ಅರಳುವ ಮುದ್ದು ಮಕ್ಕಳೇ ಆಲಿಸರಿ,
ಮರ ಗಿಡಗಿಡಗಳನು ಬೆಳೆಸಿರಿ ಪರಿಸರವಾ ಉಳಿಸಿರಿ. ಹಚ್ಚ ಹಸಿರು ಪರಿಸರವಾ ನೋಡಿ ಆನಂದಿಸಿರಿ, ಸ್ವಚ್ಛಂದದ ತಂಪು ಗಾಳಿಯಾ ಉಸಿರಾಡರಿ. ಪ್ಲಾಸ್ಟಿಕ್ ಕಸ ಕಡ್ಡಿಗಳನು ಭೂತಾಯಿಯ ಮಡಿಲಲಿ ಹಾಕದಿರಿ, ಕಾರ್ಖಾನೆ ವಿಷಪೂರಿತ ಧೂಮಗಳನು ಗಾಳಿಯಲಿ ತೂರದಿರಿ.ಇಂದಿನ ಮಕ್ಕಳಿಗೆ ಮುಂದಿನ ಭವಿಷ್ಯವನು ಕಾದರಿಸಿ, ನಾವೆಲ್ಲರು ಭೂತಾಯಿಯ ಮಡಿಲನು ಉಳಿಸೋಣ. ಅರಳುವ ಹೂವುಗಳಾ ನೀವೆಲ್ಲರು ಪ್ರೀತಿಸಿರಿ, ವನದೇವಿಯ ಸಂಪತ್ತನು ರಕ್ಷಿಸಿರಿ. ಮನುಜಾ ಮರಗಳನು ನೀ ಕಡಿಯದಿರು, ಬೆಳೆಯುವಾ ಸಸಿಗಳಿಗೆ ನೀ ನೀರುಣಿಸುತಿರು. ಮರಗಳನು ನೀ ಕಡಿದು ಸುಡದಿರು ಪರಿಸರವಾ, ಹಕ್ಕಿಗಳೆಲ್ಲಾ ಮರೆಯಾಗಿ ಹೊಗುವುವು. ಮಳೆರಾಯ ಎಂದೂ ಬರದು ಮರವಿಲ್ಲದೆಡೆ,ನರಕವಾದಿತು ನಮ್ಮ ಈ ಬಾಳು ಎಲ್ಲ ಕಡೆ.ಭೂಮಿಯೆಂದೂ ನಮ್ಮದಲ್ಲಾ ಬರುವಾಗ ತಂದವರು ಯಾರು ಇಲ್ಲಾ, ಹೊತ್ತೊಯ್ಯುವವರು ಇಲ್ಲಾ ಈ ಜೀವನವೆಂಬ ಸಂತೆಯಲೆಲ್ಲಾ.