Jump to content
സഹായം

"എ യു പി എസ് ബാക്കര ബൈൽ(ಎ.ಯು.ಪಿ.ಎಸ್ ಬಾಕ್ರಬೈಲು)" എന്ന താളിന്റെ പതിപ്പുകൾ തമ്മിലുള്ള വ്യത്യാസം

No edit summary
വരി 26: വരി 26:
| School_Photo=11256.jpg|
| School_Photo=11256.jpg|
}}
}}
== SCHOOL HISTORY ==
== SCHOOL HISTORY ==ಎ.ಯು.ಪಿ.ಶಾಲೆ ಬಾಕ್ರಬೈಲು
ಶಾಲೆಯ ಹೆಸರು                      :  ಎ.ಯು.ಪಿ.ಶಾಲೆ ಬಾಕ್ರಬೈಲು
ಗ್ರಾಮದ ಹೆಸರು                      : ಪಾತೂರು
ಕ್ಲಸ್ಟರಿನ ಹೆಸರು                        : ವರ್ಕಾಡಿ
ಪಂಚಾಯತಿನ ಹೆಸರು                : ವರ್ಕಾಡಿ
ಬ್ಲಾಕಿನ ಹೆಸರು                        : ಮಂಜೇಶ್ವರ
ಮುಖ್ಯೋಪಾಧ್ಯಾಯರ  ಹೆಸರು      : ಪಿ.ಬಿ. ಶ್ರೀನಿವಾಸ ರಾವ್  ( 9387120429 )
  ಮುನ್ನುಡಿ :
        ಬಾಕ್ರಬೈಲು  ಎ.ಯು.ಪಿ.ಶಾಲೆಯು  ವರ್ಕಾಡಿ ಗ್ರಾಮ ಪಂಚಾಯತಿನ 7 ನೇ ವಾರ್ಡಿನ ಪಾತೂರು ಗ್ರಾಮದ ಬಾಕ್ರಬೈಲು ಎಂಬಲ್ಲಿದೆ. ಬಾಕ್ರಬೈಲು, ಪಾತೂರು, ತಲೆಕ್ಕಿ, ನಡಿಬೈಲು, ಕಜೆ, ಆರ್ವಾರ್, ಮಾಂಡೆಲ್, ಡಿಪ್ಪ ಎಂಬಿತ್ಯಾದಿ ಪ್ರದೇಶಗಳ ಮಕ್ಕಳು ಈ ಶಾಲೆಯನ್ನು ಆಶ್ರಯಿಸಿರುತ್ತಾರೆ. ಬದಿಮಲೆ, ನಡಿಬೈಲು, ಕಜೆ, ತಲೆಕ್ಕಿ ಎಂಬೀ ಅಂಗನವಾಡಿಗಳನ್ನು ಬಿಟ್ಟರೆ ಮತ್ತೆ ಯಾವುದೇ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಈ ವಿದ್ಯಾಲಯದಲ್ಲಿ ಶಿಕ್ಷಣ ಮುಂದುವರಿಸಲು ಆಶ್ರಯಿಸುತ್ತಿಲ್ಲ. ಅದರೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದ ಗಡಿ ಪ್ರದೇಶದ ಶಾಲೆಗಳಿಂದ ಮಕ್ಕಳು ಈ ಶಾಲೆಗೆ ವರ್ಗಾವಣಾ ಪತ್ರದ ಮೂಲಕ ಸೇರ್ಪದೆಗೊಂಡಂತಹ ವಿಚಾರ ನಮ್ಮ ಶಾಲೆಯ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರ ಬಗ್ಗೆ ಸಾಕ್ಷಿಯಾಗಿದೆ.
