എസ്. എ.ടി.എച്ച്.എസ്. മഞ്ചേശ്വർ/അക്ഷരവൃക്ഷം/ TIKTOK SOSE (ಟಿಕ್ ಟಾಕ್ ಸೊಸೆ)

Schoolwiki സംരംഭത്തിൽ നിന്ന്
16:58, 5 മേയ് 2020-നു ഉണ്ടായിരുന്ന രൂപം സൃഷ്ടിച്ചത്:- Pcsupriya (സംവാദം | സംഭാവനകൾ)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
TIKTOK SOSE (ಟಿಕ್ ಟಾಕ್ ಸೊಸೆ)
ಒಂದು ಊರಿನಲ್ಲಿ ರಮ್ಯಾ ಎಂಬ ಹುಡುಗಿ ಇದ್ದಳು. ಅವಳು ಒಂದು ಬಡ ಕುಟುಂಬದಲ್ಲಿ ಜನಿಸಿದ್ದು. ಅವಳ ತಾಯಿ ದಿನನಿತ್ಯ ಬೇರೆ ಬೇರೆ ಮನೆಗಳ ಬಟ್ಟೆಗಳನ್ನು ಒಗೆದು ಇಸ್ತ್ರಿ ಮಾಡಿ ಕೊಟ್ಟು ಬಂದ ಹಣದಲ್ಲಿ ಅವರ ಜೀವನ ಸಾಗುತ್ತಿತ್ತು.ರಮ್ಮಾಳೂ ಅಮ್ಮನ ಈ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಳು.

ರಮ್ಯಾಳಿಗೆಹಾಡುವುದೆಂದರೆ ಬಹಳ ಇಷ್ಟವಾಗಿತ್ತು.ಕೆಲಸ ಮಾಡುವಾಗಲೂ ಅವಳು ರೇಡಿಯೋದಲ್ಲಿ ಹಾಡು ಕೇಳುತ್ತಾ ಅದರೊಂದಿಗೆ ದನಿಗೂಡಿಸುತ್ತಿದ್ದಳು.ಅಲ್ಲವಾದರೆ ತಾನೇ ಹಾಡುತ್ತಿದ್ದಳು.ಒಂದು ದಿನ ರಮ್ಯಾ ಅಮ್ಮನಲ್ಲಿ ಟಚ್ ಸ್ಕ್ರೀನ್ ಮೊಬೈಲ್ ಗಾಗಿ ಬೇಡಿಕೆಯಿಟ್ಟಳು. ಅದರಲ್ಲಿ ಟಿಕ್ ಟಾಕ್ ಮೂಲಕ ಹಾಡನ್ನು ಎಲ್ಲರಿಗೂ ತಲುಪಿಸುವುದು ಸಾಧ್ಯ ಎಂಬುದನ್ನು ಅವಳು ಕಂಡೂ ಕೇಳಿಯೂ ತಿಳಿದುಕೊಂಡಿದ್ದಳು.ಮಗಳ ಬೇಡಿಕೆಯನ್ನು ಕೇಳಿ ಒಂದು ನಿಮಿಷ ಸುಮ್ಮನಿದ್ದ ಅಮ್ಮ "ರಮ್ಯಾ, ನಿನಗೆ ನಮ್ಮ ಅವಸ್ಥೆ ತಿಳಿದಿಲ್ಲವೇನೇ?ಯಾರ್ಯಾರ ಮನೆಯ ಬಟ್ಟೆ ತೊಳೆದು ಜೀವಿಸುವ ನಮಗೆ ಮೊಬೈಲ್ ಎಂಬುದು ಗಗನ ಕುಸುಮ.ಹೇಗೋ ಅಷ್ಟಿಷ್ಟು ಕೂಡಿಟ್ಟು ನಿನ್ನ ಮದುವೆಯೊಂದನ್ನು ಮಾಡಬೇಕೆಂಬ ಆಸೆಯಿಟ್ಟುಕೊಂಡಿದ್ದೇನೆ ಕಣೆ; ಆ ಹಣವನ್ನು ಎಷ್ಟುಮಾತ್ರಕ್ಕೂ ಅನ್ಯಥಾ ಖರ್ಚು ಮಾಡಲಾರೆ" ಎಂದಳು.ಅಮ್ಮನ ಮನ ನೋಯಿಸಲು ಇಷ್ಟವಿಲ್ಲದ ರಮ್ಯಾ ಅಲ್ಲಿಗೆ ಸುಮ್ಮನಾದಳು. ಆದರೆ ದಿನೇದಿನೇ ಹೆಚ್ಚುತ್ತಿರುವ ಆಸೆಯನ್ನು ಪೂರೈಸುವುದಕ್ಕೆ ತನ್ನ ಗೆಳತಿಯನ್ನು ಆಶ್ರಯಿಸಿದಳು. ರಮ್ಯಾಳ ಗೆಳತಿ ಟೈಲರ್ ಕೆಲಸ ಮಾಡುತ್ತಿದ್ದಳು. ಅವಳ ಹಳೆಯ ಹೊಲಿಗೆ ಯಂತ್ರವನ್ನು ಸಾಲವಾಗಿ ಪಡೆದುಕೊಂಡ ರಮ್ಯಾ ಗೆಳತಿಯಿಂದಲೇ ಹೊಲಿಗೆ ಕಲಿತಳು. ಶ್ರದ್ಧೆಯಿಂದ ಬಹಳ ಬೇಗನೇ ಹೊಲಿಗೆ ಕಲಿತು ಸಂಪಾದನೆಗೆ ತೊಡಗಿದಳು. ಅವಳು ಕೆಲವೇ ತಿಂಗಳುಗಳಲ್ಲಿ ಒಂದು ಮೊಬೈಲ್ ಖರೀದಿಗೆ ಸಾಕಾಗುವಷ್ಟು ಹಣ ಸಂಪಾದಿಸಿದಳಲ್ಲದೆ ಗೆಳತಿಯ ಸಾಲವನ್ನೂ ತೀರಿಸಿದಳುಂ.ಒಳ್ಳೆಯ ಮೊಬೈಲ್ ಒಂದನ್ನು ಕೊಂಡಳು ಕೂಡಾ.ತನ್ನ ಗೆಳತಿಯಿಂದ ಟಿಕ್ ಟಾಕ್ ವಿಡಿಯೋ ಮಾಡುವುದನ್ನೂ ಕಲಿತುಕೊಂಡಳು. ಅಂದಿನಿಂದ ಶುರುವಾಯಿತು ರಮ್ಯಾಳ ಟಿಕ್ ಟಾಕ್ ಗೀಳು!ದಿನ ಬೆಳಗಾದರೆ ಹಾಡುವುದು, ವಿಡಿಯೋ ಮಾಡಿ ಫೇಸ್ ಬುಕ್ ಗೆ ಅಪ್ ಲೋಡ್ ಮಾಡುವುದು...ಇದುವೇ ಅವಳ ನಿತ್ಯ ರೂಢಿಯಾಗಿಬಿಟ್ಟಿತು. ಇದರಿಂದಾಗಿ ಅವಳ ಹೆಸರೇ "ಟಿಕ್ ಟಾಕ್ ರಮ್ಯಾ" ಎಂದಾಗಿ ಹೋಯಿತು.ಅಮ್ಮ ಕರೆದರೂ ಈಗ ರಮ್ಯಾ ಕೆಲಸದಲ್ಲಿ ಸಹಾಯ ಮಾಡುವುದೇ ಇಲ್ಲ.ಮೊಬೈಲ್ ರೀಚಾರ್ಜ್ ಮಾಡುವುದಕ್ಕೆ ಬೇಕಾದ ಹಣ ಹೊಲಿಗೆಯಿಂದ ಸಂಪಾದನೆಯಾಗುತ್ತಿತ್ತು.