ಬೀದಿಯಲ್ಲಿ ಇದ್ದ ಅಪರಿಚಿತ
ಬಾಲ್ಯದಲ್ಲೇ ಅನಾಥನಾದವನು
ಬೀದಿಯಲ್ಲಿ ಇರುವನು
ತಂದೆ ಇಲ್ಲ ತಾಯಿ ಇಲ್ಲ
ಬಂಧುಬಳಗ ಯಾರೂ ಇಲ್ಲ
ರೈಲು ಹಳಿಯಲ್ಲಿ ಕುಳಿತು
ಚಿಂತಿಸುತ್ತಿರುವೆ ಯೇನು?
ಇಹಲೋಕ ತ್ಯಜಿಸಿದ ಮಾತೃ ಪಿತೃ
ನೆನೆದುಕೊಂಡು ಸೋತಿರುವೆ
ಬದುಕಿನ ಜೀವನದಲ್ಲಿ
ಅಲ್ಲೋಲ ಕಲ್ಲೋಲವಾಗಬಹುದು
ದುಃಖದ ಸರೋವರವು
ಅಲೆಯಂತೆ ಹರಿಯಬಹುದು
ಹಸಿವಿನಿಂದ ಒದ್ದಾಡಿ
ಹಲವು ನೆನೆಪು ಕಾಡಿ
ಇಂದು ಒದ್ಜಾಡುತ್ತಿದೆ
ಸವಿಗನಸಿನ ಮನಸ್ಸು
ಬೇಸರದ ಕಾರ್ಮೋಡಗಳು
ಆವರಿಸಿದೆ ಮನದಾಳದಲ್ಲಿ
ಆಕಾಶದ ಚುಕ್ಕೆ ಚಂದ್ರಗಳು
ಬರಲಿಲ್ಲ ಯಾಕಿಲ್ಲಿ?