ഉപയോക്താവ്:11213
ಕುಳೂರು ಶಾಲೆಯಲ್ಲಿ ಮೀಂಜ ಪಂಚಾಯತ್ ಮಟ್ಟದ ಶಾಲಾ ಪ್ರವೇಶೋತ್ಸವ :

ಮಂಜೇಶ್ವರ : 2026-27 ನೇ ಶೈಕ್ಷಣಿಕ ವರ್ಷದ ಮೀಂಜ ಪಂಚಾಯತ್ ಮಟ್ಟದ ಶಾಲಾ ಪ್ರವೇಶೋತ್ಸವವು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಜರಗಿತು.
ಕಾರ್ಯಕ್ರಮವು ನವಾಗತ ಮಕ್ಕಳನ್ನು ಸ್ವಾಗತಿಸುವ ಆಕರ್ಷಕ ಮೆರವಣಿಗೆಯ ಮೂಲಕ ಆರಂಭವಾಯಿತು. ಬಳಿಕ ನಡೆದ ಉದ್ಘಾಟನಾ ಸಮಾರಂಭವನ್ನು ಮೀಂಜ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀ ತಾಜುದ್ದೀನ್ ರವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೀಂಜ ಗ್ರಾಮ ಪಂಚಾಯತಿನ ಉಪಾಧ್ಯಕ್ಷೆ ಶ್ರೀಮತಿ ಉಷಾ ಪೂಂಜ, ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷರಾದ ಶ್ರೀ ಕೃಷ್ಣ ಬೆಜ್ಜ, ಕ್ಷೇಮಾಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆಯಾದ ಶ್ರೀಮತಿ ಸೌಮ್ಯ, ಕುಳೂರು ವಾರ್ಡ್ ಸದಸ್ಯರಾದ ಶ್ರೀಮತಿ ಶರ್ಮಿಳ ಎಂ ಶೆಟ್ಟಿ ಚಾರ್ಲ, ಪಂಚಾಯತ್ ಸದಸ್ಯರಾದ ಶ್ರೀ ಶರೀಫ್ ಚಿನಾಲ, ಶ್ರೀಮತಿ ಶಾಲಿನಿ ಶೆಟ್ಟಿ, ಮಂಜೇಶ್ವರ ಬಿ.ಆರ್.ಸಿ. ಯ ಸಿ.ಆರ್.ಸಿ. ಕೋರ್ಡಿನೇಟರ್ ಶ್ರೀಮತಿ ಮೋಹಿನಿ ಆಗಮಿಸಿದ್ದರು.
ಪಂಚಾಯಿತಿನ ಮಾಜಿ ಸದಸ್ಯರಾದ ಶ್ರೀ ಬಾಲಪ್ಪ ಬಂಗೇರ ಹಾಗೂ ಶ್ರೀ ಜನಾರ್ಧನ ಪೂಜಾರಿ ಕುಳೂರು, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಹಾಜಿ ಕಂಚಿಲ, ಉಪಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಶೆಟ್ಟಿ ಪೊಯ್ಯೇಲು, ಹಿರಿಯ ಸದಸ್ಯರಾದ ಶ್ರೀ ಚಿಕ್ಕಪ್ಪ ಶೆಟ್ಟಿ ಎಲಿಯಾಣ, ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಕವಿತಾ ದೇರಂಬಳ, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಪ್ರಿಯಾಂಕ ಕೇಮಜಲ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಶಾಲೆಗೆ ನೂತನವಾಗಿ ಸೇರ್ಪಡೆಯಾದ ನವಾಗತ ಮಕ್ಕಳಿಗೆ ಪುಸ್ತಕ, ಬ್ಯಾಗ್, ಸಮವಸ್ತ್ರ, ಹಾಗೂ ಕಲಿಕೋಪಕರಣಗಳನ್ನು ವಿತರಿಸಲಾಯಿತು. ಪ್ರೀ ಪ್ರೈಮರಿ ಮಕ್ಕಳಿಗೆ ಪಾಠ ಪುಸ್ತಕ ಹಾಗೂ ಸಮವಸ್ತ್ರವನ್ನು ಶಾಲಾ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಕೊಡುಗೆಯಾಗಿ ನೀಡಿದರು. ಪ್ರೀ ಪ್ರೈಮರಿ ಮತ್ತು ಒಂದನೇ ತರಗತಿ ಮಕ್ಕಳಿಗೆ ಬ್ಯಾಗ್ ಹಾಗೂ ಆಟದ ಸಾಮಾಗ್ರಿಯನ್ನು ಶ್ರೀಮತಿ ಅಶ್ವಿನಿ ಜಯಪ್ರಶಾಂತ್ ಪಾಲೆಂಗ್ರಿ ಕೊಡುಗೆಯಾಗಿ ನೀಡಿದರು. ಮಧ್ಯಾಹ್ನದೂಟದ ಪ್ರಾಯೋಜಕತ್ವವನ್ನು ಶ್ರೀಮತಿ ಜಲಜ ಶಶಿಧರ ಶೆಟ್ಟಿ ಪೊಯ್ಯೇಲು ಹಾಗೂ ಲಘು ಉಪಹಾರವನ್ನು ಶಾಲಾ ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕ ವೃಂದ ವಹಿಸಿದ್ದರು. ಪ್ರಾಯೋಜಕತ್ವ ವಹಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಲಾಯಿತು.
ಶಾಲಾ ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ನಯನ ಎಂ ವಂದಿಸಿದರು. ಶಾಲಾ ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕಯರಾದ ಶ್ರೀಮತಿ ಅಶ್ವಿನಿ ಎಂ ಹಾಗೂ ಶ್ರೀಮತಿ ಶ್ವೇತ ಇ, ಹಳೆ ವಿದ್ಯಾರ್ಥಿ ಸಂಘದ ಜತೆ ಕಾರ್ಯದರ್ಶಿ ಶ್ರೀ ಶೇಖ್ ಅಬ್ದುಲ್ ಮಜೀದ್ ಚಾರ್ಲ, ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರಾದ ಶ್ರೀಮತಿ ಶ್ವೇತ ಕೇಮಜಲ್ ಸಹಕರಿಸಿದರು. ಶ್ರೀ ಸದಾಶಿವ ಕಣ್ವತೀರ್ಥರವರು ಮಕ್ಕಳಿಗೆ ಸಿಹಿತಿಂಡಿ ವಿತರಿಸಿದರು.