എസ് എസ് എ യു പി എസ് ചേവാർ(ಎಸ್.ಎಸ್.ಎ.ಯು.ಪಿ.ಎಸ್ ಚೇವಾರು)
എസ് എസ് എ യു പി എസ് ചേവാർ(ಎಸ್.ಎಸ್.ಎ.ಯು.ಪಿ.ಎಸ್ ಚೇವಾರು) | |||
Established | |||
School Code | |||
Place | Kumbala | ||
Address | |||
PIN Code | |||
School Phone | |||
School Email | |||
Web Site | |||
District | Kasargod | ||
Educational District | Kasargod | ||
Sub District | Manjeshwaram
| ||
Catogery | |||
Type | General | ||
Sections | |||
Medium | Kannada | ||
No of Boys | |||
No of Girls | |||
Total Students | |||
No of Teachers | |||
Principal | |||
Head Master | |||
P.T.A. President | |||
പ്രോജക്ടുകൾ | |||
---|---|---|---|
E-Vidhyarangam | Help | ||
19/ 01/ 2017 ന് 11264 ഈ താളിൽ അവസാനമായി മാറ്റം വരുത്തി |
അക്ഷരവൃക്ഷം | സഹായം |
ചരിത്രം (ಇತಿಹಾಸ)
ಚರಿತ್ರೆ- ಶ್ರೀ ಶಾರದಾ ಎ.ಯು.ಪಿ.ಶಾಲೆ ಚೇವಾರು,ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಡಾಲುಮೇರ್ಕಳ ಗ್ರಾಮದ ಚೇವಾರಿನಲ್ಲಿ 1920ನೇ ಇಸವಿಯಲ್ಲಿ ಸ್ಥಾಪನೆಯಾಯಿತು.I ರಿಂದ VII ರ ತನಕ ಕನ್ನಡ ಮಾಧ್ಯಮದಲ್ಲಿ ತರಗತಿಗಳಿದ್ದು,ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಇತರ ವಿಷಯಗಳೊಂದಿಗೆ ಅರೆಬಿಕ್,ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಉರ್ದು,ಸಂಸ್ಕೃತ ಭಾಷೆಗಳನ್ನುಕಲಿಯುತ್ತಿರುವ ಸುಮಾರು 151ರಷ್ಟು ವಿದ್ಯಾರ್ಥಿಗಳು,12 ಮಂದಿ ಅಧ್ಯಾಪಕ ಅಧ್ಯಾಪಿಕೆಯರಿಂದ ಮಾರ್ಗ ದರ್ಶನ ಪಡೆಯುತ್ತಿದ್ದಾರೆ. ದಿIಶ್ರೀ ಶ್ಯಾಮ ಭಟ್ಚರು ಸ್ಥಾಪಕ ವ್ಯವಸ್ಥಾಪಕರಾಗಿದ್ದು ಪ್ರಕೃತ ಅವರ ಪುತ್ರ ಶ್ರೀ ನಾರಾಯಣ ಭಟ್ಟರು 27 ವರ್ಷಗಳಷ್ಟು ಕಾಲ ಮುಖ್ಯೊಪಾಧ್ಯಾಯರಾಗಿ,ಅನುಭವಸ್ಥ ವ್ಯವಸ್ಥಾಪಕರಾಗಿರುವರು. ಆಧುನಿಕ ಸ್ಪರ್ಧಾತ್ಮಕ ಕಂಪ್ಯೂಟರ್ ಯುಗವಾದ ಇಂದು ಹಿಂದಿನ ಕಾಲಕ್ಕಿಂತಲೂ ಬಹಳ ಶೀಘ್ರ ಗತಿಯಲ್ಲಿ ಮುಂದುವರಿಯುತ್ತಿರುವಾಗ,ಇದನ್ನು ಅನುಸರಿಸಿ,ವಿದ್ಯಾಭ್ಯಾಸ ಕ್ಷೇತ್ರದಲ್ಲೂ ಸಕಾರಾತ್ಮಕ ಬದಲಾವಣೆ ತರ ಬೇಕಾದ್ದು ನಮ್ಮ ಕರ್ತವ್ಯವಾಗಿದೆ.ಈ ಉದ್ದೇಶದ ಈಡೇರಿಕೆಗಾಗಿ ನಮ್ಮ ಸಂಸ್ಥೆಯು,ಒಂದು ಪರಿಪೂರ್ಣ ಸಂಪದ್ಭರಿತ ವಿದ್ಯಾ ಸಂಸ್ಥೆಯಾಗಬೇಕೆಂದು ತಕ್ಕ ಯೋಜನೆಯನ್ನು ಕೈಗೊಂಡಿದ್ದು.ಇದಕ್ಕಾಗಿ ಅಧ್ಯಾಪಕ ವೃಂದ,ರಕ್ಷಕರು,ಸಮಾಜ ಬಾಂದವರು ಕೈ ಜೋಡಿಸಿಗೊಂಡು ಮುನ್ನಡೆಯತ್ತ ಸಾಗುತ್ತಿದೆ.
ഭൗതികസൗകര്യങ്ങള് (ಭೌತಿಕ ಸೌಕರ್ಯಗಳು)
പാഠ്യേതര പ്രവര്ത്തനങ്ങള് (ಪಾಠ್ಯೇತರ ಚಟುವಟಿಕೆಗಳು)
ಪಾಠ್ಯೇತರ ಚಟುವಟಿಕೆಗಳು- ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಗುರಿ ನಮ್ಮದಾಗಿದ್ದು,ಕಲೋತ್ಸವ,ಆಟೋಟ,ವೃತ್ತಿ ಪರಿಚಯ ಮೇಳ,ಗಣಿತ,ವಿಜ್ಞಾನ,ಸಮಾಜಮೇಳ,ವಿದ್ಯಾರಂಗ,ಸ್ಕೌಟ್-ಗೈಡ್, ವಿವಿಧ ಶಿಬಿರಗಳಲ್ಲಿ ಮಕ್ಕಳಿಗೆ ಭಾಗವಹಿಸಲು ಮುಕ್ತ ಅವಕಾಶ ಲಭಿಸುತ್ತಿದ್ದು,ಪ್ರಶಸ್ತಿ,ಬಹುಮಾನಗಳನ್ನು ಪಡೆಯುತ್ತಿದ್ದಾರೆ.ಶಾಲೆಯು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆದಿರುತ್ತದೆ. ಕಲಿಕೆಯ ಅಂಗವಾಗಿ,ಶಾಲಾ ಮಟ್ಟದ, ವಿವಿಧ ದಿನಾಚರಣೆಗಳನ್ನು, ಔಚಿತ್ಯ ಪೂರ್ಣವಾಗಿ ಆಚರಿಸಿ,ಮಕ್ಕಳ ಸರ್ವಾಂಗೀಣ, ಜ್ಞಾನ ಅಭಿವೃದ್ಧಿಯಾಗುವಂತೆ ಮಾಡಲಾಗಿದೆ.ಓದುವ ವಾರಾಚರಣೆ,ಪರಿಸರ ದಿನಾಚರಣೆ,ಜನಸಂಖ್ಯಾ ದಿನಾಚರಣೆ,ಸ್ವಾತಂತ್ತ್ಯೋತ್ಸವ,ಓಣಂ ಹಬ್ಬ,ಶಿಕ್ಷಕರ ದಿನ,ಗಾಂಧೀ ಜಯಂತಿ,ವಿಶ್ವ ಆಹಾರ ದಿನ,ವಿಶ್ವ ಬಿದಿರು ಸಸ್ಯ ದಿನ,ತೆಂಗು ದಿನ,ವಿಶ್ವ ಹೃದಯ ದಿನ,ಅಂಚೆ ದಿನ,ರಾಷ್ಟ್ರೀಯ ವಿಜ್ಞಾನ ದಿನ,ಜನವರಿ 26ರ ಗಣರಾಜ್ಯೋತ್ಸವ,ಹೀಗೆ ಎಲ್ಲ ದಿನಾಚರಣೆಗಳನ್ನು ವಿವಿಧ ಕ್ಲಬ್ಗಳ,ಸೂಕ್ತಸಹಕಾರದೊಂದಿಗೆ,ಆಯೋಜಿಸಿ,ವಿದ್ಯಾರ್ಥಿಗಳಲ್ಲಿ ಪ್ರಜಾ ಪ್ರಭುತ್ವದ, ಬಾಲ ಪಾಠವನ್ನು ವರ್ಧಿಸಲು ಶ್ರಮಿಸುತ್ತಿದ್ದೇವೆ.ಪಾಠೇತರ ಚಟುವಟಿಕೆಗಳ ಅಂಗವಾಗಿ,ಶಾಲಾ ಮಟ್ಟದ ಕಲೋತ್ಸವ,ವಿದ್ಯಾರಂಗಸಾಹಿತ್ಯೋತ್ಸವ,ಸಂಸ್ಕೃತೋತ್ಸವ,ಗಣಿತ,ವಿಜ್ಞಾನ,ಸಮಾಜ,ವೃತ್ತಿ ಪರಿಚಯ ಹಾಗೂಐ.ಟಿ.