        ಕ್ರಿ.ಶ 1897ರಲ್ಲಿ ಪ್ರಸ್ತುತ ಶಾಲೆ ಇರುವುದಕ್ಕಿಂತ ಸುಮಾರು 1 ಕಿ.ಮೀ ದೂರದಲ್ಲಿ ನಡಿಬೈಲಿನ ಪಳ್ಳದ ಬಳಿ ಅಂದಿನ ಬಾಕ್ರಬೈಲಿನ ಹೆಸರಾಂತ ಬಂಟರ ಶ್ರೀಮಂತ ಮನೆತನದವರು ಮುಳಿ ಛಾವಣಿಯ ಸಣ್ಣ ಕಟ್ಟಡದಲ್ಲಿ ಈ ಶಾಲೆಯನ್ನು ಪ್ರಾರಂಭಿಸಿದರು. ಆ ಕಾಲಘಟ್ಟದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಕ್ಕಳು ಹಾಗೂ ಓರ್ವ ಅಧ್ಯಾಪಕರು ಈ ವಿದ್ಯಾಲಯದಲ್ಲಿ ಇದ್ದರು. ಕೆಲವು ವರ್ಷಗಳ ಬಳಿಕ ದಿ| ರಾಮಯ್ಯ ಅಡಪರ ನೇತೃತ್ವದಲ್ಲಿ ಈಗಿನ ಸ್ಥಳದಲ್ಲಿ ಬಾಕ್ರಬೈಲು ಮನೆತನದವರು ಹೊಸ ಕಟ್ಟಡವನ್ನು ನಿರ್ಮಿಸಿ ಶಾಲೆಯನ್ನು ಸ್ಥಳಾಂತರಿಸಿದರು. ಹೊಸ ಕಟ್ಟಡದಲ್ಲಿ ಶಾಲೆ ನಿರಂತರ ಅಭಿವೃದ್ಧಿ ಪಥದಲ್ಲಿ ಸಾಗಿತ್ತಲ್ಲದೆ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿತ್ತು. ಬಾಕ್ರಬೈಲು ಮನೆತನದ ಹಲವಾರು ಮಂದಿ ತಮ್ಮ ಕುಟುಂಬದ ಹಿರಿಮೆಯನ್ನು ಬಿಟ್ಟು ಅಳಿಯ ಪದ್ಧತಿಗೆ ಪೂರಕವಾಗಿ ಬೇರೆಬೇರೆ ಕಡೆಗಳಲ್ಲಿ ಇರುವ ಆಸ್ತಿಗಳಲ್ಲಿ ವಾಸಿಸಲು ಪ್ರಾರಂಭಿಸಿದಾಗ ಶಾಲೆಯ ಮೇಲ್ವಿಚಾರಣೆಯನ್ನು ಶಾಲಾ ಅಧ್ಯಾಪಕರಾದ ಹತ್ತುಮುಡಿ ಜಿ. ಶಂಕರನಾರಾಯಣಪ್ಪಯ್ಯರಿಗೆ ವಹಿಸಿಕೊಟ್ಟರು. ಮುಂದೆ ಅವರು ಶಾಲಾ ಮೆನೇಜರ್ ಮತ್ತು ಮುಖ್ಯೋಪಾಧ್ಯಾಯರಾದರು. ಹೀಗೆ ಶಾಲೆಯನ್ನು ಅಭಿವೃದ್ಧಿ ಪಥದತ್ತ ಸಾಗಿಸುವಲ್ಲಿ ಇವರ ಪಾತ್ರ ಅವಿಸ್ಮರಣೀಯವಾಗಿದೆ. 1967ರಲ್ಲಿ ಈ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ VI & VII ತರಗತಿಗಳಾಗಿ ಭಡ್ತಿಗೊಂಡಿತು. ಪ್ರಸ್ತುತ ಈ ಶಾಲೆಯಲ್ಲಿ 38೦ ವಿದ್ಯಾರ್ಥಿಗಳೂ 17 ಅಧ್ಯಾಪಕರು ಕಾರ್ಯ ನಿರ್ವಹಿಸುತ್ತಿದ್ದಾರೆ.


== INFRASTRUCTURE ==
== INFRASTRUCTURE ==
14

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/306416" എന്ന താളിൽനിന്ന് ശേഖരിച്ചത്