"ಆವರಿಸದಿರು ಮೃತ್ಯುರೂಪಿಯೇ (ಕೋರೊನ) ಜಗವ.... ಕೇಳು ನನ್ನ ಮಾತ ನಾ ಪುಟ್ಟ ಮಗು, ಸೆಳೆಯುವುದಂತೆ ಎಲ್ಲರ ನಿನ್ನ ಸೆಳೆಯದೇ ನನ್ನ ಮುಗ್ಧ ಸ್ನಿಗ್ಧ ನಗು??". "ಕೇಳುತಿಹುದು ಎಲ್ಲೆಲ್ಲೂ ಬರೀ ನಿನ್ನಯ ಅಟ್ಟಹಾಸ, ಕಮರಿಸುವ ಛಲವೇಕೆ ನಿನಗೆ ಈಗಷ್ಟೇ ಅರಳುತ್ತಿರುವ ಕಂಗಳ ಕನಸ....?". "ಏಕೆ ನಡೆಸಿರುವೆ ನೀ ಹೀಗೆ ಎಲ್ಲೆಲ್ಲೂ ರುದ್ರ ನರ್ತನ...?, ವೃದ್ಧರೂ, ಪುಟ್ಟ ಪೋರರು ತೆರುವುದೇ ಹೆಚ್ಚು ನಿನ್ನ ಆಟಕ್ಕೆ ತಮ್ಮ ಪ್ರಾಣ". "ತುಂಬಿಹರಿಲ್ಲಿ ಉಗ್ರರಂತೆ ಮನುಕುಲದ ನಾಶಕ್ಕೆ ನಿನ್ನ ಬಳಸುವ ಕ್ರೂರಿಗಳೇ...., ಆವರಿಸಿಹುದು ಭಯ ಎಲ್ಲರಲ್ಲೂ ಕಾಣಲಾರೆವೇನೋ ನಾಳೆ... ". "ಕಾಯ್ದು ಸಾಮಾಜಿಕ ಅಂತರ, ಅನುಸರಿಸಲು ಜನನಾಯಕನರುಹಿದ ಸಪ್ತ ಸೂತ್ರ, ಖಂಡಿತ ಬರುವ ನಾಳೆಗಳಲ್ಲಿ ನಮ್ಮ ಬದುಕಾಗುವುದು ಸುಸೂತ್ರ ".
സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - കവിത