എസ് എസ് എ യു പി എസ് ഷേണി ಎಸ್.ಎಸ್.ಎ.ಯು.ಪಿ.ಎಸ್.ಶೇಣಿ/അക്ഷരവൃക്ഷം/ ಶುಚಿತ್ವ
ಶುಚಿತ್ವ ಒಂದು ಊರಿನಲ್ಲಿ ಒಂದು ಬಡಕುಟುಂಬ ಇತ್ತು. ಅ ಕುಟುಂಬದಲ್ಲಿ ತಂದೆ, ತಾಯಿ ಮತ್ತು ಇಬ್ಬರು ಮಕ್ಕಳಿದ್ದರು. ಅವರು ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದರು. ಒಂದು ದಿನ ಕೆಲಸಕ್ಕೆ ಹೋಗದೆ ಇರುತ್ತಿದ್ದರೆ ಉಪವಾಸ ಇರಬೇಕಾಗಿತ್ತು. ಹೀಗೆ ದಿನಾಲೂ ಕೆಲಸ ಮಾಡುವುದರಲ್ಲಿ ಮಗ್ನರಾಗಿದ್ದರು. ತನ್ನ ಮನೆ, ಪರಿಸರ ಮತ್ತು ಮಕ್ಕಳನ್ನು ಶುಚಿಯಾಗಿರಿಸುವುದನ್ನು ಮರೆತು ಬಿಟ್ಟರು. ಮಕ್ಕಳು ಆಟಾಡಿದ ಕೈಯಲ್ಲೇ ಆಹಾರ ತಿನ್ನುತ್ತಿದ್ದರು. ಮಲಿನ ಸ್ಥಳಗಳಲ್ಲಿ ಮಲಗುತ್ತಿದ್ದರು. ಅಡುಗೆ ಪಾತ್ರೆಗಳನ್ನು ಸರಿಯಾಗಿ ತೊಳೆಯದೆ ಆಹಾರವನ್ನು ಬೇಯಿಸುತ್ತದ್ದರು. ಅದನ್ನು ತಿಂದು ಅನಾರೋಗ್ಯ ಕಾಡತೊಡಗಿತು. ಮನೆಯ ಸುತ್ತುಮುತ್ತಲು ಕಸ ಕಡ್ಡಿ , ತ್ಯಾಜ್ಯ ಎಸೆಯುವದರಿಂದ ಅದರಲ್ಲಿ ನೀರುನಿಂತು ಸೊಳ್ಳೆಗಳು ವರ್ಧಿಸುತ್ತಿದ್ದವು. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡಿತು. ಆ ಬಡ ಮಕ್ಕಳಿಬ್ಬರು ಶೀತ, ಜ್ವರ, ಕೆಮ್ಮುಗಳಿಂದ ನರಳಾಡುತ್ತಿದ್ದರು. ತಂದೆ, ತಾಯಂದಿರು ಮಕ್ಕಳನ್ನು ಗಮನಿಸದೆ ಇರುವುದರಿಂದ ರೋಗ ಉಲ್ಬಣಿಸಿತು. ಉಸಿರು ತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ತಮ್ಮ ಮಕ್ಕಳ ಸ್ಥಿತಿಯನ್ನು ಕಂಡು ದುಃಖಿಸುತ್ತಿದ್ದರು. ಅಳತೊಡಾಗಿದರು, ಪ್ರಯೋಜನಕ್ಕೆ ಬರಲಿಲ್ಲ. ಇದರಿಂದಾಗಿ ತಂದೆ, ತಾಯಂದಿರ ಮನಸಿನಲ್ಲಿ ಶುಚಿತ್ವದ ಅರಿವು ಮೂಡತೊಡಗಿತು. ಇದರಿಂದಾಗಿ ಪ್ರತಿ ದಿನವು ಶುಚಿತ್ವ ಕಾಪಾಡುವುದರಲ್ಲಿ ಕರ್ತವ್ಯನಿರತರಾದರು.
|
വർഗ്ഗങ്ങൾ:
- അക്ഷരവൃക്ഷം പദ്ധതിയിലെ സൃഷ്ടികൾ
- കാസർഗോഡ് ജില്ലയിലെ അക്ഷരവൃക്ഷം-2020 സൃഷ്ടികൾ
- കുമ്പള ഉപജില്ലയിലെ അക്ഷരവൃക്ഷം-2020 സൃഷ്ടികൾ
- അക്ഷരവൃക്ഷം പദ്ധതിയിലെ കഥകൾ
- കാസർഗോഡ് ജില്ലയിലെ അക്ഷരവൃക്ഷം കഥകൾ
- കാസർഗോഡ് ജില്ലയിലെ അക്ഷരവൃക്ഷം സൃഷ്ടികൾ
- കുമ്പള ഉപജില്ലയിലെ അക്ഷരവൃക്ഷം-2020 കഥകൾ
- കാസർഗോഡ് ജില്ലയിൽ 04/ 05/ 2020ന് ചേർത്ത അക്ഷരവൃക്ഷം സൃഷ്ടികൾ
- അക്ഷരവൃക്ഷം 2020 കന്നഡ രചനകൾ