എസ് വി എ യു പി എസ് സ്വർഗ്ഗ ಎಸ್.ವಿ.ಎ.ಯು.ಪಿ.ಎಸ್.ಸ್ವರ್ಗ/അക്ഷരവൃക്ഷം/ ಬಾಂಧವ್ಯದ ಬೆಲೆ

17:03, 5 മേയ് 2020-നു ഉണ്ടായിരുന്ന രൂപം സൃഷ്ടിച്ചത്:- Pcsupriya (സംവാദം | സംഭാവനകൾ)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
ಬಾಂಧವ್ಯದ ಬೆಲೆ

ರಾಮಣ್ಣ ಮತ್ತು ಸೀತಕ್ಕ ದಂಪತಿಗಳಿಗೆ ಇಬ್ಬರು ಮಕ್ಕಳು .ರಾಮಣ್ಣ ಊರಿನ ದೊಡ್ಡ ರೈತ .ತನ್ನ ಮನೆಯ ಸುತ್ತಮುತ್ತಲಿರುವ ಜಾಗದಲ್ಲಿ ಕೃಷಿ ಮಾಡಿ ಒಳ್ಳೆಯ ಇಳುವರಿಗಳಿಸುತ್ತಿದ್ದನು .ಸೀತಕ್ಕ ದನ ಕರುಗಳನ್ನು ಸಾಕಿ ಹಾಲಿನ ವ್ಯಾಪಾರ ಮಾಡುತ್ತಿದ್ದರು. ಅವರು ಮಕ್ಕಳನ್ನು ಒಳ್ಳೆಯ ಶಿಕ್ಷಣ ಕೊಟ್ಟು ಕಲಿಸಿ ಹಿರಿಯ ಮಗ ಇಂಜಿನಿಯರಿಂಗ್ ದೂರದ ನಗರದಲ್ಲಿ ಕಲಿಯುತ್ತಿದ್ದರು. ಕಿರಿಯ ಮಗ +2 ಕಲಿಯುತ್ತಿದ್ದನು .ಮಕ್ಕಳು ಕಲಿಯುತ್ತಿದ್ದಾರೆ ಎಂಬ ಖುಷಿ ಇದ್ದರೂ ರಾಮಣ್ಣ ಸೀತಕ್ಕನಿಗೆ ಒಂದು ಬೇಸರವೂ ಇತ್ತು. ಅವರ ಮಕ್ಕಳು ಅವರ ಜೊತೆ ಸಮಯ ಕಳೆಯುವುದಿಲ್ಲ ಎಂಬುದೇ ಅವರ ಕೊರಗು. ಮಕ್ಕಳಿಗೆ ರಜೆ ಇದ್ದರೂ ಅವರು ಅವರ ಗೆಳೆಯರ ಜೊತೆ ಅಲ್ಲದಿದ್ದರೆ ಮೊಬೈಲಲ್ಲೇ ಸಮಯ ಕಳಿಸಿದ್ದಾರೆ. ಏನಾದರೂ ಮಾತನಾಡಿದರೆ ಅವರಿಗೆ ಕೋಪ ಬರುತ್ತಿತ್ತು. ಅಪ್ಪನ ಕೃಷಿಯನ್ನು ನೋಡಲು ಕೂಡ ಹೊರಗೆ ಬರುತ್ತಿರಲಿಲ್ಲ. ಯಾಂತ್ರಿಕ ಜೀವನ ಮತ್ತು ನಗರ ಜೀವನ ಆಕರ್ಷಣೆಗೆ ಒಳಗಾಗಿದ್ದರು. ಹೀಗಿರುವಾಗ ಕೊರೋನಾ ಎಂಬ ಮಹಾಮಾರಿ ಹರಡಲು ತೊಡಗಿತು. ಸರಕಾರದ ಆದೇಶ ಪ್ರಕಾರ ಎಲ್ಲರೂ ಮನೆಯಲ್ಲಿ ಇದ್ದರು. ರಾಮಣ್ಣನ ಮಕ್ಕಳು ಕೂಡ ಮನೆಗೆ ಬಂದರು. ರಾಮಣ್ಣ ಮತ್ತು ಸೀತಕ್ಕನಿಗೆ ಎಲ್ಲಿಲ್ಲದ ಸಂತೋಷವಾಯಿತು. ಆದರೆ ಮಕ್ಕಳು ಅವರ ರೂಮಿನೊಳಗೆ ಮೊಬೈಲ್ ನೋಡುತ್ತಾ ಇದ್ದರು. ಎರಡು ಮೂರು ದಿವಸ ಹೀಗೆ ದಿನ ಕಳೆಯಿತು. ಹಿರಿಯ ಮಗನಿಗೆ ಹೊರಗೆ ಪೇಟೆಗೆ ಹೋಗದೆ ಬಹಳ ಬೇಸರ ಆಗುತ್ತಿತ್ತು. ಹೀಗೆ ಒಂದು ದಿವಸ ರಾಮಣ್ಣ ಹಿರಿಯ ಮಗನನ್ನು ತೋಟಕ್ಕೆ ಸುಮ್ಮನೆ ಬರಳು ಹೇಳಿದ ಮಗ ಮೊದಲು ಬರುವುದಿಲ್ಲ ಎಂದು ಹೇಳಿದರೂ ಮತ್ತೆ ಬೇರೆ ಏನು ಕೆಲಸ ಇಲ್ಲದ ಕಾರಣ ಅಪ್ಪನ ಜೊತೆ ಹೋದ. ತೋಟವನ್ನು ಪ್ರವೇಶಿಸಿದಾಗ ತಂಪಾದ ಗಾಳಿ ಅವನ ಮುಖಕ್ಕೆ ಬೀಸಿದಾಗ ಅವನಿಗೆ ಏನೋ ಬಹಳ ಸಂತೋಷವಾಯಿತು .ಅವನಿಗೆ ಪ್ರಕೃತಿಯ ಮಡಿಲಿನ ಮಹತ್ವ ಆಗ ಅರಿವಾಯಿತು. ಆ ದಿವಸ ಇಡೀ ಅವನು ಅಪ್ಪ-ಅಮ್ಮ ನೊಟ್ಟಿಗೆ ತೋಟದ ಕೆಲಸದಲ್ಲಿ ಸಮಯ ಕಳೆದನು. ಮರದಿವಸ ಅವನನ್ನು ನೋಡಿ ತಮ್ಮನೂ ಬಂದನು. ರಾಮಣ್ಣ ಸೀತಕ್ಕ ಇಬ್ಬರೂ ಮನಸ್ಸಿನಲ್ಲೇ ನೆನೆಸಿದರೂ ಕೊರೋನಾ ಮಹಾಮಾರಿ ತುಂಬಾ ನಷ್ಟ ತಂದರೂ ತಮ್ಮ ಮಕ್ಕಳೊಂದಿಗೆ ಸಮಯ ಕಳೆಯುವಂತೆ ಮಾಡಿಲ್ಲಾ, ಅವರಿಗೂ ಹಳ್ಳಿ ಜೀವನದ ಸವಿಯನ್ನು ಉಣಿಸಿತಲ್ಲಾ ಎಂದು ಸಂಭ್ರಮಿಸಿದರು. ಜಂಜಾಟದ ಬದುಕಿನಲ್ಲಿ ಬಿಡುವಿಲ್ಲದ ಸಮಯದಲ್ಲಿ ಮನೆಮಂದಿ ಮನೆಯಲ್ಲಿ ಒಗ್ಗಟ್ಟಾಗಿ ಕಾಲ ಕಳೆಯುವಂತೆ ಮಾಡಿತು.


SANVI.P
6 - S.V.A.U.P.SCHOOL SWARGA
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ


 സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - കഥ