ನೋಡು ಅದೋ ಹೊಲದ ಮಧ್ಯೆ
ನಮ್ಮ ಅನ್ನದಾತನು
ಬಯಲ ಕೆಸರಿನಲ್ಲಿ ದುಡಿವ
ಅವನೆ ನಮ್ಮ ಮಿತ್ರನು
ಎಲ್ಲರೊಡನೆ ಬೆರೆತು ಬಾಳ್ವ
ಕರ್ಮಮಾರ್ಗ ಅವನದು
ಜಡತೆಯಿಲ್ಲ ಕಠಿಣ ದುಡಿಮೆ
ಸತ್ಯ ನಿಷ್ಠೆಯವನದು
ಆ ಕೆಲಸ ಈ ಕೆಲಸ
ಭೇದ ಭಾವವಿಲ್ಲದೆ
ದುಡಿವನವನು ನಿತ್ಯ ಸತ್ಯ
ಕೀಳರಿಮೆ ಇಲ್ಲದೆ
ಕೃಷಿ ಪ್ರಧಾನ ನಮ್ಮ ದೇಶ
ದೇಳ್ಗೆಗವನೆ ಕಾರಣ
ದುಡಿತವೆಂದು ಜೀವಸವೆದ
ಅವನ ಜನ್ಮ ಪಾವನ