ബി.ഇ.എം. എച്ച്. എസ്. കാസർഗോഡ്/അക്ഷരവൃക്ഷം/ ಬೇಡವೆಂದರೂ ಬರುವುದು... !

10:28, 1 മേയ് 2020-നു ഉണ്ടായിരുന്ന രൂപം സൃഷ്ടിച്ചത്:- Kannans (സംവാദം | സംഭാവനകൾ) (added Category:അക്ഷരവൃക്ഷം 2020 കന്നഡ രചനകൾ using HotCat)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
ಬೇಡವೆಂದರೂ ಬರುವುದು... !
ಒಬ್ಬ ಶಿಷ್ಯನು ತನ್ನ ಗುರುಗಳ ಹತ್ತಿರ ಬಂದು "ಗುರುಗಳೇ, ನನ್ನ ಜೀವನದಲ್ಲಿ ಸಂತೋಷ, ಆನಂದ ಅನ್ನೋದೇ ಇಲ್ಲ." ಅಂತ ಪೇಚಾಡಿಕೊಂಡನು. ಆಗ ಗುರುಗಳು ಅವನನ್ನು ಒಂದು ತೋಟಕ್ಕೆ ಕರೆದುಕೊಂಡು ಹೋದರು. ಅಲ್ಲಿ ಬಣ್ಣಬಣ್ಣದ ಚಿಟ್ಟೆಗಳು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹಾರಾಡಿಕೊಂಡು ಸಂಭ್ರಮಿಸುತ್ತಿದ್ದವು.

ಗುರುಗಳು ಅವನ ಹತ್ತಿರ "ನೀನು ಒಂದೇ ಒಂದು ಚಿಟ್ಟೆಯನ್ನು ಕೈಯಲ್ಲಿ ಹಿಡಿದುಕೊಂಡು ಬಾ.." ಎಂದರು. ಅವನು ಚಿಟ್ಟೆಗಳನ್ನು ಅಟ್ಟಿಸಿಕೊಂಡು ಹೋದನು. ಆದರೆ ಅವನಿಂದ ಒಂದೇ ಒಂದು ಚಿಟ್ಟೆಯನ್ನೂ ಹಿಡಿಯಲು ಆಗಲೇ ಇಲ್ಲ.ಅದನ್ನು ನೋಡಿ ಗುರುಗಳು ಅವನಿಗೆ "ಪರವಾಗಿಲ್ಲ ನಾವು ಈ ತೋಟದ ಸೌಂದರ್ಯವನ್ನು ಸವಿಯೋಣ" ಎಂದು ಕರೆದರು.ಹಾಗೆ ತೋಟದ ಮಧ್ಯದಲ್ಲಿ ಒಂದು ಕಡೆ ಕುಳಿತರು. ಆಗ ಮೆಲ್ಲಗೆ ಚಿಟ್ಟೆಗಳು ಅವರ ಹತ್ತಿರವೇ ಸುಳಿದಾಡಲು ಪ್ರಾರಂಭಿಸಿದವು. ಸ್ವಲ್ಪ ಸಮಯದಲ್ಲಿ, ಒಂದು ಚಿಟ್ಟೆ ಮೆಲ್ಲಗೆ ಬಂದು, ಇವನ ಕೈಯ ಮೇಲೆ ಬಂದು ಕುಳಿತಿತ್ತು. ಆಗ ಗುರುಗಳು ಶಿಷ್ಯರಿಗೆ "ನೋಡಪ್ಪ, ನಾವು ಆನಂದವನ್ನು ಅಟ್ಟಿಸಿಕೊಂಡು ಹೋಗುವುದು ಜೀವನವಾಗಬಾರದು. ಜೀವನವನ್ನು ಶಾಂತಿಯಿಂದ, ನೆಮ್ಮದಿಯಿಂದ ಸಾಗಿಸುತ್ತಿದ್ದರೆ, ಆನಂದ -ಸಂತೋಷಗಳು ನಮ್ಮನ್ನು ಹುಡುಕಿಕೊಂಡು ಬರುವುದು" ಎಂದು ಹೇಳಿದ್ದನ್ನು ಕೇಳಿ ಅವನಿಗೆ ಮನದಟ್ಟಾಯಿತು. ಆದ್ದರಿಂದ ನಾವು ನಮ್ಮ ಪ್ರಯತ್ನ ಮಾಡಬೇಕು. ಅದರ ಫಲವಾಗಿ ಸಂತೋಷ, ಆನಂದ ನಮಗೆ ಬೇಡವೆಂದರೂ, ಅದು ನಮ್ಮನ್ನು ಹುಡುಕಿಕೊಂಡು ಬಂದೇ ಬರುತ್ತದೆ

YASHASWI. V. RAI
8 D ബി.ഇ.എം. എച്ച്. എസ്. കാസർഗോഡ്
കാസർഗോഡ് ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