ಪ್ರಕೃತಿಯ ಸೊಬಗು ಎಷ್ಟಂದ ನೋಡಲು ಹೋದರೆ ಮನತುಂಬಾ ಪ್ರಕೃತಿಯು ನಾಚುವುದು ಬಲು ಅಂದ ಮನಸೂರೆ ಆಗಿಹುದು ಏನಂದ ಹೂವಿನ ಪರಿಮಳ ಹರಡುವುದು ಮರಗಿಡ ನಾಟ್ಯವ ಆಡುವುದು ಹಕ್ಕಿಗಳಿಂಚರ ತುಂಬಿಹುದು ಮನವು ಬಿಚ್ಚಿ ನಲಿದಿಹುದು ಚಿಲಿಪಿಲಿ ಗುಟ್ಟುವ ಹಕ್ಕಿಗಳು ಮಂಜು ಮುಸುಕಿದ ಹೂಗಳು ಜೇನನು ಕುಡಿಯುವ ಚಿಟ್ಟೆಗಳು ಜುಳುಜುಳು ಹರಿಯುವ ನದಿಗಳು