(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
Prakrithiya thuntaata
ಪ್ರಕೃತಿಯ ತುಂಟಾಟ
ಪೂರ್ವ ದಲ್ಲಿ ಸೂರ್ಯನ ಬೆಳಕು ಹರಡುತ್ತಾl
ಸೂರ್ಯನ ಕಿರಣಕ್ಕೆ ಹೂಗಳು ಅರಳುತ್ತಾll
ಹಕ್ಕಿಗಳ ಇಂಪಾದ ದನಿl
ಬಾನಿನಿಂದ ಬೀಳುತ್ತಿರುವ ಮಂಜು ಹನಿll
ಇಂಥಾ ಸೌಂದರ್ಯ ಇನ್ನೆಲ್ಲಿದೆ
ಅದೇ ನಮ್ಮ ಪ್ರಕೃತಿಯಲ್ಲಿದೆll
ಜೋರಾಗಿ ಬೀಳುತ್ತಿದೆ ಮಳೆ
ಕಲ ಕಲನೆ ಹರಿಯುತ್ತಿದೆ ಹೊಳೆl
ಕೆಸರಿನಲ್ಲಿ ಆಡಿದ ಮಕ್ಕಳೇ
ನಿಮ್ಮ ಮೈ ತುಂಬಾ ಕೊಳೆl
ಇಂಥಾ ಆನಂದ ಇನ್ನೆಲ್ಲಿದೇ
ಅದೇ ನಮ್ಮ ಪ್ರಕೃತಿಯಲ್ಲಿದೇll
ಮಧ್ಯಾಹ್ನದ ಹೊತ್ತು ಸುಡುತಿರುವ ಬಿಸಿಲುl
ಮರಗಳು ನೀಡುತ್ತಿದೆ ತಂಪಾದ ನೆರಳುll
ಒಣಗಿ ಹೋದ ಮರ ಗಿಡಗಳು
ಬತ್ತಿ ಹೋದ ನದಿ ಕೆರೆಗಳುll
ಇದೇನು ಆಟವೇ ಕಾಟವೇ
ಇದೆಲ್ಲಾ ಪ್ರಕೃತಿಯ ತುಂಟಾಟll
ಜೋರಾಗಿ ಬೀಸುತ್ತಿದೆ ಸಮುದ್ರದ ಅಲೆಗಳುl
ತಮ್ಮ ಗೂಡಿಗೆ ತೆರಳುತ್ತಿರುವ ಪ್ರಾಣಿ ಪಕ್ಷಿಗಳುll
ಪಶ್ಚಿಮದಿ ಅರುಣನ ಅಸ್ತಮಾನl
ಬೆಳುದಿಂಗಳ ಚಂದ್ರನ ಆಗಮನll
ಅಸ್ತಮಾನದಿ ಸಮುದ್ರದ ಆಚೆ ಅಡಗುತ್ತಿರುವ ರವಿಯುl
ಕತ್ತಲಾಗುತ್ತಲೆ ಮನೆಮನೆಯಲ್ಲಿ ರವಿಯಂತೆ ದೀಪೋದಯವುll
ಇದೇ ಪ್ರಕೃತಿಯ ನಿಯಮ
ಇದೋ ಪ್ರಕೃತಿಗೆ ನನ್ನ ನಮನll