ತುಂಬಿ ನಿಂತ ಪ್ರಕೃತಿಯಲಿ
ಸುಪ್ತ ಮನದ ಬಯಕೆಯಲಿ
ಪುಷ್ಪ ವನದ ಸೊಬಗಿನಲಿ
ಉದಯ ರವಿಯ ರಾಗದಲಿ
ಮುಸ್ಸಂಜೆಯ ಸೊಬಗಿನಲಿ
ತುಂಬಿ ಹರಿವ ಜಲಧಿಯಲಿ
ಮುಗ್ಧ ಮನಸಿನಲಿ
ತರುಲತೆಯ ಬಳುಕಿನಲಿ
ಸುತ್ತ ನಿಂತ ಹಸಿರಿನಲಿ
ಶೃತಿ ಸ್ವರ ತಾಳಗಳು
ತನುವ ನುಗ್ಗಿ ಮನವ ಹೊಕ್ಕಿ
ಕ್ಷಣಕ್ಷಣಕ್ಕೂ ಹೊಸ ಹುಟ್ಟು
ನೀಡುತಿರುವ ಮಾತೆ ನಿನಗೆ
ಮನದ ತುಂಬ ನಮನಗಳು