എസ്. എന്. എച്ച്എസ്. പെർള/അക്ഷരവൃക്ഷം/ Ahankarakke thakka shikshe
Ahankarakke thakka shikshe ಚಂಪಕ ಎನ್ನುವ ಒಂದು ವನದಲ್ಲಿ ಒಂದು ನರಿಯು ವಾಸವಾಗಿತ್ತು.ಅದು ಕಾಡಿನಲ್ಲಿರುವ ಸಣ್ಣ ಪುಟ್ಟ ಪ್ರಾಣಿಗಳನ್ನು ಹೆದರಿಸಿ ಬೆದರಿಸಿ ಮೋಸ ಮಾಡಿ ತಿಂದು ವಾಸಿಸುತ್ತಿತ್ತು.ಅದಕ್ಕೆ ಎಲ್ಲಾ ಪ್ರಾಣಿಗಳು ನರಿ ಮೋಸ ಮಾಡಿ ತಿನ್ನುತ್ತದೆ ಎಂದು ಹೆದರುತ್ತಿದ್ದವು.ಯಾವ ಪ್ರಾಣಿಯೂ ಹೊರ ಬರುತ್ತಿರಲಿಲ್ಲ.ಇದರಿಂದ ನರಿಗೆ ಯಾವ ಪ್ರಾಣಿಗಳೂ ಸಿಗುತ್ತಿರಲಿಲ್ಲ.ಆದುದರಿಂದ ನರಿಯು ಹಸಿವಿನಿಂದ ನರಳುತ್ತಿತ್ತು.ಅದಕ್ಕೆ ಒಂದು ಉಪಾಯ ಹೊಳೆಯಿತು "ನನಗೆ ಕಾಡಿನಲ್ಲಿ ತಿನ್ನಲು ಎನೂ ಸಿಗುವುದಿಲ್ಲ ನಾನು ನಾಡಿಗೆ ಹೋಗುತ್ತೇನೆ"ಎಂದು ಯೋಚಿಸಿತು.ಹೌದು "ನನಗೆ ತಿನ್ನಲು ಸಿಗಬಹುದು.ನಾನು ಕಾಡಿಗೆ ಹೋಗಿ ಬದುಕುತ್ತೇನೆ" ಎಂದು ಕಾಡಿನಲ್ಲಿ ಪ್ರಜ್ಞೆ ಮಾಡಿತು.ಆಗ ಪ್ರಾಣಿಗಳೆಲ್ಲ ಸಂತೋಷದಿಂದ ಹೋಗು ಹೋಗು ಎಂದು ಹೇಳಿದವು.ತನ್ನಷ್ಟಕೆ ತಾನೇ ಯೋಚಿಸಿತು ನಾನು ಇನ್ನು ನಾಡಿನ ಒಳಗೆ ಹೋಗಿ ಕೋಳಿಗಳನ್ನು ಹಿಡಿದು ತಿನ್ನಬಹುದು.ಆಗ ಚಿನ್ನು ಗಿಳಿಯು ಮನಸ್ಸಿನ ಒಳಗೆ ಹಲವಾರು ಬಾರಿ ಶಾಪ ಹಾಕಿತು.ನನ್ನ ಕಂದನನ್ನು ತಿಂದ ನೀನು ನಾಡಿಗೆ ಹೋಗು ಇಲ್ಲಿಂದ ಹೋಗು ಎಂದು.
ಆಗ ಕಿಟ್ಟು ಮೊಲವು ನನ್ನ ಅಮ್ಮನನ್ನು ತಿಂದೆ ನೀನು ನಾಡಿಗೆ ಹೋಗು ಎಂದು ಮನಸ್ಸಿನ ಒಳಗೇ ಯೋಚಿಸಿತು.ನರಿಯು ನಾಡಿಗೆ ಹೋಯಿತು.ಅದಕ್ಕೆ ಒಂದು ಕೋಳಿ ಕಾಣಿಸಿತು.ಅದನ್ನು ತಿನ್ನಬೇಕು ಎಂದು ಕೋಳಿಯನ್ನು ಹಿಂದಿನಿಂದ ಹಿಡಿಯಲು ಹೋಯಿತು.ಕೂಡಲೇ ಕೋಳಿಯು ಜೋರಾಗಿ ಕೂಗಿತು.ಮನೆಯವರೆಲ್ಲ ಓಡಿ ಬಂದು ನರಿಗೆ ಹೊಡೆದರು.ಪೆಟ್ಟು ತಿಂದ ನರಿಯು ನಂತರ ನಾಡಿಗೆ ಬರಲೇ ಇಲ್ಲ.
|
വർഗ്ഗങ്ങൾ:
- അക്ഷരവൃക്ഷം പദ്ധതിയിലെ സൃഷ്ടികൾ
- കാസർഗോഡ് ജില്ലയിലെ അക്ഷരവൃക്ഷം-2020 സൃഷ്ടികൾ
- കുമ്പള ഉപജില്ലയിലെ അക്ഷരവൃക്ഷം-2020 സൃഷ്ടികൾ
- അക്ഷരവൃക്ഷം പദ്ധതിയിലെ കഥകൾ
- കാസർഗോഡ് ജില്ലയിലെ അക്ഷരവൃക്ഷം കഥകൾ
- കാസർഗോഡ് ജില്ലയിലെ അക്ഷരവൃക്ഷം സൃഷ്ടികൾ
- കുമ്പള ഉപജില്ലയിലെ അക്ഷരവൃക്ഷം-2020 കഥകൾ
- കാസർഗോഡ് ജില്ലയിൽ 22/ 04/ 2020ന് ചേർത്ത അക്ഷരവൃക്ഷം സൃഷ്ടികൾ