G. L. P. S Majibail/പ്രവർത്തനങ്ങൾ

Schoolwiki സംരംഭത്തിൽ നിന്ന്

Praveshanoltsavam 2022-23

Praveshanoltsavam 2022-23

ಜಿ ಎಲ್ ಪಿ ಶಾಲೆ ಮಜಿಬೈಲಿನಲ್ಲಿ ಮಿಂಜ ಪಂಚಾಯತ್ ಮಟ್ಟದ ಶಾಲಾ ಪ್ರವೇಶೋತ್ಸವ ಜೂನ್ 1 ರಂದು ಜರಗಿತು. ಪಂಚಾಯತ್ ಮಟ್ಟದ ಶಾಲಾ ಪ್ರವೇಶೋತ್ಸವ ದ ಪ್ರಯುಕ್ತ ಶಾಲೆಯನ್ನು ತೋರಣಗಳಿಂದ ಅಲಂಕರಿಸಲಾಗಿತ್ತು. ಎಲ್ಲಾ ಹೆತ್ತವರು ಮತ್ತು ಊರಿನವರು ಮತ್ತು ಸಂಘ-ಸಂಸ್ಥೆಯವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆ 10:00 ಗಂಟೆಗೆ ಎಲ್ಲಾ ಮಕ್ಕಳಿಗೂ ರಾಜ್ಯಮಟ್ಟದ ಶಾಲಾ ಪ್ರವೇಶ ಕಾರ್ಯಕ್ರಮವನ್ನು ಕೈಟ್ ವಿಕ್ಚರ್ಸ್ ಚಾನೆಲ್ ನಲ್ಲಿ  ತೋರಿಸಲಾಯಿತು. ಆ ಬಳಿಕ ಮಕ್ಕಳು ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಎಲ್ಲರ ಮನರಂಜಿಸಿದರು. ಆ ಬಳಿಕ ನವಾಗತ ಮಕ್ಕಳನ್ನು ಅದ್ದೂರಿಯಿಂದ ಶಾಲಾ ಪ್ರವೇಶೋತ್ಸವ ನಡೆಸಲಾಯಿತು. ವಾರ್ಡ್ ಮೆಂಬರ್ ಶ್ರೀಮತಿ ಆಶಾಲತಾ ಬಿ.ಯಂ , ಮೀಂಜ ಪಂಚಾಯತು ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಹಾಗೂ ಹಲವು ಮಂದಿ ವಾರ್ಡ್ ಮೆಂಬರ್ ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಮಕ್ಕಳ ಶಾಲಾ ಪ್ರವೇಶೋತ್ಸವದ ನಂತರ ಸಭಾ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಸುರೇಶ್ ಬಂಗೇರ ಸರ್ ಅವರು ಸ್ವಾಗತ ಭಾಷಣ ಗೈದರು. ವಾರ್ಡ್ ನಂಬರ್ ಆಶಾಲತ ಬಿಎಂ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ವೆಂಜರ್ ಕೇಶನ್ ಕಮಿಟಿಯ ಸದಸ್ಯರಿಗೆ ಹಲವಾರು ಮಂದಿ ಉಪಸ್ಥಿತಿಯಿಂದ ಸಭಾ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು ಎಲ್ಲರೂ ಕಾರ್ಯಕ್ರಮಕ್ಕೆ ಹೃದಯದ ಅಭಿನಂದನೆಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನವಾಗತ ಮಕ್ಕಳಿಗೆ ಊರಿನ ಹಲವಾರು ದಾನಿಗಳು ಉಚಿತವಾಗಿ ವಿದ್ಯಾಭ್ಯಾಸ ಕಿಟ್ ನೀಡಿದರು. ಮಜಿಬೈಲ್ ಸರ್ವಿಸ್ ಕೋ ಅಪರೇಟಿವ್ ಬ್ಯಾಂಕಿನ ವತಿಯಿಂದ ಎಲ್ಲಾ ನಮ್ಮ ಗತ ಮಕ್ಕಳಿಗೆ ಬ್ಯಾಗನ್ನು ನೀಡಲಾಯಿತು. ಶ್ರೀ ರಾಜೇಶ್ ಮಜಿಬೈಲ್, ಶ್ರೀ ದಯಾನಂದ ಮಜಿಬೈಲ್, ಆಲಿ ಮಜಿಬೈಲ್, ಖಲೀಮ್ ಹಿಂದಿ ಮಹನೀಯರು ಭಾಗದ ಮಕ್ಕಳಿಗೆ ವಿದ್ಯಾಭ್ಯಾಸ ಅನುಕೂಲವಾಗುವ ಪುಸ್ತಕ ಪೆನ್ನು ,ಪೆನ್ಸಿಲ್ ಗಳನ್ನೊಳಗೊಂಡ  ಕಿಟ್ ಗಳನ್ನು ಉಚಿತವಾಗಿ ನೀಡಿದರು. ಶಾಲಾ ಅಧ್ಯಾಪಕ ದೇವಾನಂದ ಅವರು ನಿರೂಪಿಸಿದ ಕಾರ್ಯಕ್ರಮವು ಬಿ.ಆರ್.ಸಿಯ ಸಿ.ಆರ್. ಸಿ ಕೋರ್ಡಿನೇಟರ್ ಮೋಹಿನಿ ಟೀಚರ್ ಅವರ ಧನ್ಯವಾದ ರೊಂದಿಗೆ ಮುಕ್ತಾಯವಾಯಿತು.

സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

ಶಾಲಾ ಪ್ರವೇಶೋತ್ಸವ 2023-24

"https://schoolwiki.in/index.php?title=G._L._P._S_Majibail/പ്രവർത്തനങ്ങൾ&oldid=2185094" എന്ന താളിൽനിന്ന് ശേഖരിച്ചത്