എ യു പി എസ് ധർമ്മത്തടുക്ക(ಎ.ಯು.ಪಿ.ಎಸ್ ಧರ್ಮತ್ತಡ್ಕ)/സൗകര്യങ്ങൾ

Schoolwiki സംരംഭത്തിൽ നിന്ന്
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം
  • School bus
  • Computer Learning
  • Big Play Ground
  • Computer Lab
  • Mid Day meals
  • Free Uniform
  • Milk and Egg/Fruit

ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)[തിരുത്തുക | മൂലരൂപം തിരുത്തുക]

2.29 ಎಕರೆ ಸ್ಥಳದಲ್ಲಿ ಈ ವಿದ್ಯಾಲಯವು ಸ್ಥಾಪಿಸಲ್ಪಟ್ಟಿದೆ.ಶಾಲೆಯ ಒಂದು ಹಾಲ್ ಪ್ರಿ ಕೆ.ಇ.ಆರ್ ಕಟ್ಟಡವಾಗಿದ್ದು ಅದರಲ್ಲಿ ಯಲ್.ಪಿ.ವಿಭಾಗದ ನಾಲ್ಕು ತರಗತಿಗಳು ಕಾರ್ಯವೆಸಗುತ್ತಿವೆ. ಉಳಿದ ಮೂರು ಕಟ್ಟಡಗಳು ಹಾಲ್ ಗಳಾಗಿವೆ. ಅದರಲ್ಲಿ ಯು.ಪಿ.ವಿಭಾಗದ ತರಗತಿಗಳು (5,6,7) ನಡೆಯುತ್ತಿದೆ. ಶಾಲೆಯಲ್ಲಿ ಒಂದು ಕಂಪ್ಯೂಟರ್ ಲ್ಯಾಬ್ ಇದ್ದು ಒಂದು ಲ್ಯಾಪ್ ಟಾಪ್ , ನಾಲ್ಕು ಡೆಸ್ಕ್ ಟಾಪ್ ಕಂಪ್ಯೂಟರುಗಳು ಮತ್ತು ಒಂದು ಪ್ರಿಂಟರ್ ಇದೆ. ಶಾಲೆಗೆ ದೂರವಾಣಿ ಸಂಪರ್ಕವಿದ್ದು ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೌಕರ್ಯ ಇದೆ. ಇದು 2016 ನವೆಂಬರ್ ತಿಂಗಳಿನಿಂದ ಐಟಿ @ ಸ್ಕೂಲ್ ಯೋಜನೆಗೆ ಪರಿವರ್ತನೆಗೊಂಡಿದೆ.ಶಾಲೆಗೆ ವಿಶಾಲವಾದ ಆಟದ ಬಯಲು ಇದೆ. ಹುಡುಗರಿಗೂ ಹುಡುಗಿಯರಿಗೂ ಪ್ರತ್ಯೇಕವಾದ ಮೂತ್ರದೊಡ್ಡಿ ಹಾಗೂ ಪಾಯಿಖಾನೆಗಳು ಇವೆ. ಕುಡಿಯುವ ನೀರಿಗಾಗಿ ಒಂದು ಬಾವಿ ಇದ್ದು ಮೋಟಾರು ಸಹಾಯದಿಂದ ನೀರನ್ನು ಟಾಂಕಿಯಲ್ಲಿ ತುಂಬಿಸಿ ನಳ್ಳಿಗಳ ಮೂಲಕ ವಿತರಿಸಲಾಗುವುದು.ಒಂದು ತಾತ್ಕಾಲಿಕ ಶೆಡ್ಡಿನಲ್ಲಿ ಮಧ್ಯಾಹ್ನ ಬಿಸಿಯೂಟವನ್ನು ತಯಾರಿಸಿ ವಿತರಿಸಲಾಗುತ್ತಿದೆ.