉದ್ದಾರ ೨ ಪಕ್ಕಸ್ಥಳ ಗಟ್ಟದ ದಾರಿಯಿಂದ ಕಡಲಿನ ವರೆಗೆ ಕಡೆಯಾಗಿ ನೋಡಿದರೆ ಕಾಣುವುದು ಉದ್ಯಾವರ.ನಾಲ್ಕು ಗ್ರಾಮದಿಂದ ಏಳು ಗ್ರಾಮದ ವರೆಗೆ ಮಾಪಾ ದೊಡ್ಡ ದೈವಗಳೇ ಅರಸು ದೈವಳು.ಪೊನ್ನೆ ಎಂಬ ತೀಥ೯ವೂ ತುಂಬಾ ಪುಣ್ಯವಾದ ತೀಥ೯ ಶುಕ್ರ ಮೂತಿ೯ಯವರೆಗೆ ಕಳಸದ ತೀಥ೯ ಕೂಕ್ಕೆ ಕುಡಾ ಎಂಬಲ್ಲಿ ತೋಡಿಸಿದ ಬಾವಿ ಹೊನ್ನ ಎಂಬ ಮಣ್ಣಿನ್ನಲ್ಲಿ ಇರುವ ಪುಣ್ಯವಾದ ಬಾವಿ.ತಲಪಾಡಿಯಿಂದ ಮಂಜೇಶ್ವರದ ಮಧ್ಯಭಾಗದಲ್ಲಿ ಇರುವುದು.ಅರಸು ದೈವಗಳು ಕಣ್ಣಸಿರಿ ಎಂಬ ಕಟ್ಟೆ ಯಲ್ಲಿ ದೈವಗಳು ಆಯಾಸ ನೀಗಿಸಲು ಕುಳಿತರು.ಬಾಯಾರಿಕೆಯಾದಾಗ ದಣಿವಾರಿಸಲು ಹೊನ್ನೆ ಎಂಬ ಸ್ಥಳದಲ್ಲಿ ನೀರು ತರಲು ಹೋದ ಹೆಂಗಸು ಬರದಿದ್ದಾಗ ಸ್ವತಹ ದೈವಗಳೇ ಬಾವಿಯನ್ನು ತೋಡಿಸಿ ನೀರನ್ನು ಕುಡಿದರು.ಅದನ್ನೇ ಪುಣ್ಯ ತೀಥ೯ವೆಂದು ಘೋಷಿಸಿದ್ದರು.ಆ ನೀರನ್ನೇ ಪುಣ್ಯ ತೀಥ೯ವೆಂದು ಪ್ರಸಿದ್ಧವಾಯಾತು.ಅಲ್ಲಿ ಎಲ್ಲಾ ಜಾತಿಯವರಿಗೆ ಒಂದೊಂದು ಕತ೯ವ್ಯವಿದೆ.ಅದನ್ನು ಭಕ್ತರು ಭಕ್ತಿಯಿಂದ ಮಾಡುತ್ತಾರೆ. ಮುಂಗುಸಿ ಮತ್ತು ಹಾವು ,ಹುಲಿ ಮತ್ತು ಹಸುಗಳು ಅನ್ಯೋನ್ಯತೆಯಿಂದ ಇದ್ದರು.ಅದಕ್ಕೆ ದೈವಗಳು ಈ ಸ್ಥಳವೇ ಅವರಿಗೆ ಒಂದು ಪುಣ್ಯ ಸ್ಥಳವೆಂದು ತೋರಿ ಅಲ್ಲಿಯೇ ನೆಲೆಯಾದರು. ಎಪ್ರಿಲ್ ಎಂಟಕ್ಕೆ ಕುದಿ ಮುಹೂತ೯ವೂ ನಡೆಯುತ್ತದೆ. ಅರಸು ದೈವಗಳು ಶುಕ್ರವಾರ ಮಸೀದಿಗೆ ಭೇಟಿಯಾಗಲೂ ಹೋಗುತ್ತಾರೆ. ದೈವಗಳು ಮುಸ್ಲಿಂ ಬಾಂದವರನ್ನು ಜಾತ್ರೆಗೆ ಆಹ್ವಾನಿಸುತ್ತಾರೆ. ನಂತರ ಒಂದು ವಾರ ಕಳೆದು ದ್ವೆವಗಳ ಬಂಡಿಗೆ ಜಾತ್ರೆಗೆ ಸಜ್ಜಾಗಿಸಲು ಅನುವು ಕೊಡಲಾಗುತ್ತದೆ. ಅದನ್ನು ಪಾಪೆ ಬಂಗಾರ್ ಎಂದು