ಸ್ವಾಮೀ ವಿವೇಕಾನಂದ
ಭಾರತದ ಮೂಢನಂಬಿಕೆಗಳ
ರಾಶಿಯನ್ನು ಕಿತ್ತುತೆಗೆದು
ಹೊಸ ದಾರಿಯನ್ನು ತೋರಿದ
ನಮ್ಮೀ ವೀರ ನರೇಂದ್ರನು
ಓದಿನಲ್ಲಿ ಆಟದಲ್ಲಿ
ಒಂದೇ ಮನಸ್ಸನ್ನು ತೋರಿಸಿ
ಜ್ಞಾನ ಶಕ್ತಿ ಬೆಳಸಿ
ದೇಶವನ್ನು ಬೆಳಕಿನತ್ತ ಒಯ್ದರು
ರಾಮಕೃಷ್ಣ ಶಿಷ್ಯರಾಗಿ
ವೆೈಯುಕ್ತಿಕ ಆಸೆ ತ್ಯಜಿಸಿ
ಸನ್ಯಾಸವ ಸ್ವೀಕರಿಸಿ
ಹಿಂದು ಧಮ೯ವ ಸಾರಿದರು
ನರೇಂದ್ರನೆಂಬ ಹೆಸರ ಕಳೆದು
ವಿವೇಕಾನನಂದನಾಗಿ ಮರೆದು
ಧಮ೯ ಸಂತನಾಗಿ ನಡೆದು
ಸ್ವಾಮಿಯೆನಿಸಿಕೊಂಡರು
ಚಿಕಾಗೋದಲ್ಲಿ ನಡೆದ
ವಿಶ್ವಧಮ೯ ಸಮ್ಮೇಳನದಿ
ಸವ೯ಧಮ೯ ಸಮನ್ವಯವ ಸಾರಿ
ಭಾರತದ ಗರಿಮೆಯನ್ನು ಎತ್ತಿಹಿಡಿದರು
ಹಸಿದವರಿಗೆ ಅನ್ನ ಕೊಡಿ
ಬಾಯಾರಿದವರಿಗೆ ನೀರು ಕೊಡಿ
ಜಾತಿ ಮತ ಭೇದೆವಿಲ್ಲದೆ
ಎಲ್ಲರನ್ನು ಪ್ರೀತಿಸಿರಿ
ನಿಮ್ಮಲಿ ನೀವು ವಿಶ್ವಾಸವಿರಿಸಿ
ಬಳಿಕ ದೇವರಲ್ಲಿ ವಿಶ್ವಾಸವಿರಿಸಿ
ಎಂಬ ಸತ್ ಸಂದೇಶವನ್ನು
ಜಗಕೆ ಸಾರಿ ಹೇಳಿದವರು
ತನ್ನ ಮರಣದ ದಿನವ ತಿಳಿಸಿ
ಏಳಿ ಎದ್ದೇಳಿ ಗುರಿ ಮುಟ್ಟುವ
ವರೆಗೂ ನಿಲ್ಲದಿರಿ ಎಂಬ
ಸುಧೆಯ ಮಾತ ಹೇಳಿ ಮರೆಯಾದರು
ವಿಶ್ವ ಮಾನವರಿವರು
ವೀರ ಸನ್ಯಾಸಿಯಿವರು
ಇಂಪಾಗಿ ಹಾಡಿದವರು
ಹೆಮ್ಮೆಯ ವಿವೇಕಾನಂದರು,ನಮ್ಮಯ ವಿವೇಕಾನಂದರು