ಅಮ್ಮ ಅಮ್ಮ ನನ್ನಮ್ಮ ಸಾಕಿ ಸಲಹುವ ನನ್ನಮ್ಮ ಜಗವನು ತೋರಿದ ನನ್ನಮ್ಮ ಗುರುವನು ತೋರಿದ ನನ್ನಮ್ಮ ಕಷ್ಟವನೆಂದೂ ತೋರಿಸದೆ ಕಷ್ಟವ ಪಟ್ಟಳು ನನ್ನಮ್ಮ ಮನದಲಿ ಪ್ರೀತಿಯ ತುಂಬುತಲಿ ಸಂತಸ ನೀಡಿದ ನನ್ನಮ್ಮ ಬಾಳಿಗೆ ಬೆಳಕನು ತೋರುತಲಿ ದೇವರೆ ಆದಳು ನನ್ನಮ್ಮ ಪ್ರೀತಿಯ ಹಾಲನು ಉಣಿಸುತಲಿ ಮಮತೆಯ ತೋರಿದ ನನ್ನಮ್ಮ ಬಾಳಿನ ದೀಪವು ನೀನಮ್ಮ ನಿನ್ನಯ ಋಣವು ಎನಿತಮ್ಮ ನಿನ್ನೀ ಅಭಯವು ನಮಗಮ್ಮ ಜೊತೆಗಿರೆ ಜಗವೇ ನನದಮ್ಮ ಒಂಭತ್ತು ತಿಂಗಳು ಹೊತ್ತು ಬೆಳೆಸಿ ನೀ ನಮ್ಮ ಪಾಲಿನ ಕರುಣಾ ಮೂರ್ತಿ ನೀನಾಗಿರು ನನಗೆ ಸದಾ ಸ್ಪೂರ್ತಿ ಅಮ್ಮ ಅಮ್ಮ ನನ್ನಮ್ಮ