ജി.എച്ച്.എസ്. എസ്. മൊഗ്രാൽ പുത്തൂർ/അക്ഷരവൃക്ഷം/ಅಮ್ಮ

Schoolwiki സംരംഭത്തിൽ നിന്ന്
ಅಮ್ಮ


ಅಮ್ಮ ಅಮ್ಮ ನನ್ನಮ್ಮ
ಸಾಕಿ ಸಲಹುವ ನನ್ನಮ್ಮ
ಜಗವನು ತೋರಿದ ನನ್ನಮ್ಮ
ಗುರುವನು ತೋರಿದ ನನ್ನಮ್ಮ
         
ಕಷ್ಟವನೆಂದೂ ತೋರಿಸದೆ
ಕಷ್ಟವ ಪಟ್ಟಳು ನನ್ನಮ್ಮ
ಮನದಲಿ ಪ್ರೀತಿಯ ತುಂಬುತಲಿ
ಸಂತಸ ನೀಡಿದ ನನ್ನಮ್ಮ

ಬಾಳಿಗೆ ಬೆಳಕನು ತೋರುತಲಿ
ದೇವರೆ ಆದಳು ನನ್ನಮ್ಮ
ಪ್ರೀತಿಯ ಹಾಲನು ಉಣಿಸುತಲಿ
ಮಮತೆಯ ತೋರಿದ ನನ್ನಮ್ಮ
ಬಾಳಿನ ದೀಪವು ನೀನಮ್ಮ
ನಿನ್ನಯ ಋಣವು ಎನಿತಮ್ಮ
ನಿನ್ನೀ ಅಭಯವು ನಮಗಮ್ಮ
ಜೊತೆಗಿರೆ ಜಗವೇ ನನದಮ್ಮ

ಒಂಭತ್ತು ತಿಂಗಳು ಹೊತ್ತು ಬೆಳೆಸಿ
ನೀ ನಮ್ಮ ಪಾಲಿನ ಕರುಣಾ ಮೂರ್ತಿ
ನೀನಾಗಿರು ನನಗೆ ಸದಾ ಸ್ಪೂರ್ತಿ
ಅಮ್ಮ ಅಮ್ಮ ನನ್ನಮ್ಮ

ರಕ್ಷಿತ ಎನ್ .
X ജി.എച്ച്.എസ്. എസ്. മൊഗ്രാൽ പുത്തൂർ
കാസർഗോഡ് ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - Latheefkp തീയ്യതി: 05/ 05/ 2020 >> രചനാവിഭാഗം - കവിത