(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
ವಿದ್ಯೆಯ ಮಹತ್ವ
ವಿದ್ಯೆಯ ಮಹತ್ವ
ತಿಳಿಯಲೆ ಬೇಕು
ವಿದ್ಯೆಯ ಕಲಿಯಲು
ಶ್ರದ್ಧೆಯು ಬೇಕು
ಶ್ರದ್ಧೆಯ ಜೊತೆಯಲಿ
ಶಿಸ್ತಿರಬೇಕು
ಸಮಯದ ಮಹತ್ವ ಅರಿತಿರಬೇಕು.
ಅರಿತವರಿಂದ ಕಲಿಯಲು ಬೇಕು
ಬಲ್ಲವರಿಂದ ತಿಳಿಯಲು ಬೇಕು
ಜ್ಞಾನವ ಪಡೆಯಲು ವಿದ್ಯೆಯು ಬೇಕು
ಲೋಕದ ಜ್ಞಾನವ ಪಡೆಯಲು ಬೇಕು
ಸತ್ಕ್ರತಿಯೆಸಗಲು ವಿದ್ಯೆಯೇ ದಾರಿ
ವಿದ್ಯೆಯಿಲ್ಲದವನ ಬಾಳು ಕತ್ತಲ ದಾರಿ
ಅನೇಕ ಸಮಸ್ಯೆಗಳು ಸವಕಲು ದಾರಿ
ಮುಕ್ತ್ತಿಯ ಹೊಂದಲು ವಿದ್ಯೆಯೇ ರಹದಾರಿ.