ജി.എച്ച്.എസ്.എസ്. പൈവളികെ നഗർ/അക്ഷരവൃക്ഷം/ ಮನಪರಿವರ್ತನೆ

Schoolwiki സംരംഭത്തിൽ നിന്ന്
09:07, 6 മേയ് 2020-നു ഉണ്ടായിരുന്ന രൂപം സൃഷ്ടിച്ചത്:- Latheefkp (സംവാദം | സംഭാവനകൾ) (added Category:അക്ഷരവൃക്ഷം 2020 കന്നഡ രചനകൾ using HotCat)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
ಮನಪರಿವರ್ತನೆ

ಮುಂಬೈ ಎನ್ನುವ ದೊಡ್ಡ ಪಟ್ಟಣದಲ್ಲಿ ಚಿಂತನ್ ಎನ್ನುವ ಹುಡುಗ ತನ್ನ ಹೆತ್ತವರೊಂದಿಗೆ ವಾಸವಾಗಿದ್ದನು. ಅವರು ಶ್ರೀಮಂತರಾಗಿದ್ದರು. ಅಪ್ಪ ದೊಡ್ಡ ಬ್ಯುಸಿನೆಸ್ ಮ್ಯಾನ್ ಆಗಿದ್ದರು. ಅವನ ಅಪ್ಪ ಮಗನಿಗೆ ದಿವಸವೂ ಶಾಲೆಗೆ ಹೋಗುವ ಮುನ್ನ 100 ರೂ. ನೀಡುತ್ತಿದ್ದರು. ಆತ ಅದನ್ನು ಖರ್ಚು ಮಾಡದೆ ಸಂಗ್ರಹಿಸಿ ಜೋಪಾನವಾಗಿ ಇಡುತ್ತಿದ್ದನು. ಕಲಿಯುವುದರಲ್ಲೂ ಮುಂದಿದ್ದನು. ಆದುದರಿಂದ ಅಧ್ಯಾಪಕರಿಗೆ ಅಚ್ಚುಮೆಚ್ಚಿನ ಶಿಷ್ಯನಾಗಿದ್ದನು. ಆದರೆ ಕೆಲವು ವಿದ್ಯಾರ್ಥಿಗಳು ಕೆಟ್ಟ ದುರಭ್ಯಾಸವನ್ನು ಅಳವಡಿಸಿಕೊಂಡಿದ್ದರು. ಗುಟ್ಕಾ, ಧೂಮಪಾನ ಇತ್ಯಾದಿ ಮಾಡುತ್ತಿದ್ದರು. ಈ ವಿಷಯ ಶಾಲೆಯಲ್ಲೂ, ಮನೆಯವರಿಗೂ ತಿಳಿದಿರಲಿಲ್ಲ. ಹೀಗೆ ಒಂದು ದಿನ ಚಿಂತನ್ ನ್ನು ಈ ವಿದ್ಯಾರ್ಥಿಗಳು ಬಣ್ಣದ ಮಾತುಗಳಿಂದ ಅವರ ಜಾಲಕ್ಕೆ ಸೇರಿಸಿದರು. ಅಂದಿನಿಂದ ಅವನು ತಡವಾಗಿ ಮನೆಗೆ ತಲುಪುತ್ತಿದ್ದನು. ಮನೆಯವರು ಕೇಳಿದಾಗ ಏನೇನೋ ನೆಪ ಹೇಳುತ್ತಿದ್ದನು. ಇದರಿಂದಾಗಿ ಕಲಿಯುವುದರಲ್ಲಿ ಹಿಂದೆ ಬೀಳುತ್ತಿದ್ದನು. ಹೀಗೆ ತಿಂಗಳು ಕಳೆಯಿತು. ಚಿಂತನ್ ಗೆ ಒಂದು ದಿನ ಸಂಜೆ ತಲೆನೋವು ಶುರು ಆಯಿತು. ಚಿಕಿತ್ಸೆ ನೀಡಿದರೂ ಮತ್ತೆ ಮತ್ತೆ ತಲೆನೋವು ಜಾಸ್ತಿಯಾಗುತ್ತಿತ್ತು. ಇದರಿಂದ ಗಾಬರಿಗೊಂಡ ಮನೆಯವರು ದೊಡ್ಡ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ನೀಡಿದ ವೈದ್ಯರು ತಲೆಯ ಸ್ಕಾನ್ ಮಾಡಲು ,ಚಿಸುತ್ತಾರೆ. ವೈದ್ಯರು ಹೆತ್ತವರಲ್ಲ ಹೇಳಿದರು. ನಿಮ್ಮ ಮಗ ಧೂಮಪಾನ ಮಾಡುತ್ತಿದ್ದಾನೆ. ಇದರಿಂದ ಇಂತಹ ತೀವ್ರ ತರದ ತಲೆನೋವು ಕಾಣಿಸುತ್ತಿದೆ. ಈಗಲೇ ಸೂಕ್ತವಾದ ಚಿಕಿತ್ಸೆ ನೀಡದಿದ್ದಲ್ಲಿ ಜೀವಕ್ಕೆ ಅಪಾಯವಿದೆ ಎಂದರು. ವೈದ್ಯರ ನಿರ್ದೇಶದಂತೆ ಚಿಕಿತ್ಸೆ ಪಡೆದು ಗುಣಮುಖನಾದನು. ತನ್ನ ಸಹಪಾಠಿಗಳಲ್ಲಿ ಇನ್ನು ಮುಂದೆ ನಾವೆಲ್ಲರೂ ಕೆಟ್ಟ ಅಭ್ಯಾಸವನ್ನು ಬಿಟ್ಟು ಉತ್ತಮ ವಿದ್ಯಾರ್ಥಿಗಳಾಗುವ. ಉತ್ತಮ ರೀತಿಯಲ್ಲಿ ಕಲಿತು ಶಾಲೆಗೆ, ಹೆತ್ತವರಿಗೆ ಕೀರ್ತಿ ತರೋಣ ಎಂದು ಹೇಳಿದನು. ಅಂದಿನಿಂದ ಚಿಂತನ್ ಮತ್ತು ಆತನ ಕೆಲವು ಸಹಪಾಠಿಗಳು ಕೆಟ್ಟ ಚಟವನ್ನು ಬಿಟ್ಟು ಒಳ್ಳೆಯ ವಿದ್ಯಾರ್ಥಿಗಳಾದರು.


ಗೌತಮ್ ಎಸ್
9 A ജി.എച്ച്.എസ്.എസ്. പൈവളികെ നഗർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ


 സാങ്കേതിക പരിശോധന - Latheefkp തീയ്യതി: 06/ 05/ 2020 >> രചനാവിഭാഗം - കഥ