ജി.എച്ച്.എസ്.എസ്. പൈവളികെ നഗർ/അക്ഷരവൃക്ഷം/ ಅತಿ ಆಸೆ ಗತಿಗೇಡು
ಅತಿ ಆಸೆ ಗತಿಗೇಡು
ಒಂದೂರಿನಲ್ಲಿ ಒಂದು ಪುಟ್ಟ ಗ್ರಾಮವಿತ್ತು.ಆ ಗ್ರಾಮದ ನಾಯಕ ಅಶೋಕನಾಗಿದ್ದನು.ಅವನಿಗೆ ಎರಡು ಮುದ್ದಿನ ಮಕ್ಕಳಿದ್ದರು. ಅಶೋಕನಿಗೆ ತನ್ನಲ್ಲಿ ಇಲ್ಲದಿದ್ದರೂ ಬೇರೆಯವರ ಹಣವನ್ನು ಕಿತ್ತುಕೊಳ್ಳುವ ಅಹಂಕಾರ.ಅವನು ಬಡವರ ಮತ್ತು ಭಿಕ್ಷುಕರ ಹಣವನ್ನು ಲಪಟಾಯಿಸಿ ಮನೆಯಲ್ಲಿ ಸಂಗ್ರಹಿಸಿ ಇಡುತ್ತಿದ್ದನು.ಹೀಗಿರಲು ಒಂದು ದಿನ ರಾತ್ರೆ ಅಶೋಕನ ಮನೆಗೆ ಬೇರೊಬ್ಬ ಕಳ್ಳ ಲಗ್ಗೆ ಇಟ್ಟು ಅಶೋಕ ಸಂಗ್ರಹಿಸಿಟ್ಟದ್ದನ್ನೆಲ್ಲ ಕೊಂಡು ಹೋದ.ಮರುದಿನ ಬೆಳಗ್ಗೆ ನೋಡಿದಾಗ ಅಶೋಕನ ಮನೆ ಖಾಲಿಯಾಗಿತ್ತು.ಇದರಿಂದ ಅಶೋಕನಿಗೆ ಬೇಸರವಾಗಿ ಅವನು ಕಳ್ಳತನ ಮಾಡಿದ ಮನೆಯವರ ಮನಸ್ಸು ಅರ್ಥವಾಯಿತು. ಅಂದಿನಿಂದ ಅಶೋಕ ಕಳ್ಳತನವನ್ನು ಬಿಟ್ಟು ಒಳ್ಳೆಯವನಾಗಿ ಬಾಳಿದ.
|