ഹിന്ദു എ യു പി എസ് ചിപ്പാർ(ಹಿಂದೂ ಎ.ಯು.ಪಿ.ಎಸ್ ಚಿಪ್ಪಾರು)/അക്ഷരവൃക്ഷം/ ನನ್ನ ಪರಿಸರ my nature

ನನ್ನ ಪರಿಸರ my nature
 


ಮುಂಜಾನೆ ಬಾನಿನಲಿ ಸೂರ್ಯ ಮೂಡಿದ
ಹಸಿರು ಪೈರುಗಳ ಮೇಲೆ ಕಿರಣ ಚೆಲ್ಲಿದ
ನನ್ನ ಪರಿಸರ ನೋಡಲೆಷ್ಟು ಸುಂದರ ॥
ಹಕ್ಕಿಗಳು ಚಿಲಿಪಿಲಿ ಎಂದು ಹಾಡಿತು
ಚಿಟ್ಟೆಯು ಹೂವಿಂದ ಮಕರಂದ ಹೀರಿತು
ನನ್ನ ಪರಿಸರ ನೋಡಲೆಷ್ಟು ಸುಂದರ ॥
ದಟ್ಟ ಕಪ್ಪು ಮೋಡ ಕವಿದು ಮಳೆಯು ಸುರಿಯಿತು
ಹಳ್ಳ ಕೆರೆಯು ಕೊಳವು ತುಂಬಿ ನದಿಯು ಹರಿಯಿತು
ನನ್ನ ಪರಿಸರ ನೋಡಲೆಷ್ಟು ಸುಂದರ ॥
ಭೂಮಿ ತಾಯಿ ಮಡಿಲಿನಲ್ಲಿ ಹಸಿರು ತುಂಬಿತು
ಕಂಗು ತೆಂಗು ತೂಗಿ ಬಾಗಿ ಫಲವ ನೀಡಿತು
ನನ್ನ ಪರಿಸರ ನೋಡಲೆಷ್ಟು ಸುಂದರ ॥
ಉತ್ತಿ ಬಿತ್ತಿ ಗದ್ದೆ ಬಯಲು ತುಂಬಿ ತುಳುಕಿತು
ಭತ್ತ ತಿನುವ ಹಕ್ಕಿಗಳ ಹಿಂಡು ಹಾರಿತು
ನನ್ನ ಪರಿಸರ ನೋಡಲೆಷ್ಟು ಸುಂದರ ॥

chaithralakshmi
6 A ഹിന്ദു എ യു പി എസ് ചിപ്പാർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത