(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
ಬಾಳ ಪಯಣ
ಬಾಳ ಪಯಣವು ಸಾಗುತಿದೆ
ದೂರದಾಸೆಯ ಬಯಸುತಿದೆ
ಮನಸ್ಸು ಮರುಗುತಿದೆ
ಹತಾಶೆಯ ಭಾವವಿದೆ.
ದೂರದಲ್ಲೊಂದು ಸೂರ್ಯಕಿರಣ ಪ್ರಖರಿಸುತಲಿದೆ
ಕಣ್ಣೊಂದು ಆಹ್ಲಾದ ಸವಿಯುತಿದೆ.
ನಿಧಾನಗತಿಯಲ್ಲಿ ಕಡಲನೀರು ಚಲಿಸುತಿದೆ
ಆಗ ಕಾಣುವ ಕಣ್ಣೊಂದು ನಸು ನಗುತಲಿದೆ
ಅದೋ ಸುಂದರ ಸೂರ್ಯಸ್ತಮಾನವದು
ಸವಿಯುತಲಿರುವ ಸುಂದರ ಕಣ್ಣುಗಳಿದು
ಯಾಕೋ..... ನಿರಾಸೆಯ ಹೊತ್ತು ನಿಂದ ಹೆಣ್ಣು.....
ಕಾರಣ ಆ ನಿರಾಸೆಯೋ.......?
ಭೋರ್ಗರೆರಯುವ ತೆರೆಯ ಹಿಂದು ನೆನಪು
ಅದುವೇ ಆಕೆಯ ಪಾಲಿಗೆ ದುಃಖದುಣುಪು
ಕಂಡೂ ಕಾಣದ ಕಣ್ಣಿಗೆ ದುಃಖಿಸುತಿದೆ ಜೀವ
ಆ ಜೀವವೇ ಕಳೆದುಕೊಂಡಿದೆ ಹಾವ-ಭಾವ