സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

ಶಾಲಾ ಪುನರಾರಂಭದ ಪೂರ್ವದಲ್ಲಿ ಮುಳಿಂಜ ಶಾಲೆಯಲ್ಲಿ ಶಾಲಾ ಶಿಕ್ಷಕ ಹಾಗೂ ರಕ್ಷಕರು ನಡೆಸಿದ Painting... cleaning... cutting

 
 
ದಿನಾಂಕ 28-10-2021ರಂದು ಜಿ. ಎಲ್. ಪಿ. ಎಸ್ ಮುಳಿಂಜ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ಯಾಗಿ ಚಿತ್ರಾವತಿ ಯಂ ಅಧಿಕಾರ ಸ್ವೀಕರಿಸಿದರು
 
 

ಸಂದಿಗ್ದ ಪರಿಸ್ಥಿತಿಯಲ್ಲಿ ಸಹಕರಿಸಿದ ಕೊಕ್ಕೆಚಾಲ್ ವಾಫಿ ಕಾಲೇಜಿನ ವಿದ್ಯಾರ್ಥಿಗಳಿಗೆ ನನ್ನ ನಮನಗಳು . ಮುಳಿಂಜ ಶಾಲೆಗೆ ನೂತನ ಮುಖ್ಯ ಶಿಕ್ಷಕಿಯಾಗಿ ಬಡ್ತಿ ಗೊಂಡ ಎರಡನೇ ದಿನದಲ್ಲಿ ಶಾಲೆ ಆರಂಭ. ಶಾಲಾ ಪರಿಸರ ಶುಚಿಗೊಳಿಸುವುದು ತಲೆನೋವಾಗಿ ಪರಿಣಾಮಿಸಿದಾಗ.. ಧಿಡೀರ್ ಸಂಜೆ ಮೂರು ಗಂಟೆಯ ನಂತರ ಬಂದು ಸಹಕರಿಸಿದ ಇವರು Compulsory Social Service ನ ಭಾಗವಾಗಿ ಸೇವೆಸಲ್ಲಿಸಿದರು. ಹೃದಯಂತರಾಳಾದ ಧನ್ಯವಾದಗಳು.
 
ಸಂದಿಗ್ದ ಪರಿಸ್ಥಿತಿಯಲ್ಲಿ ಸಹಕರಿಸಿದ ಕೊಕ್ಕೆಚಾಲ್ ವಾಫಿ ಕಾಲೇಜಿನ ವಿದ್ಯಾರ್ಥಿಗಳಿಗೆ ನನ್ನ ನಮನಗಳು .
 

ಮಂಗಲ್ಪಾಡಿ ಪಂಚಾಯತ್ ನ white guard ತಂಡವು ಕೊರೊನಾ ಮುಂಜಾಗ್ರತಾ ಕ್ರಮದ ಭಾಗವಾಗಿ ಮುಳಿಂಜ ಶಾಲೆಯನ್ನು ಅಣುಮುಕ್ತಗೊಳಿಸುವ ಕಾರ್ಯದಲ್ಲಿ ಕೈಜೋಡಿಸಿದರು.
 
 


ಮುಳಿಂಜ ಶಾಲೆಯಲ್ಲಿ ಪ್ರವೇಶೋತ್ಸವ.
 

YOUTUBE LINK:: https://youtu.be/m-35ZLODBFg


ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾ ಸಂಸ್ಠೆಯಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಹಬ್ಬದ ಮಹತ್ವಮತ್ತು ಸಹೋದರತ್ವದ ಆಶಯ ತಿಳಿಸುವ ಉದ್ದೇಶದಿಂದ ನಡೆದ ಕಾರ್ಯಕ್ರಮವನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿನ ಉಪ್ಪಳ ಟೌನ್ ಸದಸ್ಯರಾದ ಶರೀಫ್ ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಅಧ್ಯಕ್ಷತೆ ವಹಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ, ಬಿ.ರ್.ಸಿ. ತರಬೇತುದಾರ ಜೋಯ್, ಶಾಲಾ ಹಿರಿಯ ಶಿಕ್ಷಕಿ ಪುಷ್ಪಲತ ಮೊದಲಾದವರು ಶುಭ ಹಾರೈಸಿದರು. ಶಾಲಾ ಶಿಕ್ಷಕ ರಿಯಾಸ್ ಸ್ವಾಗತಿಸಿ ಅಬ್ದುಲ್ ಬಶೀರ್ ವಂದಿಸಿದರು.
 

YOUTUBE LINK::https://youtu.be/w1sr5r_31OY


Childrens Day @ Mulinja School

ನವೆಂಬರ್ 14 ಶಿಶು ದಿನದ ಅಂಗವಾಗಿ ಮುಳಿಂಜ ಶಾಲೆಯಲ್ಲಿ ರಸ ಪ್ರಶ್ನೆ, ಚಿತ್ರ ರಚನೆ ಸ್ಪರ್ದೆ ಹಾಗೂ ನೆಹರು ಟೊಪ್ಪಿತಯಾರಿ ಕಾರ್ಯ ಗಾರ ನಡೆಲಾಯಿತು. ನಂತರ ಮಕ್ಕಳಿಗೆ ಬಾಲಸಭೆ ನದೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು
 



YOUTUBE LINK:: https://youtu.be/EFL7sa8YZkQ


ಮುಳಿಂಜ ಶಾಲೆಯಲ್ಲಿ “ನವಚೇತನಾ" ಕಾರ್ಯಕ್ರಮ::-ಕೊರೊನಾ ಕಾಲಘಟ್ಟದಿಂದಾಗಿ ಶಾಲಾ ವಿದ್ಯಾರ್ಥಿಗಳಲ್ಲಿ ಮೂಡಿರಬಹುದಾದ ಜಡತ್ವ, ಶಾರೀರಿಕ ಹಾಗೂ ಮಾನಸಿಕ ಬದಲಾವಣೆ, ಆಹಾರಾಭ್ಯಾಸ, ಅಶಿಸ್ತು ತೊಡೆದು ನವೋಲ್ಲಾಸದಿಂದ ಶಾಲಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವ “ನವಚೇತನಾ” ಕಾರ್ಯಕ್ರಮವು ಇತ್ತೀಚೆಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜದಲ್ಲಿ ಫಲಪ್ರದವಾಗಿ ಸಂಪನ್ನ ಗೊಂಡಿತು. ಶಾಲಾ ಶಿಕ್ಷಕವೃಂದ ತರಗತಿ ನಡೆಸಿಕೊಟ್ಟರು.
 
 

YOUTUBE LINK  ::


https://www.youtube.com/watch?v=StoLs6Pfxr8&list=PLCrkCUTvTdgVPWcBM_u-cZHFSzNnk1r53&index=2



ಇಂದು ಡಿಸೆಂಬರ್ 3 ವಿಶ್ವ ವಿಕಲಾಂಗ ದಿನ. ಇದರ ಅಂಗವಾಗಿ ಮಂಜೇಶ್ವರ ಬಿ.ಆರ್.ಸಿ ಮಟ್ಟದ "ಮಗುವಿನೊಂದಿಗೆ ಒಂದು ದಿನ " ಈ ಕಾರ್ಯಕ್ರಮವು ನಮ್ಮ ಮುಳಿಂಜ ಶಾಲೆಯ ವಿಶೇಷ ಸಾಮರ್ಥ್ಯದ ಮಗು ಅಲಿಯಾ ನಾಸ್ ಳ ಮನೆಯಲ್ಲಿ ಜರಗಿತು.ಮಂಗಲ್ಪಾಡಿ ಪಂಚಾಯತು ಅಧ್ಯಕ್ಷೆ ಖದೀಜತ್ ರಿಸಾನ ವಿದ್ಯಾಭ್ಯಾಸ ಹಾಗೂ ಅರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಪನಾ ವಾರ್ಡ್ ಸದಸ್ಯ ಶರೀಫ್ ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಚಿಗುರುಪಾದೆ ಹಿರಿಯ ಶಿಕ್ಷಕಿ ಪುಷ್ಪಲತಾ ಮತ್ತು ಮಂಜೇಶ್ವರ ಬಿ.ಆರ್.ಸಿ ಯ ಪ್ರೋಜೆಕ್ಟ್ ಕೋರ್ಡಿನೇಟರ್ ವಿಜಯ ಕುಮಾರ್, ವಿಶೇಷ ಮಕ್ಕಳ ಶಿಕ್ಷಕಿಯರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.
 
 
 
 

ನಮ್ಮ ಸರಕಾರಿ ಕಿರಿಯಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾಸಂಸ್ಥೆಯ ನವೀಕೃತ ಯೂಟ್ಯೂಬ್ ಚಾನಲ್ ಅನ್ನು ಇತ್ತೀಚೆಗೆ ಮಂಗಲ್ಪಾಡಿ ಪಂಚಾಯತ್ ನ ಉಪ್ಪಳ ಟೌನ್ ವಾರ್ಡ್ ಸದಸ್ಯ....ಶರೀಫ್. ಟಿ. ಯಂ ಉದ್ಘಾಟಿಸಿದರು .ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾದ ನಾರಾಯಣ ದೇಲಂಪಾಡಿ, ಬಿ ರ್ ಸಿ ಯ ಬಿ. ಪಿ. ಸಿ. ವಿಜಯಕುಮಾರ್ ಪಾವಳ, ಶಿಕ್ಷಕ- ರಕ್ಷಕ ಸಂಘ ದ ಅಧ್ಯಕ್ಷರಾದ ಇಬ್ರಾಹಿಂ, ದಿನೇಶ್ ಮುಳಿಂಜ ಉಪಸ್ಥಿತರಿದ್ದರು.ನಮ್ಮದೊಂದು ಸಣ್ಣ ಪ್ರಯತ್ನ,, ನಿಮ್ಮ ಸಲಹೆ ಸಹಕಾರ ಸದಾ ನಮಗಿರಲಿ.
 

