2022-23 വരെ2023-242024-25


ಜ್ಞಾನಜ್ಯೋತಿ ಬೆಳಗುವ ಗ್ರಂಥಾಲಯ

Smt Ishwari D Teacher in Charge of Library

1976 ರಲ್ಲಿ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಧರ್ಮತಡ್ಕ ವಿದ್ಯಾಸಂಸ್ಥೆ ಆರಂಭಗೊಂಡಿತು. ಈ ಶಾಲೆಗೆ ಬರುವ ವಿದ್ಯಾರ್ಥಿಗಳ ಹೆಚ್ಚಿನ ಜ್ಞಾನ ನಿರ್ಮಾಣಕ್ಕಾಗಿ ಸಣ್ಣ ಕವಾಟಿನಲ್ಲಿ ಆರಂಭಗೊಂಡ ಗ್ರಂಥಾಲಯ ಇಂದು ಮಕ್ಕಳ ಓದಿಗಾಗಿ ಪ್ರತ್ಯೇಕ ಗ್ರಂಥಾಲಯ ಕೋಣೆಯನ್ನೇ ನಿರ್ಮಿಸಲಾಗಿದೆ. ಅಲ್ಲಿ 3000ಕ್ಕೂ ಹೆಚ್ಚು ಪುಸ್ತಕಗಳಿವೆ. ಅದರ ಸಂಪೂರ್ಣ ಸದುಪಯೋಗವನ್ನು  ಮಾಡಿಕೊಂಡು ಜ್ಞಾನವನ್ನು ವೃದ್ಧಿಸಲು ಸಾಕಷ್ಟು ಅವಕಾಶಗಳು ಇಲ್ಲಿವೆ. 'ದೇಶ ಸುತ್ತಿ ನೋಡು ಕೋಶ ಓದಿ ನೋಡು'ಎಂಬಂತೆ ಮಕ್ಕಳ ಜ್ಞಾನಾರ್ಜನೆಗೆ ಪುಸ್ತಕಗಳು ಅತಿ ಅಗತ್ಯ. ಪುಸ್ತಕವು ಒಬ್ಬ ಆತ್ಮೀಯ ಗೆಳೆಯನಿದ್ದಂತೆ. ಸಮಯ ಕಳೆಯುವುದಕ್ಕೂ, ಜ್ಞಾನವನ್ನು ಹೆಚ್ಚಿಸಲು, ಹೊಸ ಹೊಸ ವಿಚಾರವನ್ನು ತಿಳಿದುಕೊಳ್ಳಲು ಈ ಪುಸ್ತಕವೆಂಬ ಗೆಳೆಯ ಸಹಾಯಕ. ನಮ್ಮ ಗ್ರಂಥಾಲಯದಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಗೆ ಸಂಬಂಧಿಸಿದ ಕಥೆ, ಕವನ, ಕಾದಂಬರಿ, ನಾಟಕ, ವ್ಯಕ್ತಿ ಪರಿಚಯ, ಕವಿ ಪರಿಚಯ, ಸ್ಥಳ ಪುರಾಣ ಹೀಗೆ ಹತ್ತು ಹಲವಾರು ಪುಸ್ತಕಗಳಿವೆ. ಆಯಾ ಪಾಠಕ್ಕೆ ಪೂರಕ ಓದಿಗೆ ಸಂಬಂಧಿಸಿದ ಪುಸ್ತಕಗಳು ಸಾಕಷ್ಟಿವೆ. ಈ ಎಲ್ಲ ಪುಸ್ತಕಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ. 