ಭಯ ಬಿಡು
ಬಡವ ಒಡೆಯ ಎಂಬ ಬೇಧ
ಹೋಯ್ತುಎಲ್ಲಿ ಮಾಯವಾಗಿ
ಪಟ್ಟ ಹಿಡಿದು ಕುಳಿತ ರೋಗ
ಮಡಿತೆಲ್ಲಾ ಸಮಾನವಾಗಿ
ಬೀಗ ಜಡಿದ ಭಾರತವೇ
ರೋಗ ತಡೆಯು ಮಾನವ
ಮನೆಯೆ ನಿನಗೆ ಮಂತ್ರಾಲಯ
ಮರೆಯದಿರು ಮಂತ್ರವ
ಕಯ್ಯ ಕುಲುಕಿ ನಗುವುದಲ್ಲಾ
ಕರ ಮುಗಿವುದೇ ಸಂಸ್ಕೃತಿ
ನಿಮಿಷಕ್ಕೊಮ್ಮೆ ಕೈ ತೊಳೆದು
ಮಾಡಬೇಕು ಜಾಗೃತಿ
ಭಯ ಎಂಬುದು ಮದ್ದು ಅದಲ್ಲ
ಬಿಟ್ಟು ಬಿಡು ನೀ ಭಯ
ಜನಸಂಪರ್ಕ ಕಡಿತಗೊಳಿಸಿ
ತಾರೂ ನೀನು ಹೊಸ ಜಯ
ಮುಂದುವರಿದ ವಿಜ್ಞಾನವು
ಸುಮ್ಮನೆ ಇಲ್ಲ ಖಂಡಿತ
ಕೊರೂನ ಎಂಬ ಮಹಾಮರಿಯ
ಓಡಿಸುವುದು ನಿಶ್ಚಿತ
$