G. L. P. S. Kunjathur/ചരിത്രം

17:31, 18 ജനുവരി 2022-നു ഉണ്ടായിരുന്ന രൂപം സൃഷ്ടിച്ചത്:- 11214wiki (സംവാദം | സംഭാവനകൾ)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶರ ಗ್ರಾಮ ಪಂಚಾಯಿತನ ಕುಂಜತ್ತೂರು ಗ್ರಾಮದಲ್ಲಿ ಕುಂಜತ್ತೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಿದೆ..ಕೇರಳ ಕರ್ನಾಟಕ ರಾಜ್ಯದ ಗಡಿ ಪರದೇಶದಲ್ಲಿರುವ ಈ ಶಾಲೆಯೂ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ ದಕ್ಷಿಣಕ್ಕೆ 18 ಕಿಲೋ ಮೀಟರ್ ದೂರದಲ್ಲಿದೆ. 1908 ರಲ್ಲಿ ಅಂದಿನ ಮದ್ರಾಸ್ ಸರಕಾರವು ಈ ಶಾಲೆಯನ್ನು ಸರಕಾರೀ ಶಾಲೆಯಾಗಿ ಸ್ಥಾಪನೆ ಮಾಡಿತು.ಆಗ ಈ ಶಾಲೆಗೆ ಕಣ್ವತೀರ್ಥ ಶಾಲೆ ಎಂಬ ಹೆಸರಿತ್ತು.ಮತ್ತು ಒಂದರಿಂದ ಐದನೇ ತರಗತಿಯವರೆಗೆ ತರಗತಿಗಳಿದ್ದುವು.ಕ್ರಮೇಣ ಸರಕಾರಿ ಪ್ರೌಢ ಶಾಲೆ ಕುಂಜತೂರು ಎಂದು ನಾನಾಮಕನಾಮವಾಯಿತು.ಅಲ್ಲದೆ ಒಂದರಿಂದ ಹತ್ತನೇ ತರಗತಿಗಳು ನಡೆಯುತ್ತಿದ್ದುವು ಕನ್ನಡ ಮಾಧ್ಯಮದಲ್ಲಿ ಮಾತ್ರ ಮಕ್ಕಳಿಗೆ ವಿದ್ಯಾಭ್ಯಾಸ ದೊರೆಯುತ್ತಿತ್ತು. 1908 ರಿಂದ 1917 ರ ವರೆಗೆ ಸರಕಾರಿ ಎಲಿಮೆಂಟರಿ ಶಾಲೆ ಕಣ್ವತೀರ್ಥ ಎಂದೂ 1918 ರಿಂದ 1957 ರ ವರೆಗೆ ಸರಕಾರಿ ಬೋರ್ಡು ಎಲಿಮೆಂಟರಿ ಶಾಲೆ ಕುಂಜತ್ತೂರು ಎಂದೂ 1958 ರಿಂದ 1974ರ ವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಜತ್ತೂರು ಆಗಿಯೂ 01-06-1975 ರಿಂದ 31-05-1981 ರಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಂಜತ್ತೂರು ಎಂದೂ ಸರಕಾರವು ಭಡ್ತಿ ಗೋಳಿಸಿ ಪರಿಸರದ ಎಲ್ಲಾ ಮಕ್ಕಳು ವಿದ್ಯಾರ್ಜನೆ ಮಾಡುವಂತೆ ಅನುವು ಮಾಡಿತು. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿ ತರಗತಿ ಕೋಣೆಗಳ ಕೊರತೆ ಕಂಡು ಬಂತು. ತರಗತಿ ನಡೆಸಲು ಕಷ್ಟಕರವಾಯಿತು ಇದನ್ನು ಸರಕಾರವು ಮನಗಂಡು 5 ರಿಂದ 10 ನೇ ತರಗತಿಯವರೆಗಿನ ತರಗತಿಗಳನ್ನು ಇಲ್ಲಿಂದ 1/2 ಕಿಲೋ ಮೀಟರ್ ದೂರದಲ್ಲಿ ಸರಕಾರಿ ಶಾಲಾ ಕಟ್ಟಡಕ್ಕೆ 01-06-1981 ರಂದು ಸ್ಥಳಾಂತರಿಸಲಾಯಿತು. 1ನೇ ತರಗತಿಯಿಂದ 4 ನೇ ತರಗತಿಯವರೆಗಿನ ತರಗತಿಗಳು ಉಳಿದು ಕುಂಜತ್ತೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯೆಂದು ಮಾರ್ಪಟ್ಟಿತು.ಪ್ರಸ್ತುತ ಶಾಲೆಯಲ್ಲಿ ಕನ್ನಡ ; ಮಲೆಯಾಳಂ; ಅರೇಬಿಕ್; ಇಂಗ್ಲಿಷ್ ; ಮತ್ತು ಕಂಪ್ಯೂಟರ್ ವಿದ್ಯಾಬ್ಯಾಸವನ್ನು ನೀಡಲಾಗುವುದು

"https://schoolwiki.in/index.php?title=G._L._P._S._Kunjathur/ചരിത്രം&oldid=1330418" എന്ന താളിൽനിന്ന് ശേഖരിച്ചത്