എസ് .ഡി. പി. എച്ച്. എസ്. ധർമ്മത്തടുക്ക/കുഞ്ഞെഴുത്തുകൾ/ ನನ್ನ ಶಾಲೆ
ನನ್ನ ಶಾಲೆ.
ಆಸೆಯಾಯಿತು ನನಗೂ ಶಾಲೆಯಲ್ಲಿ ಓದಲು ಹೋದೆ ನಾನು ಖುಷಿ ಖುಷಿಯಿಂದ ಕಲಿಯಲು ಕಂಡೆ ನಾನು ಅಲ್ಲಿ ಶಿಕ್ಷಕರು ಎಂಬ ದೇವರನ್ನು ಮೊದಲ ದಿನ ಮೊದಲ ಅಕ್ಷರ ಕಲಿತೆ ಅಲ್ಲಿಂದ ಚಿಗುರಿತು ನನ್ನ ಹೊಸ ಕನಸುಗಳು ನೋವು ನಲಿವುಗಳಿದ್ದ ಆ ಪಯಣ ಮರೆಯಲಾಗದು ಆ ಕ್ಷಣ ಮನಮುಟ್ಟುವಂತಹ ಆ ದಿನ ಸುಂದರವಾಗಿತ್ತು ಆ ಪಯಣ. ಇಂದು ನನ್ನ ಹೊಸದೊಂದು ಜೀವನದ ಆರಂಭ ಧರ್ಮದ ಅಡ್ಕದಲ್ಲಿ ನವ ಚೈತನ್ಯದ ಜೊತೆಗೆ ಪ್ರಾರಂಭ ಹೊಸ ಶಿಕ್ಷಣದ ಜೀವನ. ಹೇಗೋ ಕಳೆಯಿತು ಒಂದು ವರುಷ ಅದರಲ್ಲಿತ್ತು ಹಲವು ರೀತಿಯ ಹರುಷ ಇಂದು ತಲುಪಿದೆ ಪ್ರೌಢ ಜೀವನದ ಎರಡನೇ ವರುಷಕ್ಕೆ ಬಾಕಿ ಉಳಿದಿರುವುದು ಇನ್ನೊಂದು ವರ್ಷ. ವಿದ್ಯಾ ಜೀವನ ಸಾಗುತ್ತಿದೆ ಸರಸರ ನಾವು ಸಾಗಬೇಕಿದೆ ಅದರ ಪರ ಹಾಡಿದ್ದು ಕುಣಿದಿದ್ದು ಆಡಿದ್ದು ಕೂಡಿದ್ದು ಎಲ್ಲವ ಜೀವಿಸುತ್ತಾ ಬಂದು ಮುಟ್ಟಿದೆ ಮಧ್ಯೆ ಮಳೆಯ ತಿಂಗಳಲ್ಲಿ ಇನ್ನೆಷ್ಟು ದಿನ....! ಬೆರಳೆಣಿಕೆಯಷ್ಟು ಮಾತ್ರ ಈ ವರ್ಷ ಸಾಗುತ್ತಿದೆ ಮುಂದಿನ ಹೊಸ ಅನುಭವದ ಜಗತ್ತಿಗೆ ಸಾಗುವುದು ವಿದ್ಯಾರ್ಥಿ ಜೀವನ ಹೀಗೆ ಮುಂದುವರಿದು.
|
- അക്ഷരവൃക്ഷം പദ്ധതിയിലെ സൃഷ്ടികൾ
- കാസർഗോഡ് ജില്ലയിലെ അക്ഷരവൃക്ഷം-2024 സൃഷ്ടികൾ
- മഞ്ചേശ്വരം ഉപജില്ലയിലെ അക്ഷരവൃക്ഷം-2024 സൃഷ്ടികൾ
- അക്ഷരവൃക്ഷം പദ്ധതിയിലെ കവിതകൾ
- കാസർഗോഡ് ജില്ലയിലെ അക്ഷരവൃക്ഷം കവിതകൾ
- കാസർഗോഡ് ജില്ലയിലെ അക്ഷരവൃക്ഷം സൃഷ്ടികൾ
- മഞ്ചേശ്വരം ഉപജില്ലയിലെ അക്ഷരവൃക്ഷം-2024 കവിതകൾ
- കാസർഗോഡ് ജില്ലയിൽ 05/ 08/ 2024ന് ചേർത്ത അക്ഷരവൃക്ഷം സൃഷ്ടികൾ