എസ് .ഡി. പി. എച്ച്. എസ്. ധർമ്മത്തടുക്ക/കുഞ്ഞെഴുത്തുകൾ/ ದುರಾಸೆ
ದುರಾಸೆ
ಸಿದ್ದಾಪುರ ಎಂಬ ಒಂದು ದೊಡ್ಡ ಗ್ರಾಮ.ಆ ಗ್ರಾಮ ತುಂಬ ಸುಂದರವಾಗಿದೆ.ಅಲ್ಲಿಗೆ ಬೇರೆ ಬೇರೆ ಊರಿನಿಂದ ಜನರು ಪ್ರವಾಸಕ್ಕೆ ಬರುತಿದ್ದರು. ಅಲ್ಲಿದೊಡ್ಡದೊಡ್ಡಬೆಟ್ಟಗಳು, ಗಿಡ-ಮರಗಳು,ಬಯಲುಗಳು,ಹಾಗೂಗದ್ದೆಗಳಲ್ಲಿಕೃಷಿಮಾಡುವ ರೈತರು.ಇವೆಲ್ಲವುಗಳು ಆ ಗ್ರಾಮದ ವಿಶೇಷತೆ. ಇಲ್ಲಿ ವಾಸಮಾಡುವ ಜನರು ಯಾವುದೇ ಬೇಧ ಭಾವ ಇಲ್ಲದೇ ಎಲ್ಲರೂ ಒಂದೇ ರೀತಿ ಜೀವಿಸುತ್ತಿದ್ದರು. ಈ ಗ್ರಾಮವು ಯಾವಾಗಲು ಹಚ್ಚ ಹಸಿರಿನಿಂದ ಕೂಡಿರುತ್ತದೆ. ಈ ಗ್ರಾಮದ ಮಧ್ಯದಲ್ಲಿ ಒಂದು ದೊಡ್ಡ ದೇವಾಲಯವಿದೆ. ಆ ದೇವಾಲಯದಲ್ಲಿ ಸುಂದರವಾದ ಚಿನ್ನದ ದೇವರ ವಿಗ್ರಹ ಇದೆ. ಆ ದೇವಾಲಯದ ಪಕ್ಕದಲ್ಲಿ ಒಂದು ಸುಂದರವಾದ ಹೂ ತೋಟವಿದೆ.ಅಲ್ಲಿಗೆ ತುಂಬ ಜನರು ಸಂಜೆಯ ಹೊತ್ತಿನಲ್ಲಿ ನೋಡಲು ಬರುತ್ತಾರೆ. ಹೀಗಿರುವಾಗ ಒಂದು ದಿನ ಪಕ್ಕದ ಊರಿನ ದುರಾಸೆ ವ್ಯಕ್ತಿಯೊಬ್ಬ ಬಂದನು. ಅವನು ಆ ಗ್ರಾಮದಲ್ಲಿಯೆ ಒಂದು ಮನೆ ಮಾಡಿದನು .ಒಂದು ದಿನ ಆ ವ್ಯಕ್ತಿ ಆ ಗ್ರಾಮದಲ್ಲಿರುವ ದೇವಾಲಯಕ್ಕೆಹೂದನು .ಅಲ್ಲಿ ಇರುವ ಚಿನ್ನದ ದೇವರ ವಿಗ್ರಹ ದ ಮೇಲೆ ಅವನಿಗೆ ಅದನ್ನು ಪಡೆಯಬೇಕು ಎನ್ನುವ ದುರಾಸೆ ಹುಟ್ಟಿತು. ಸ್ವಲ್ಪ ದಿನ ಕಳೆಯಿತು. ಒಂದು ದಿನ ರಾತ್ರಿ ಹೊತ್ತು ಎಲ್ಲರೂ ಮಲಗಿದ ನಂತರ ಅವನು ದೇವಾಲಯದ ಹತ್ತಿರ ಬಂದು ದೇವರ ಗುಡಿಯೊಳಗೆ ನುಗ್ಗಿ ಅಲ್ಲಿರುವ ಚಿನ್ನದ ದೇವರ ವಿಗ್ರಹವನ್ನು ತೆಗೆಯಲು ಪ್ರಯತ್ನಿಸಿದನು .ಆಗ ನೀರು ಕುಡಿಯಲು ಎದ್ದ ಪೂಜಾರಿಯ ಮಗನಿಗೆ ಏನೋ ಶಬ್ದ ಕೇಳಿತು. ಅವನು ದೇವಾಲಯದ ಹತ್ತಿರ ಬಂದು ನೋಡಿದಾಗ ,ದುರಾಸೆ ವ್ಯಕ್ತಿ ವಿಗ್ರಹವನ್ನು ತೆಗೆಯಲು ಪ್ರಯತ್ನಿಸುತ್ತಿದನು.ಅದನ್ನು ನೋಡಿ ಪೂಜಾರಿಯ ಮಗ ಕೋಗಿ ಎಲ್ಲರನ್ನು ಕರೆದು ದುರಾಸೆ ವ್ಯಕ್ತಿಯ ಕೈ ಯಲ್ಲಿರುವ ವಿಗ್ರಹವನ್ನು ತೆಗೆದು ಅವನನ್ನು ಪೋಲಿಷ್ ಗೆ ಕರೆದು ಅವರಿಗೆ ಒಪ್ಪಿಸಿದರು ನೀತಿ:ಹೆಚ್ಚು ದುರಾಸೆ ಇರಬಾರದು
|