ಅಮ್ಮ ಅಮ್ಮ ಅಮ್ಮ ಎಂದು
ನಾನು ಕೂಗಿ ಕರೆವೆ
ಉಣಲು ತಿನಲು ಕೊಡು ಎಂದು
ನಾನು ಬಂದು ಅಳುವೆ
ಮುದ್ದು ಕಂದ ಬಾರೋ ಎಂದು
ತಾಯಿ ನನ್ನ ಕರೆವಳು
ಉಣಲು ತಿನಲು ಕೊಟ್ಟು ನನಗೆ
ಮುದ್ದು ಮಾಡು ತಿರುವಳು
ಸುಳ್ಳು ಮಾತು ಹೇಳಬೇಡ
ಎಂಬ ಬುದ್ಧಿಯ ನಾಡುತ
ಮೋಸ ಏನು ಮಾಡಬೇಡ
ಎಂಬ ಪಾಠವ ಕಲಿಸುತ
ತಾಯಿ ಎಂಬ ನಾಮಪದವು
ಮನದಲ್ಲಿ ಇರುವುದು
ನನ್ನ ತಾಯಿಯು ದೇವರೆನಗೆ
ಅವಳೇ ನನ್ನ ಜೀವಕೆ