ಹೀಗಿರಲು ಒಂದು ದಿನ ಅವಳ ವಧುಪರೀಕ್ಷೆಗೆಂದು ಒಬ್ಬಾತ ಹುಡುಗ ಬಂದನು. ಅವನು ರಮ್ಯಾಳನ್ನು ಒಪ್ಪಿದರೂ ರಮ್ಯಾ ಈಗಲೇ ಮದುವೆ ಬೇಡವೆಂದು ಹಠ ಹಿಡಿದಳು ಕೊನೆಗೆ ಅಮ್ಮನ ಒತ್ತಾಯಕ್ಕೆ ಹಡುಗ ಚೆನ್ನಾಗಿದ್ದುದರಿಂದ ಒಪ್ಪಿದಳು. ಮದುವೆಯೂ ನಡೆಯಿತು. ಮದುವೆಯ ಬಳಿಕವೂ ರಮ್ಯಾಳ ಜೀವನದಲ್ಲಿ ಯಾವುದೇ ಬದಲಾವಣೆಯೂ ಆಗಲಿಲ್ಲ. ಗಂಡ ಅನೇಕ ಬಾರಿ ಹೇಳಿದರೂ ರಮ್ಯಾ ಕೇಳಲಿಲ್ಲ.ದಿನೇ ದಿನೇ ಅವಳ ವಿಡಿಯೋ ಹಾಡುಗಳಿಗೆ ಬೇಡಿಕೆ ಹೆಚ್ಚುತ್ತಿತ್ತು.ಇದು ಅವಳ ಹುಚ್ಚನ್ನು ಇನ್ನಷ್ಟು ಹೆಚ್ಚಿಸುತ್ತಿತ್ತು. ಇದನ್ನು ಕಂಡು ರೋಸಿದ ಅವಳ ಮಾವ ಒಂದು ದಿನ ರಾತ್ರಿ ಅವಳು ಗಾಢ ನಿದ್ದೆಯಲ್ಲಿದ್ದಾಗ ಅವಳ ಮೊಬೈಲನ್ನು ಸಮೀಪದ ಹೊಳೆಗೆ ಬಿಸಾಡಿ ಬಿಟ್ಟರು . ಮರುದಿನ ಹುಡುಕಾಡಿದ ರಮ್ಯಾ ನಿರಾಶಳಾಗಿ ಗಂಡನಿಗೆ ಮೊಬೈಲ್ ತಂದುಕೊಡುವಂತೆ ಕೇಳಿದಳು. ಗಂಡ ಹೇಳಿದ "ನನ್ನ ಬಳಿ ಅಷ್ಟೆಲ್ಲ ಹಣವಿಲ್ಲ;ಹೋಲದಲ್ಲಿ ಚೆನ್ನಾಗಿ ದುಡಿದರೆ ಎರಡು ವರ್ಷಗಳಲ್ಲಿ ಮೊಬೈಲ್ ಖರೀದಿಸಬಹುದು,ಅದೂ ಅಲ್ಲದೆ ನಮ್ಮ ಜಮೀನನ್ನು ನನಗೆ ಅಸೌಖ್ಯವಾಗಿರುವಾಗ ಊರ ಜಮೀನುದಾರರಲ್ಲಿ ಅಡವಿಟ್ಟಿದ್ದೇನೆ. ಬಿಡಿಸಿಕೊಳ್ಳಲೂ ಹಣವಿಲ್ಲ.ನನ್ನ ಜೊತೆಗೆ ಹೊಲಕ್ಕೆ ಬಾ" ಎಂದನು.ರಮ್ಯಾ ಒಪ್ಪಲಿಲ್ಲ. ಇದಾಗಿ ಕೆಲವು ದಿನಗಳ ಬಳಿಕ ರಮ್ಯಾಳಿಗೆ ಒಂದು ಪಾರ್ಸಲ್ ಬಂತು.ಅದು ಟಿಕ್ ಟಾಕ್ ಕಂಪೆನಿಯವರು ಕಳುಹಿಸಿದ ಮೊಬೈಲ್ ಆಗಿತ್ತು. ರಮ್ಯಾಳ ಇಂಪಾದ ಧ್ವನಿಗಾಗಿ ಅಪಾರ ಬೇಡಿಕೆ ಬರುತ್ತಿದೆಯೆಂದೂ ಅದಕ್ಕಾಗಿ ಅವಳು ವಿಡಿಯೋ ಕಳಿಸುತ್ತಿರಬೇಕೆಂದೂ ಪತ್ರವೂ ಇತ್ತು.