ಹೂವೇ ಹೂವೇ ಹೂವೇ
ನಿನ್ನನು ನೋಡಲು ಬಲು ಚಂದ
ಸೂರ್ಯನ ಕಂಡು ಅರಳುವೆ ನೀನು
ಘಮ ಘಮ ಪರಿಮಳ ಸೂಸುವೆ ನೀನು
ಬಗೆ ಬಗೆ ಹೆಸರನು ಹೊಂದಿಹೆ ನೀನು
ನಿನ್ನನು ನೊಡಲು ಬಲುಅಂದ
ದುಂಬಿಯ ಹತ್ತಿರ ಬರ ಸೆಳೆವೆ
ಜಗದೊಳು ನೀನೇ ಬಲುಚಂದ
ಮಕರಂದದ ಸವಿಯನು ಉಣ್ಣಿಸುವೆ
ನಿನ್ನನು ನೋಡಿ ಸಂತಸಗೊಂಡೆ
ಎಲ್ಲರ ಪ್ರೀತಿಯ ಓ ಹೂವೆ
ನಗುತಲಿ ನಿನ್ನನು ಸ್ಪರ್ಶಿಸುವೆ