ಮೇಳ,ಕ್ರೀಡಾ ಕೂಟ,ಜ್ಞಾನ ಮಟ್ಟವನ್ನು ಹೆಚ್ಚಿಸುವ,ರಸಪ್ರಶ್ನಾ ಕಾರ್ಯಕ್ರಮ,ಗಣಿತೋತ್ಸವ,ಮೆಟ್ರಿಕ್ ಮೇಳ,ಬಾಲ ವಿಜ್ಞಾನ ಕಾಂಗ್ರೆಸ್,ಗುಂಪೆಗೊಂದು ಪ್ರವಾಸ,ಸ್ಕೌಟ್-ಗೈಡ್ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ,ಮಕ್ಕಳ ಮನೋ ವಿಕಾಸಕ್ಕೆ ಆದ್ಯತೆ ನೀಡುತ್ತಿದ್ದೇವೆ.
മാനേജ്മെന്റ് (ಆಡಳಿತ ವರ್ಗ)
ವ್ಯವಸ್ಥಾಪಕರು-ಸರಕಾರಿ ಅನುದಾನಿತ ಶಾಲೆಯಿದಾಗಿದ್ದು,ಶ್ರೀ ಬಿ.ಶ್ಯಾಮ್ ಭಟ್ ಸ್ಥಾಪಕರಾಗಿದ್ದಾರೆ.ಪ್ರಸ್ತುತ ಶ್ರೀ ಬಿ.ನಾರಾಯಣ ಭಟ್ ರ ನೇತೃತ್ವದಲ್ಲಿ ಶಾಲಾ ಆಡಳಿತ ನಡೆಯುತ್ತಿದೆ.
മുന്സാരഥികള് (ಹಿಂದಿನ ಮುಖ್ಯೋಪಾಧ್ಯಾಯರುಗಳು)
ಹಿಂದಿನ ಸಾರಥಿಗಳು- ಶ್ರೀ ಬಿ.ಶ್ಯಾಮ್ ಭಟ್ ಪ್ರಥಮ ಮುಖ್ಯೋಪಾಧ್ಯಾಯರಾಗಿದ್ದರು.ನಂತರ ಶ್ರೀ ಬಿ.ನಾರಾಯಣ ಭಟ್ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು. ತದ ನಂತರ ಶ್ರೀ ಜನಾರ್ಧನ ಮಾಸ್ಟರ್,ಶ್ರೀಮತಿ ಲಕ್ಷ್ಮೀ.ಬಿ, ಶ್ರೀ ವೆಂಕಟ್ರಮಣ ಭಟ್, ಶ್ರೀ ಈಶ್ವರ ಭಟ್ ಮುಖ್ಯೋಪಾಧ್ಯಾಯರಾಗಿದ್ದರು.ಪ್ರಸ್ತುತ ಶ್ರೀ ಶ್ಯಾಮ ಭಟ್ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
പ്രശസ്തരായ പൂര്വവിദ്യാര്ത്ഥികള് (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)
ಉನ್ನತ ಹುದ್ದೆ ಹೊಂದಿದ ಹಳೆ ವಿದ್ಯಾರ್ಥಿಗಳು-
ನಮ್ಮೀ ಶಾಲೆಯಲ್ಲಿ ಅಧ್ಯಯನ ಮಾಡಿ ಇಂದು ಉನ್ನತ ಹುದ್ದೆಯನ್ನು ಅಲಂಕರಿಸಿದ ಹಲವು ವಿದ್ಯಾರ್ಥಿಗಳಲ್ಲಿ ಪ್ರಮುಖರು,ಡಾ.ಬಿ.ಜಯರಾಮ್ ಭಟ್,ಕುವೆಂಪು ಯುನಿವರ್ಸಿಟಿಯ ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.