ಇದರೊಂದಿಗೆ ಪುನಃ ರಮ್ಯಾಳ ದಿನಚರಿ ಹಿಂದಿನಂತಾಯಿತು. ಹೀಗಿರುವಾಗ ಒಂದು ದಿನ ಒಬ್ಬಾತ ಅಪರಿಚಿತ ಬಂದು ತಾನು ಮ್ಯೂಸಿಕ್ ಪ್ರೊಡಕ್ಷನ್ ಕಡೆಯವನೆಂದೂ ರಮ್ಯಾಳ ಇಂಪಾದ ಧ್ವನಿಗೆ ಅತಿಯಾದ ಬೇಡಿಕೆ ಇರುವುದರಿಂದ ತಮ್ಮ ಕಂಪೆನಿಗೋಸ್ಕರ ಅವಳು ಹಾಡಬೇಕೆಂದೂ ಹೇಳಿ ಅಡ್ವಾನ್ಸ್ ಆಗಿ ಇಪ್ಪತ್ತು ಲಕ್ಷ ರೂಪಾಯಿಗಳ ಚೆಕ್ ಅನ್ನು ನೀಡಿ,ಸಮಯಕ್ಕಾಗುವಾಗ ಕಂಪೆನಿಯ ಕಾರು ಳುಹಿಸಲಾಗುವುದು,ಆಗ ಬಂದರೆ ಸಾಕು ಎಂದು ಹೇಳಿದನು. ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ.ಅವಳಿಂದ ಒಂದು ಒಪ್ಪಂದಕ್ಕೆ ಸಹಿ ಪಡೆದು ಅವನು ಹೋದನು. ರಮ್ಯಾಳು ಆ ಹಣವನ್ನು ತನ್ನ ಮಾವನ ಕೈಯ್ಯಲ್ಲಿಟ್ಟು "ಮಾವಾ ,ನಮ್ಮ ಹೊಲವನ್ನು ಜಮೀನ್ದಾರರಿಂದ ಈಗಲೇ ಬಿಡಿಸಿಕೊಳ್ಳಿ" ಎಂದು ಹೇಳಿದಳು.ತನ್ನ ಸೊಸೆಯ ಒಳ್ಳೆಯತನವನ್ನು ಕಂಡು ಮಾವನ ಕಣ್ಣುಗಳು ತುಂಬಿಬಂದವು."ಮಗಳೇ, ನಿನ್ನ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ನಮಗೆ ಇಷ್ಟು ಕಾಲ ಬೇಕಾಯಿತು;ಕ್ಷಮಿಸಿ ಬಿಡು"ಎಂದರು."ಮಾವಾ, ಆಗುವುದೆಲ್ಲ ಒಳ್ಳೆಯದಕ್ಕೆ,ನಾನಾದರೂ ನಿಮ್ಮ ಕಷ್ಟವನ್ನು ಅರ್ಥಮಾಡಿಕೊಳ್ಳಬೇಕಿತ್ತು.ಇನ್ನು ಹಾಗಾಗದಂತೆ ನೋಡಿಕೊಳ್ಳುತ್ತೇನೆ .ಕಳೆದದ್ದನೆಲ್ಲಾ ಮರೆತುಬಿಡೋಣ "ಎಂದಾಗ ಆ ಮನೆಯಲ್ಲಿ ಹಿಂದೆಂದೂ ಕಾಣದ ಸಂಭ್ರಮ ತುಂಬಿಕೊಂಡಿತು.


SHADMA
8 A എസ്. എ.ടി.എച്ച്.എസ്. മഞ്ചേശ്വർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ


 സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - കഥ