എസ് വി എ യു പി എസ് സ്വർഗ്ഗ ಎಸ್.ವಿ.ಎ.ಯು.ಪಿ.ಎಸ್.ಸ್ವರ್ಗ/അക്ഷരവൃക്ഷം/ Maha maari

Schoolwiki സംരംഭത്തിൽ നിന്ന്
Maha maari
ತಂಗಾಳಿ ಬೀಸೋ ವಾತಾವರಣ .ಹಚ್ಚ ಹಸಿರಾದ ಪರಿಸರ .ಅಲ್ಲಿ ಹಕ್ಕಿಗಳಿಂಚರ ಕೇಳದ ದಿವಸವೇ ಇಲ್ಲ .ಸುತ್ತಲೂ ಕಂಗೊಳಿಸುವ ಪುಷ್ಪಗಳು .ಅದರಲ್ಲಿರುವ ಮಕರಂದ ಹೀರಲು ಬರುವ ಪತರಗಿತ್ತಿಗಳು .ಕಣ್ಣು ಹಾಯಿಸಿದಲ್ಲಿ ಹೊಲ ಗದ್ದೆಗಳು .ಸಾಲು ಸಾಲಾಗಿ ಬೆಳೆದು ನಿಂತ ತೆಂಗು ,ಕಂಗಿನ ವೃಕ್ಷಗಳು .ಇಲ್ಲಿಯ ಜನರ ಮನಸ್ಸು ತುಂಬಾ ಶುದ್ಧ ಹಾಗೂ ಮುಗ್ದ .ಆ ಊರಿನ ಹೆಸರು ಸಮೃದ್ಧಿ ಪುರ .ಮೊದಲು ಈ ಹಳ್ಳಿಯ ಹೆಸರು ಕಮಲಪುರ ಎಂಬುದಾಗಿತ್ತು .ಆದರೆ ಈಗ ಈ ಹಳ್ಳಿಗೆ ಸಮೃದ್ಧಿ ಪುರ ಎಂದು ಹೆಸರಿಸಲು ಕಾರಣ ಯಾರು ಗೊತ್ತೆ ?.ಕಾರಣ ನಂದಾ ಎಂಬ ಬಾಬಾ ರವರು .ಅವರು ಯಾವ ರೀತಿಯ ರೋಗವ ನ್ನು ಸಹ ದೂರ ಮಾಡಬಲ್ಲರು .ಇದರಿಂದ ಜನರೆಲ್ಲಾ ಅವರನ್ನು ಪ್ರೀತಿಯಿಂದ ಬಾಬಾಜೀ ಎಂದು ಕರೆಯುತ್ತಿದ್ದರು .ಆದರೆ ಬಾಬಾಜೀಯವರನ್ನು ಆ ಊರಿನ ನಾಯಕ ವಿರೋಧಿಸುತ್ತಿದ್ದ. ಬಾಬಾಜಿಯವರನ್ನು ಸಹ ಕಂಡರೆ ಅವನಿಗೆ ಹೊಟ್ಟೆಕಿಚ್ಚು .ಊರಿನ ನಾಯಕನು ಸಹ ಒಬ್ಬ ವೈದ್ಯನಾಗಿದ್ದ ಆದರೆ ಮಹಾ ಮಾರಿ ಬಂದಾಗಲೆಲ್ಲಾ ಬಾಬಾಜೀ ಯವರ ಚಮತ್ಕಾರಗಳಲ್ಲದೆ ನಾಯಕನ ಯಾವ ಔಷಧಿಯು ಕೆಲಸಕ್ಕೆ ಬರಲಿಲ್ಲ .ಮತ್ತೊಂದು ವಿಷಯ ಬಾಬಾಜಿಯವರು ಔಷಧಿಯಯ ಬದಲಿಗೆ ಹಾಲು ಮತ್ತು ಅರಶಿನ ನೀಡುತಿದ್ದರು .ಒಮ್ಮೆ ಊರಿನಲ್ಲಿ ಕರೋನಾ ಎಂಬ ಮಹಾ ಮಾರಿ ಹಬ್ಬ ತೊಡಗಿತು .ಆ ಕಾಲದಲ್ಲಿ ಬ್ರಿಟಿಷರು ಇದ್ದರು .ಬ್ರಿಟನ್ ವೈದ್ಯರೆಲ್ಲ ಎಷ್ಟೇ ಪ್ರಯತ್ನಿಸಿದರೂ ಕೊರೋನಾ ಮಹಾ ಮಾರಿಗೆ ಔಷಧಿ ಸಿಗಲಿಲ್ಲ .ಕೊನೆಗೆ ಎಲ್ಲರೂ ಬಾಬಾಜಿಯವರ ಬಳಿಗೆ ಹೋದರು .ನಾಯಕನ ಧೈರ್ಯವು ನುಚ್ಚು ನೂರಾಯಿತು .ಬಾಬಾಜಿಯವರು ಹಾಲು ಮತ್ತು ಅರಶಿನ ನೀಡಿದರು .ಆಗ ಜನರು ಬರೇ ಆರು ದಿನಗಳಲ್ಲಿ ಗುಣ ಮೂಕರಾದರು ..ನಾಯಕನಿಗೂ ತನ್ನ ತಪ್ಪಿನ ಅರಿವಾಯಿತು .ಅಂದಿನಿಂದ ಅವರನ್ನು ಅರಶಿನ ಬಾಬಾ ಎನ್ನುತ್ತಾರೆ .

ಗ್ರೀಷ್ಮಾ . ಐದನೇ ತರಗತಿ . ಎಸ್ ವಿ ಎ ಯು ಪಿ ಶಾಲೆ ಸ್ವರ್ಗ .

GREESHMA.B
5 - എസ് വി എ യു പി എസ് സ്വർഗ്ഗ ಎಸ್.ವಿ.ಎ.ಯು.ಪಿ.ಎಸ್.ಸ್ವರ್ಗ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ


 സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - കഥ