ಲೋಕ ಹಿತಂ ವಯಂ ಕರಣೀಯಂ
ಶುದ್ಧವಾದ ಪರಿಸರ
ಗಿಡಮರಗಳ ಸಾಗರ
ಜೀವಿಗಳ ಆಗರ
ಭರತ ಭೂಮಿಯು
ಆಗ ಬಂತು ಕೊರೋನ
ಶುರುವಾಯ್ತು ಬಲಿದಾನ
ಜನರು ಸೇರಿ ಮಾಡಿದರು
'ಕೋವಿಡ್'ನಾಮಕರಣ
ಚೀನದಿಂದ ಹೊರಟಿತು
ದೇಶಗಳಿಗೆ ಹರಡಿತು
ಕೊನೆಗೆ ಬಂತು ಇಲ್ಲಿಗೆ
ಭವ್ಯ ಭಾರತದಲ್ಲಿಗೆ
ಸ್ಯಾನಿಟೈಸರ್ ಬಳಸೋಣ
ಸಮಯಕ್ಕೆ ಕೈ ತೊಳೆಯೋಣ
ಮಾಸ್ಕನ್ನು ಧರಿಸೋಣ
ಮನೆಯಲ್ಲೇ ಇರೋಣ
ರಜೆಯಲ್ಲಿ ಮನೆಯಲ್ಲಿ
ಮಾಡುವುದೇನೆಂಬ ಚಿಂತೆ
TV ಯಲ್ಲಿ ಬಂತು ನೋಡಿ
ರಾಮಾಯಣವೆಂಬ ಕಥೆ
ಪೋಲಿಸ್ ಡಾಕ್ಟರ್ ದಾದಿಗಳು
ಆಶಾಕಾರ್ಯಕರ್ತೆಯರು
ನಮಿಸೋಣ ಅವರಿಗೆ
ಪೂರ್ಣ ಮನಸಿನೊಂದಿಗೆ
ಮೋದಿಯವರ "ಸಪ್ತಪದಿ"ಯನ್ನು
ತಪ್ಪದೇ ಪಾಲಿಸೋಣ
ಕೊರೋನವನ್ನು ದೇಶದಿಂದ
ಬಡಿದೋಡಿಸೋಣ
"ಕೊರೋನಾ ಸೇ ಮತ್ ಡರೋನ"
ಎಂಬ ಮಾತ ಸಾರೋಣ
"ಕೋವಿಡ್" ಮಹಾಮಾರಿಯನ್ನು
ಸೇರಿ ನಾಶ ಮಾಡೋಣ
ರಚನೆ:ಪ್ರಣೀತಾ.ಯಂ.ಎಸ್
6 ನೇ ತರಗತಿ