ബി.ഇ.എം. എച്ച്. എസ്. കാസർഗോഡ്/അക്ഷരവൃക്ഷം/ ಒಂಟೆಗಳಿಗೆ ಜೋಗುಳ
ಒಂಟೆಗಳಿಗೆ ಜೋಗುಳ
ಒಬ್ಬಾತನು ಒಂದು ದೊಡ್ಡ ತೋಟದ ನಡುವೆ ಆಶ್ರಮದಲ್ಲಿದ್ದ ಮುನಿಗಳ ಹತ್ತಿರ ಬಂದು "ಸ್ವಾಮಿಗಳೇ, ನನಗೆ ಮನೆಯಲ್ಲಿ, ಆಫೀಸಿನಲ್ಲಿ, ಊರಿನಲ್ಲಿ, ಅಕ್ಕಪಕ್ಕದಲ್ಲಿ, ಎಲ್ಲಕಡೆಯೂ ತೊಂದರೆಯ ಮೇಲೆ ತೊಂದರೆ.ಏನು ಮಾಡಬೇಕೆಂದು ಗೊತ್ತಾಗ್ತಿಲ್ಲ. ಎಲ್ಲಾ ಕಡೆ ಸುತ್ತಾಡಿ, ಈಗ ತಮ್ಮಲ್ಲಿಗೆ ಪರಿಹಾರಕ್ಕಾಗಿ ಬಂದಿದ್ದೇನೆ "ಎಂದನು.ಮುನಿಗಳು "ಸರಿ ಸರಿ, ಮೊದಲು ನೀನು ನಿನ್ನ ತೋಟಕ್ಕೆ ಹೋಗಿ ಅಲ್ಲಿರುವ ಒಂಟೆಗಳು ಏನು ಮಾಡುತ್ತಿವೆ ಎಂದು ನೋಡಿಕೊಂಡು ಬಾ... "ಎಂದು ಕಳುಹಿಸಿದರು. ಅವನು ತೋಟದಿಂದ ವಾಪಾಸು ಬಂದು, " ಸ್ವಾಮಿ, ಅಲ್ಲಿ ಸುಮಾರು 100 ಒಂಟೆಗಳು ನಿಂತುಕೊಂಡು ಮೆಲುಕು ಹಾಕುತ್ತವೆ" ಎಂದನು. "ಸರಿ, ನೀನು ಇವತ್ತು ತೋಟಕ್ಕೆ ಹೋಗಿ, ಅಲ್ಲಿರುವ ಎಲ್ಲಾ ಒಂಟೆಗಳನ್ನು ನೆಲದಮೇಲೆ ಮಲಗಿಸಿದ ನಂತರ ನಿದ್ರೆ ಮಾಡು" ಎಂದರು. ಅವನು ಒಂಟೆಗಳ ಹತ್ತಿರ ಬಂದು ಒಂದೊಂದಾಗಿ ಮಲಗಿಸಲು ಪ್ರಯತ್ನಿಸಿದನು. ಒಂದನ್ನು ಕಷ್ಟಪಟ್ಟು ಕೆಳಗೆ ಮಲಗಿಸಿ, ಮತ್ತೊಂದರ ಹತ್ತಿರ ಬಂದಾಗ ಅದು ಮತ್ತೆ ಮೇಲೇಳುತ್ತಿತ್ತು. ಇಡೀ ರಾತ್ರಿ ಒಂಟೆಗಳನ್ನು ಮಲಗಿಸುವ ವಿಫಲಯತ್ನದ ಭರಾಟೆಯಲ್ಲಿ ಇವನಿಗೆ ನಿದ್ರೆ ಮಾಡಲು ಸಮಯವೇ ಸಿಗಲಿಲ್ಲ. ಬೆಳಗ್ಗೆ ತುಂಬ ಸುಸ್ತಾದವನಂತೆ ಮುನಿಗಳ ಬಳಿ ಬಂದು "ಸ್ವಾಮಿಗಳೇ, ಒಂಟೆಗಳನ್ನು ಮಲಗಿಸುವುದು ಬಲು ಕಷ್ಟದ ಕೆಲಸ. ಒಂದನ್ನು ಮಲಗಿಸಿದರೆ ಇನ್ನೊಂದು ಏಳುತ್ತಿತ್ತು, ಕೆಲವು ತಾನಾಗಿ ಮಲಗುತ್ತಿತ್ತು, ಕೆಲವು ತುಂಬಾ ಕಷ್ಟ ಪಟ್ಟರೆ ಮಾತ್ರ ಮಲಗುತ್ತಿತ್ತು, ಆದ್ದರಿಂದ ನನಗೆ ಮಲಗಲು ಸಮಯವೇ ಸಿಗಲಿಲ್ಲ" ಎಂದನು. ಮುನಿಗಳು " ನೋಡಿದ್ಯಪ್ಪ, ನಮಗೆ ಬರುವ ಕಷ್ಟಗಳು ಸಹ ಈ ಒಂಟೆಗಳಂತೆ. ಒಂದು ಕಷ್ಟವನ್ನು ಕೊನೆಗಾಣಿಸುವಲ್ಲಿ ಇನ್ನೊಂದು ಎದ್ದು ನಿಲ್ಲುತ್ತದೆ. ಕೆಲವು ನಮ್ಮ ಪ್ರಯತ್ನದಿಂದ ಸರಿಯಾಗುವುದು. ಕೆಲವು ನಾವು ಏನು ಮಾಡಿದರೂ, ಕೊನೆಗಾಣದೆ ಕಾಲಕ್ರಮೇಣ ಸರಿಯಾಗುವುದು. ಆದ್ದರಿಂದ ಸಮಸ್ಯೆಗಳು ಬಂದಾಗ ಧೃತಿಗೆಡದೆ ನಮ್ಮ ಪ್ರಯತ್ನ ಬಿಡದೆ, ಸರಿಮಾಡಲು ತೊಡಗಬೇಕು. ಸಮಸ್ಯೆಯಿಂದ ಪಲಾಯನ ಮಾಡದೆ ನಿದ್ದೆಗೆಡುವುದರಿಂದ ಏನು ಪ್ರಯೋಜನವಿಲ್ಲವೆಂದು ನಿನ್ನಲಿ ಅರಿವು ಮೂಡಿಸಲು ಒಂಟೆಗಳ ಸಹಾಯ ಪಡಬೇಕಾಯಿತು" ಎಂದಾಗ, "ಹೌದು ಸ್ವಾಮಿ, ಈಗ ನಾನು ಮಾನಸಿಕವಾಗಿ ಗಟ್ಟಿಯಾಗಿದ್ದೇನೆ, ಏನೇ ಬಂದರೂ, ಧೈರ್ಯದಿಂದ ಎದುರಿಸುತ್ತೇನೆ"ಎಂದಾಗ, "ನಿನಗೆ ಒಳ್ಳೆಯದಾಗಲಿ" ಎಂದು ಹಾರೈಸಿ ಬೀಳ್ಕೊಟ್ಟರು.
സാങ്കേതിക പരിശോധന - Vijayanrajapuram തീയ്യതി: 05/ 05/ 2020 >> രചനാവിഭാഗം - കഥ |