എ എസ് ബി എസ് ഇച്ചിലമ്പാടി ಎ.ಎಸ್.ಬಿ.ಎಸ್.ಇಚ್ಲಂಪಾಡಿ/ചരിത്രം

Schoolwiki സംരംഭത്തിൽ നിന്ന്

ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ ಕಳತ್ತೂರು

ಕುಂಬಳೆ ಗ್ರಾಮ ಪಂಚಾಯತಿನ ಕಳತ್ತೂರಿನಲ್ಲಿ ಅರುವತ್ತು ವರ್ಷಕ್ಕೂ ಮಿಕ್ಕಿ ವಿದ್ಯಾದಾನದೊಂದಿಗೆ ಕಲೆ ವಿಜ್ಞಾನ ಸಾಹಿತ್ಯಗಳನ್ನು ಪ್ರೋತ್ಸಾಹಿಸುತ್ತಾ ಬೆಳೆದು ಬಂದಿರುವ ನಮ್ಮೆಲ್ಲರ ನೆಚ್ಚಿನ ವಿದ್ಯಾಮಂದಿರ ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ.

1941ರಲ್ಲಿ ಮೊಗ್ರಾಲ್ ದಿ| ಶಂಕರ ನಾರಾಯಣಪ್ಪಯ್ಯ, ಹಳೆಮನೆ ದಿ. ಪರಮೇಶ್ವರ ಭಟ್ಟ, ಕಟಾರೆ ದಿ. ಈಶ್ವರ ಭಟ್ಟ ಹಾಗೂ ಕಿದೂರು ಜ್ಯೋತಿಷಿ ದಿ, ಶಂಕರನಾರಾಯಣ ಭಟ್ಟ ಇವರ ಪ್ರಮುಖ ಮುಂದಾಳುತ್ವದಲ್ಲಿ ಊರ ಗಣ್ಯರ ಸಹಕಾರದೊಂದಿಗೆ ಮೊಗ್ರಾಲ್ ಆನಂದ ರಾಯರ ಮ್ಯಾನೇಜ್‌ಮೆಂಟಿನಲ್ಲಿ ಶಾಲೆಯು ಸ್ಥಾಪಿಸಲ್ಪಟ್ಟಿತು. 1943-44ರಲ್ಲಿ ಸೈನಿಕ ನೆಲೆಯಿಂದಾಗಿ 7ಸಂಪೂರ್ಣವಾಗಿ ಮುಚ್ಚಲ್ಪಟ್ಟರೂ ಮುಂದೆ ಇದೇ ಕಟ್ಟಡದಲ್ಲಿ ಮತ್ತೆ ದಿನಾಂಕ, 1-6 1940ರಲ್ಲಿ ಮೊಗ್ರಾಲಿನ ದಿ. ಶ್ರೀನಿವಾಸರಾಯರು ಶಾಲೆಯನ್ನು ಮರುಸ್ಥಾಪಿ, ಶಾಲಾ ಮ್ಯಾನೇಜರ್ ಹಾಗೂ ಮುಖ್ಯೋಪಾಧ್ಯಾಯರ ಸ್ಥಾನವನ್ನು ತುಂಬಿ ವಿದ್ಯಾಲಯದ ಸಾರಥಿಯಾದರು. ಆ ಸಮಯದಲ್ಲಿ ಕೇವಲ 56 ಮಂದಿ ವಿದ್ಯಾರ್ಥಿಗಳಿಗೆ 1ರಿಂದ 5ನೇ ತರಗತಿಯವರೆಗೆ ಬೊಧನೆಯನ್ನು ಪ್ರಾರಂಭಿಸಿದ. ಈ ವಿದ್ಯಾಲಯವು ಇಚ್ಚಂಪಾಡಿ ಕಿರಿಯ ಎಲಿಮೆಂಟರಿ ಶಾಲೆಯಾಗಿ ಮಾರ್ಪಡುಗೊಂಡು ಮುಂದುವರಿದು 1953ರಲ್ಲಿ ಒಂದು ಬುನಾದಿ ಶಾಲೆಯಾಗಿ ಮಾರ್ಪಟ್ಟು ''ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ"ಯಾಗಿ ನಾಮಾಂತರಗೊಂಡು, ಸರಕಾರದ ಸಹಕಾರದೊಂದಿಗೆ ತರಗತಿಗಳು ಖಾಯಂ ಆಗಿ ಮಂಜೂರಾಯಿತು. ಈ ನಡುವೆ 1963ರಲ್ಲಿ ತನ್ನೆಲ್ಲಾ ದಾಖಲೆ ಪತ್ರಗಳೊಂದಿಗೆ ಬೆಂಕಿಗಾಹುತಿಯಾದ ವಿದ್ಯಾಲಯವ ಮತ್ತೊಮ್ಮೆ ಊರವರ ಸಹಕಾರದೊಂದಿಗೆ ಎದ್ದು ನಿಂತಿತು. ಶಾಲಾ ಚಟುವಟಿಕೆಗಳ ಸಲುವಾಗಿ ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳಸಲು 1976ರಿಂದ "ಆರ್ಯಭಟ' ಎಂಬ ವಿಜ್ಞಾನ ಸಂಘವು ರೂಪುಗೊಂಡಿತು. 1995ರಲ್ಲಿ ಭಾಸ್ಕರ ವೃತ್ತವೆಂಬ ಗಣಿತ ಸಂಘವು ಕಾರ್ಯಾರಂಭ ಮಾಡಿತು. ಸೈಟ್, ಗೈಡ್, ಬುಲ್ ಬುಲ್, ಕಬ್ ದಳಗಳನ್ನು ಸ್ಥಾಪಿಸಿ ಮಕ್ಕಳಲ್ಲಿ ಶಿಸ್ತಿನ ಮನೋಭಾವನೆಯನ್ನು ಮೂಡಿಸಿ ಜಿಲ್ಲಾ ಮಟ್ಟದಿಂದ ಪ್ರಾಂತ್ಯ ಮಟ್ಟದವರೆಗೆ ವಿದ್ಯಾರ್ಥಿಗಳನ್ನು ಪಾಲ್ಗೊಳ್ಳುವಂತೆ ಮಾಡಿದ ಕೀರ್ತಿ ಈ ಶಾಲೆಗೆ ಇದೆ. 1995ರಲ್ಲಿ ಈ ಶಾಲೆ ಸುವರ್ಣ ಮಹೋತ್ಸವವನ್ನು ಆಚರಿಸಿತು. ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕಂಪ್ಯೂಟರ್‌ಗಳ ಮಹತ್ವವನ್ನು ಅರಿತುಕೊಂಡು, ಶಾಸಕರ, ರಕ್ಷಕದ ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಉತ್ತಮ ಕಂಪ್ಯೂಟರ್ ಲ್ಯಾಬನ್ನು ಸ್ಥಾಪಿಸಿರುತ್ತೇವೆ. 1ರಿಂದ 7ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದೊಂದಿಗೆ ಕಂಪ್ಯೂಟರ್ ಶಿಕ್ಷಣ ನೀಡುತ್ತಿದ್ದೇವೆ. ಹಾಗೂ LKG ಮತ್ತು UKGಯನ್ನು ಆರಂಭಿಸಿದ್ದೇವೆ. ಹೀಗೆ ನಮ್ಮಿ ಶಾಲೆಯು ಮಕ್ಕಳ ಸರ್ವತೋಮುಖ ಬೆಳವಣಿಗೆಗಳನ್ನು ಬಯಸಿಕೊಂಡು ಉತ್ತಮ ಶಿಕ್ಷಣವನ್ನು ನೀಡುತ್ತಿದೆ.

സ്കൂളിനെക്കുറിച്ച്സൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരങ്ങൾ