സ്വാമീജീസ് എച്ച്. എസ്. എസ്. എട്നീർ/അക്ഷരവൃക്ഷം/ Sathyam shivam sundaram
Sathyam shivam sundaram
ಸಂಜೆ ಹೊತ್ತಲ್ಲಿ ಇಬ್ಬರು ದಂಪತಿಗಳು ಬಹಳ ಬೇಸರದಲ್ಲಿದ್ದರು. ಯಾಕೆ ಎಂದರೆ ಅವರಿಗೆ ಮಕ್ಕಳಿಲ್ಲ ಎಂದು. ಮಕ್ಕಳಿಲ್ಲ ಎಂಬ ಕೊರಗಿನಲ್ಲಿ ಅವರು ಯಾವತ್ತೂ ಅವರು ದೇವರಲ್ಲಿ ಪ್ರಾರ್ಥಿಸುತ್ತಾರೆ. ಒಂದು ದಿನ ಇವರು ಬೇರೆಯೇ ಒಂದು ದೇವಸ್ಥಾನಕ್ಕೆ ಹೋಗಿ ಅಲ್ಲಿ ಅರ್ಚನೆ ಮಾಡಿಸುತ್ತಿರುವಾಗ ಅಲ್ಲಿಯ ಅರ್ಚಕರು "ನಿಮಗೆ ಸಂತಾನ ಪ್ರಾಪ್ತಿ ಆಗಲಿಲ್ಲವೆಂದು ತೋರುತ್ತದೆ. ಹೌದು ತಾನೆ?" ಎಂದು ಕೇಳಿದಾಗ "ಹೌದು ಅರ್ಚಕರೆ." ಎಂದಳು ಹೆಂಡತಿ. ಹಾಗೆ ಹೆಂಡತಿ ಹೇಳಿದಾಗ ಅರ್ಚಕರು "ನೀವು ಸಂತಾನ ಲಕ್ಷ್ಮಿಗೆ ಒಂದು ಹರಕೆ ಹೊತ್ತುಕೊಳ್ಳಿ ಎಲ್ಲಾ ಒಳ್ಳೆದಾಗುತ್ತದೆ ಎಂದು ಅರ್ಚಕರು ಹೇಳಿ ಕಳಿಸಿದ್ರು. ಹಾಗೆ ಅವರಿಗೆ ಸಂತಾನ ಪ್ರಾಪ್ತಿಯೂ ಸುಖ ಪ್ರಸವವೂ ಆಯ್ತು. ಆದರೆ ವಿಷಯ ಏನೆಂದರೆ ತ್ರವಳಿ ಗಂಡು ಮಕ್ಕಳಾಗಿದ್ದರು. ಅವರು ತುಂಬಾನೇ ಮುದ್ದಾಗಿದ್ದರು. ಅವರಿಗೆ ಸತ್ಯೇಶ್ ಶಿವೇಶ್ ಸುಂದರೇಶ್ ಎಂದು ಹೆಸರಿಟ್ಟರು. ಅವರು ಬೆಳೆಯುತ್ತಾ ಬೆಳೆಯುತ್ತಾ ಒಳ್ಳೇ ಗುಣಗಳನ್ನೇ ಕಲಿತುಕೊಂಡಿದ್ದರು. ಅವರು 7ನೇ ತರಗತಿಯ ರಜಾಕಾಲದಲ್ಲಿ ಅವರು ಮೂಲರೂ ಊರು ಸುತ್ತುವಾ ಅಂತ ನಿರ್ಧರಿಸಿ ಊರು ಸುತ್ತಿ ಬಂದರ.ಇದರಿಂದ ಅವರು ತುಂಬಾ ಬಡ ವ್ಯಕ್ತಿಗಳನ್ನು, ರೋಗಿಗಳನ್ನು ತುಂಬಾ ಕಂಡರು.ಇವರನ್ನೆಲ್ಲ ನೋಡಿದ ಈ ಮಕ್ಕಳಿಗೆ ತುಂಬಾ ನೋವಾಯಿತು. ಇವರು ಆ ಕ್ಷಣವೇ ನಾವು ದೊಡ್ಡವರಾದಾಗ ವೈದ್ಯರಾಗಿ ಜನರ ಸೇವೆ ಮಾಡುತ್ತೆವೆ ಅಂದು ಕೊಂಡು ಚೆನ್ನಾಗಿ ಕಲಿತು ಕೊನೆಗೂ ವೈದ್ಯರಾದರು. ವೈದ್ಯ ವೃತ್ತಿ ನಡೆಸುತ್ತಿದ್ದಾಗಲೇ ಅವರು ಹಳ್ಳಿಗಳಿಗೆ ಹೋಗಿ ರೋಗಿಗಳ ಸೇವೆ ಮಾಡುತ್ತಿದ್ದರು. ಹಾಗೆ ಒಂದು ಹಳ್ಳಿಯಲ್ಲಿ ರೋಗಿಗಳ ಸೇವೆ ಮಾಡಬೇಕಾದರೆ ಒಬ್ಬ ರೋಗಿ ತನಗೆ ಹೃದಯಾಘಾತ ಎಂದು ಬಂದನು. ತಕ್ಷಣವೇ ಇವರು ಮೂವರು ಹೃದ್ರೋಗಿಯನ್ನು ಆಸ್ಪತ್ರೆಗೆ ಸೇರಿಸಿದರು. ಆದರೆ ಆಸ್ಪತ್ರೆಯ ಖರ್ಚಿಗೆ ಹೃದ್ರೋಗಿಯ ಮನೆಯವರಲ್ಲಿ ಹಣ ಇರಲಿಲ್ಲ. ಇದನ್ನು ತಿಳಿದ ಅವರು ತಮ್ಮ ಮನೆಯವರಲ್ಲಿ ತಿಳಿಸಿ ಹೃದ್ರೋಗಿಗೆ ಬೇಕಾದ ಚಿಕಿತ್ಸೆ ಮಾಡಿಸಿ ಅವರನ್ನು ಮನೆಗೆ ಕಳುಹಿಸಿದರು. ಇವರು ಮೂವರು ಕೂಡಾ ಮನೆಗೆ ತಲುಪಿದರು. ಸತ್ಯೇಶ್ ಇಬ್ಬರಲ್ಲಿ ಹೇಳಿದ "ನಾವು ಹಣ ಖರ್ಚು ಮಾಡಿದೂದರಿಂದ ಒಂದು ಪ್ರಾಣ ಉಳಿಯಿತು. ಅಕಸ್ಮಾತ್ ನಾವು ಶ್ರಿಮಂತರೆಂಬ ಭಾವನೆಯಿಂದ ಅವರನ್ನು ಕೀಳಾಗಿ ನೋಡಿದ್ದರೆ ಅವರ ಜೀವ ಏನಾಗುತ್ತಿತ್ತೋ ಅಲ್ಲ" " ಹೌದು ಸತ್ಯ ನೀನು ಹೇಳಿದ್ದು ಸರಿಯಾಗಿಯೇ ಇದೆ "ಎಂದ ಸುಂದರೇಶ್ ಹಾಗೆಯೇ " ಅಹುದು ಅಹುದು "ಎಂದು ಶಿವೇಶನು ತಲೆಯಲ್ಲಾಡಿಸಿದನು. ನಂತರ ಇವರು ವೈದ್ಯವೃತ್ತಿಯಲ್ಲಿ ಮುಂದುವರೆದರು. ನೀತಿ :-ಆಸ್ತಿ ಜಾತಿಗಿಂತ ಆರೋಗ್ಯ ಮುಖ್ಯ
|