8, 9, 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಸಮಯದಲ್ಲಿ ಪುಸ್ತಕವನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 9:20 ರಿಂದ 9:50 ರ ವರೆಗೆ ಮಧ್ಯಾಹ್ನ 1:10 ರಿಂದ 1:25ರ ವರೆಗೆ ಸಾಯಂಕಾಲ 4 ಗಂಟೆಯಿಂದ 4:30ರ ವರೆಗೆ ಪುಸ್ತಕವನ್ನು ಮಕ್ಕಳಿಗೆ ವಿತರಿಸಲಾಗುವುದು. ಮಾಧ್ಯಮಗಳ ಪ್ರಭಾವದಿಂದ ಇಂದು ಮಕ್ಕಳಲ್ಲಿ ಓದುವ ಆಸಕ್ತಿ ಕಡಿಮೆಯಾಗುವುದನ್ನು ಮನಗಂಡು ಅವರ ಓದುವ ಆಸಕ್ತಿ ಹೆಚ್ಚಿಸಲು ಓದುವ ಸ್ಪರ್ಧೆ, ಓದಿನ ಟಿಪ್ಪಣಿ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ನಡೆಸುತ್ತಿದ್ದೇವೆ. ಹೆಚ್ಚು ಪುಸ್ತಕ ಓದುವ ತರಗತಿ ವಿದ್ಯಾರ್ಥಿಗಳನ್ನು ಅಸೆಂಬ್ಲಿಯಲ್ಲಿ ಪ್ರೋತ್ಸಾಹಿಸುವುದು; ಹೆಚ್ಚು ಪುಸ್ತಕ ಓದಿ ಓದಿನ ಟಿಪ್ಪಣಿ ಬರೆದ ವಿದ್ಯಾರ್ಥಿಯನ್ನು ಅಭಿನಂದಿಸುವಂತಹ ಹಲವಾರು ಯೋಜನೆಯನ್ನು ಹಮ್ಮಿಕೊಂಡು ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಹೆಚ್ಚಿಸುತ್ತಿದ್ದೇವೆ. ಪಿ.ಎನ್ ಪಣಿಕರ್ ಅವರ ಚರಮ ದಿನದ ಅಂಗವಾಗಿ ಓದಿನ ಟಿಪ್ಪಣಿ ಸ್ಪರ್ಧೆ ನಡೆಸಿ ಅದರಲ್ಲಿ ಪ್ರಥಮ ಹಾಗೂ ಉತ್ತಮ ಐದು ಟಿಪ್ಪಣಿ ಬರೆದವರಿಗೆ ಪ್ರಸನ್ನ ವಿ. ಚೆಕ್ಕೆಮನೆ ಅವರು ಬರೆದ 'ಹೂ ಮಳೆಗೆ ಮಿನುಗುವ ಮೇಘಗಳು' ಎಂಬ ಕಥಾ ಸಂಕಲನ ಪುಸ್ತಕವನ್ನು ಬಹುಮಾನವಾಗಿ ನೀಡಲಾಯಿತು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರೋತ್ಸಾಹಕ ಬಹುಮಾನವಾಗಿ ನೋಟು ಪುಸ್ತಕವನ್ನು ವಿತರಿಸುವ ಮೂಲಕ ಮಕ್ಕಳ ಓದುವ ಆಸಕ್ತಿಯನ್ನು ಬೆಳೆಸಲು ಪ್ರೋತ್ಸಾಹವನ್ನು ನೀಡಲಾಯಿತು. ಕೇರಳ ಸರಕಾರ ಕಳೆದ ವರ್ಷ ಗ್ರಂಥಾಲಯಕ್ಕಾಗಿ ನೀಡಿದ 10,000 ಹಣವನ್ನು ಕನ್ನಡ, ಹಿಂದಿ, ಇಂಗ್ಲಿಷ್ ಆಕರ್ಷಕ ಕಥೆ ಪುಸ್ತಕವನ್ನು ಖರೀದಿಸಲು ಬಳಸಲಾಯಿತು. ಅದರ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಜ್ಞಾನದಾಹವನ್ನು ತಣಿಸುವಲ್ಲಿ ನಮ್ಮ ಗ್ರಂಥಾಲಯ ಯಶಸ್ವಿಯಾಗಿದೆ.