ಕರೆಯುತ್ತಾರೆ. ಪುನಹ ಒಂದು ವಾರ ಕಳೆದು ಕೋಳಿ ಕುಂಟ ಮುಂಡದಾಯನ ದೈವಕ್ಕೆ ನಡೆಯುತ್ತದೆ. ಮೇ ಎಂಟು ತಾರಿಕಿನಂದು ಕೊಡಿ ಮರ ಏರುತ್ತದೆ. ಅದೇ ದಿನ ಭಗವತಿ ದೈವಗಳಿಗೆ ಭೇಟಿ ನಡೆಯುತ್ತದೆ. ನಂತರ ಕಂಚಲ ಸೇವೆ ನಡೆಯುತ್ತದೆ. ಜಾತ್ರೆಯ ಸಮಯದಲ್ಲಿ ಭಕ್ತರ ನ್ಯಾಯ ತೀಮಾ೯ನವನ್ನು ದೈವಗಳ ಸಮೂಹದಲ್ಲಿ ಸರಿಪಡಿಸಲು ಆಗುತ್ತದೆ.ಹತ್ತನೇ ತಾರೀಕಿನಿಂದ ಅಣ್ಣ ದೇವರ ನೇಮ ಹಾಗೂ ಭೇಟಿ ನಡೆಯುತ್ತದೆ.ಹನ್ನೊಂದನೇ ತಾರೀಕಿನಂದು ತಮ್ಮ ಮಾಡದ ಭೇಟಿ ನಡೆಯುತ್ತದೆ.೧೪ನೇ ತಾರೀಕಿನಂದು ಸಂಕ್ರಾಂತಿ ದಿನದಂದು ಕೊಡಿ ಇಳಿಯುವುದು.೨೩ ಅಥವ ೨೪ನೇ ತಾರೀಕಿನಂದು ಕೊಡಿ ಮರ ಇಳಿಯುತ್ತದೆ.ಇಲ್ಲಿಗೆ ಈಗಲೂ ಭಕ್ತರು ಬರುತ್ತಾ ಇರುತ್ತಾರೆ.
സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - കഥ |
- അക്ഷരവൃക്ഷം പദ്ധതിയിലെ സൃഷ്ടികൾ
- കാസർഗോഡ് ജില്ലയിലെ അക്ഷരവൃക്ഷം-2020 സൃഷ്ടികൾ
- മഞ്ചേശ്വരം ഉപജില്ലയിലെ അക്ഷരവൃക്ഷം-2020 സൃഷ്ടികൾ
- അക്ഷരവൃക്ഷം പദ്ധതിയിലെ കഥകൾ
- കാസർഗോഡ് ജില്ലയിലെ അക്ഷരവൃക്ഷം കഥകൾ
- കാസർഗോഡ് ജില്ലയിലെ അക്ഷരവൃക്ഷം സൃഷ്ടികൾ
- മഞ്ചേശ്വരം ഉപജില്ലയിലെ അക്ഷരവൃക്ഷം-2020 കഥകൾ
- കാസർഗോഡ് ജില്ലയിൽ 05/ 05/ 2020ന് ചേർത്ത അക്ഷരവൃക്ഷം സൃഷ്ടികൾ
- അക്ഷരവൃക്ഷം 2020 പദ്ധതിയിൽ നാലാം ഘട്ടത്തിൽ പരിശോധിച്ച സൃഷ്ടികൾ
- അക്ഷരവൃക്ഷം 2020 പദ്ധതിയിൽ നാലാംഘട്ടത്തിൽ പരിശോധിച്ച കഥ
- അക്ഷരവൃക്ഷം 2020 കന്നട രചനകൾ