ಬನ್ನಿರಿ ಗೆಳೆಯರೇ ಒಟ್ಟು ಸೇರೋಣ
ಕೊರೋನವನ್ನು ತಡೆಯೋಣ
ಪರಿಸರ ಶುಚಿತ್ವವಾಗಿರಿಸೋಣ
ಕೊರೋನವನ್ನು ದೂರವಿರಿಸೋಣ
ಒಳ್ಳೆಯ ಆಹಾರವನ್ನು ತಿನ್ನಿರಿ
ಕೊರೋನವನ್ನು ತಡೆಯಿರಿ
ಕೊರೋನವೆಂಬ ವಿಪತ್ತು
ತಂದಿತು ಲೋಕಕ್ಕೆ ಆಪತ್ತು
ಎಲ್ಲರೂ ಹೊರಗೆ ಹೋಗದಿರಿ
ಕೊರೋನವನ್ನು ತಡೆಯಿರಿ
ಮನೆಯಲ್ಲೇ ಇದ್ದು ಕೆಲಸ ಮಾಡುತ
ಕೊರೋನವನ್ನು ಓಡಿಸುವ
ಹಸ್ತಲಾಘವ ಎಂಬ ಪದವನ್ನು ಬಿಡಿರಿ
ಕೊರೋನವನ್ನು ಓಡಿಸಿರಿ
ಕೈ ತೊಳೆದು ಆಹಾರವನ್ನು ತಿನ್ನಿರಿ
ರೋಗವು ಬಾರದೆ ಜೀವಿಸಿರಿ