YOUTUBE LINK:: https://youtu.be/LS5ZCTKpNJk



 
 
 
 

ಇತ್ತೀಚೆಗೆ ನಡೆದ ಶಾಲಾ ತರಗತಿ ಪಿ,ಟಿ. ಎ. ಸಬೆಯಲ್ಲಿ " ಹೆಣ್ಣು ಮಕ್ಕಳ ಲೈಂಗಿಕ ಶೋಷಣೆ " ಬಗೆಗಿನ ಕೋಮಲ್ ವಿಡಿಯೋ ಪ್ರದರ್ಶಿಸಲಾಯಿತು.
 
 

ತರಗತಿ ಗ್ರಂಥಾಲಯವನ್ನು ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಉದ್ಘಾಟಿಸಿದ ಸಂದರ್ಭ.....
 
 
 

ನಮ್ಮ ಶಾಲೆಯಲ್ಲಿ 73 ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಂಗಲ್ಪಾಡಿ ಪಂಚಾಯತ್ ನ ಉಪ್ಪಳ ಟೌನ್ ನ ಗ್ರಾಮ ಸದಸ್ಯರಾದ ಶರೀಪ್ ಟಿ.ಮ್ ಧ್ವಜಾರೋಹಣ ಗೈದರು. ಶಾಲಾ ಶಿಕ್ಷಕಿ ರೆಹಮತ್ ಗಣರಾಜ್ಯ ದಿನದ ಮಹತ್ವ ತಿಳಿಸಿದರು.ಮುಖ್ಯಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಸ್ವಾಗತಿಸಿ ಹಿರಿಯ ಶಿಕ್ಷಕಿ ಪುಷ್ಪ ಲತ ಸೋಂಕಲ್ಲು ವಂದಿಸಿದರು.
 

ಬಾಲಸಭೆ  :: ಮಕ್ಕಳ ಪ್ರತಿಭೆಯನ್ನು ಹೊರತರುದರ ಜೊತೆಗೆ ವೇದಿಕೆಯ ಭಯವನ್ನು ಹೋಗಲಾಡಿಸಿ ನಿರ್ಭೀತಿಯಿಂದ ತಮ್ಮ ಕಲೆಯನ್ನು ಹೊರಹಾಕಲಿರುವ ಸೂಕ್ತ ವೇದಿಕೆಯೇ ಬಾಲಸಭೆ . ನಮ್ಮ ಶಾಲೆಯಲ್ಲಿ ಪ್ರತಿ ತಿಂಗಳಿಗೊಮ್ಮೆ  ನಡೆಸಲ್ಪಡುವ ಬಾಲಸಭೆ ಬಹಳ ಉತ್ತಮವಾಗಿ ನಡೆಸಲಾಗುತ್ತಿದೆ .ಮಕ್ಕಳಲ್ಲಿ ಕಲಿಕೆಗೆ ಉತ್ತೇಜನ ನೀಡಲು ನಮ್ಮೀ ಶಾಲೆಯಲ್ಲಿ ಪ್ರತಿವಾರ ವಿವಿಧ  ಚಟುವಟಿಕೆಗಳನ್ನು ನೀಡಿ ಸ್ಪರ್ಧೆಗಳನ್ನು ಆಯೋಜಿಸಿದ್ದೇವೆ . ಅವುಗಳು .. ೧.ರಸಪ್ರಶ್ನೆ   ೨.ಒಗಟು ಸ್ಪರ್ಧೆ  ೩. ವಿನೋದ ಗಣಿತ  ೪. ಹಲೋ ಇಂಗ್ಲೀಷ್  ೫. ಅರೆಬಿಕ್ ಕಲಿಯೋಣ ವಾರದ ಮೊದಲ  ದಿನವಾದ  ಸೋಮವಾರ  ಚಟುವಟಿಕೆ ನಡೆಸಿ  ಸಂಬಂಧಪಟ್ಟ ಪ್ರಶ್ನೆಗಳನ್ನು ನೀಡುವುದು . ತದನಂತರ ಶ್ರುಕ್ರವಾರ ವಿಜೇತರಾದವರಿಗೆ ವಿಶೇಷ ಬಹುಮಾನ ನೀಡುವುದು . ಅಂದರೆ ..  MONDAY  ರಸಪ್ರಶ್ನೆ  , TUESDAY  ಒಗಟು ಸ್ಪರ್ಧೆ , WEDNESDAY   ವಿನೋದ ಗಣಿತ  ,THURSDAY  ಹಲೋ ಇಂಗ್ಲೀಷ್,   FRIDAY    ಅರೆಬಿಕ್ ಕಲಿಯೋಣ .
 
 
== ಹೊಸ  ದಾಖಲಾತಿಗೆ  ಬೇಕಾಗಿ  ಮುಳಿಂಜ  ಶಾಲೆಯ  ಅಧ್ಯಾಪಕರು  ಮನೆ  ಮನೆಗೆ  ಭೇಟಿ ==
 
 

"https://schoolwiki.in/index.php?title=G._L._P._S._Mulinja/പ്രവർത്തനങ്ങൾ&oldid=1639536" എന്ന താളിൽനിന്ന് ശേഖരിച്ചത്