"എസ് .ഡി. പി. എച്ച്. എസ്. ധർമ്മത്തടുക്ക/Sanskrit Club" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
No edit summary |
||
| വരി 1: | വരി 1: | ||
<p style="text-align:justify"> | <p style="text-align:justify"> | ||
<div style="box-shadow:10px 10px 5px #FF00B4;margin:0 auto; padding:0.9em 0.9em 0.5em 0.5em; border-radius:10px; border:2px solid gray; background-image:-webkit-radial-gradient(white, # | <div style="box-shadow:10px 10px 5px #FF00B4;margin:0 auto; padding:0.9em 0.9em 0.5em 0.5em; border-radius:10px; border:2px solid gray; background-image:-webkit-radial-gradient(white, #66F543); font-size:100%; text-align:justify; width:95%; color:black;"> | ||
== <b class="term"><font size="6" color="blue" face="Noto Serif Kannada" font>ರಾಮಾಯಣ ಮಾಸಾಚರಣೆ</font></b> == | == <b class="term"><font size="6" color="blue" face="Noto Serif Kannada" font>ರಾಮಾಯಣ ಮಾಸಾಚರಣೆ</font></b> == | ||
08:09, 6 ഓഗസ്റ്റ് 2024-നു നിലവിലുണ്ടായിരുന്ന രൂപം
ರಾಮಾಯಣ ಮಾಸಾಚರಣೆ
ಸಂಸ್ಕೃತ ಸಂಘದ ಆಶ್ರಯದಲ್ಲಿ ಮುಖ್ಯ ಅಧ್ಯಾಪಕರಾದ ಶ್ರೀಯುತ ರಾಮಚಂದ್ರಭಟ್ ಇವರ ಸಾರಥ್ಯದಲ್ಲಿ ಎಲ್ಲ ಅಧ್ಯಾಪಕ ಹಾಗೂ ಅಧ್ಯಾಪಕೇತರ ಹಾಗೂ ವಿದ್ಯಾಲಯದ ಎಲ್ಲ ಮಕ್ಕಳ ಸಹ ಯೋಗ್ಯದಲ್ಲಿ ರಾಮಾಯಣ ಮಾಸಾಚರಣೆಯ ಉದ್ಘಾಟನಾ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಇದರೊಂದಿಗೆ ವಿಶೇಷವಾಗಿ ಗುರುಸಮೂಹವನ್ನು ಗೌರವಿಸುವ ಗುರುಪೂಜಾಕಾಯ೯ಕ್ರಮವನ್ನು ಸಂಸ್ಕೃತ ಸಂಘದ ನಾಯಕಿಯಾದ ಕುಮಾರಿ ಅನನ್ಯಾ ಮತ್ತು ಸಹಪಾಠಿಗಳು ಪನ್ನೀರು ಚೆಲ್ಲಿ , ಆರತಿ ಬೆಳಗಿ , ಹೂ ನೀಡಿ ಅರಶಿನ ಕುಂಕುಮವನ್ನಿತ್ತು , ಗುರು ದಕ್ಷಿಣೆಯನ್ನು ನೀಡಿ ಪ್ರಾರ್ಥಿಸಿದರು. ಈ ಮೊದಲು ರಾಮಾಯಣ ಮಾಸಾಚರಣೆಯ ಪ್ರಯುಕ್ತ ಶ್ರೀಮದ್ರಾಮಾಯಣ ಗ್ರಂಥವನ್ನು ಹೊತ್ತ ಘೋಷಯಾತ್ರೆ ಎಲ್ಲರ ಮನಸೂರೆಗೊಂಡಿತು. ಮಕ್ಕಳು ಪುಳಕಿತಗೊಂಡರು. ಎಲ್ಲರ ಮನ ಭಕ್ತಿಭಾವದಲ್ಲಿ ಮುಳುಗಿತು.ಮುಖ್ಯ ಅತಿಥಿಗಳಾಗಿ S. A. T. ಸಂಸ್ಕೃತ ಅಧ್ಯಾಪಕರಾದ ಶ್ರೀ ನಾರಾಯಣ ಜಿ ಹೆಗಡೆಯವರು ಆಗಮಿಸಿ ರಾಮಾಯಣದ ಪ್ರಾಮುಖ್ಯತೆಯನ್ನು ಆದರ್ಶವನ್ನೂ , ಸಂಸ್ಕಾರವನ್ನೂ ಮನಮುಟ್ಟುವಂತೆ ತಿಳಿಸಿದರು . ಶಾಲಾ ಸಂಚಾಲಕರಾದ ಶ್ರೀಸುಬ್ಬಣ್ಣ ಭಟ್ಟರು ಹಿತವಚನವನಗಳನ್ನಿತ್ತು ಮಕ್ಕಳನ್ನು ಆಶೀರ್ವದಿಸಿದರು . ಮುಖ್ಯಗುರುಗಳು ಕಾರ್ಯಕ್ರಮಕ್ಕೆ ಶುಭಕೋರಿದರು . ಸಂಸ್ಕೃತ ಅಧ್ಯಾಪಕರಾದ ಶ್ರೀ ಶಿವನಾರಾಯಣ ಭಟ್ಟರು ಪ್ರಾಸ್ತಾವಿಕ ಭಾಷಣ ಮಾಡಿದರು . ದೀಪ ಬೆಳಗಿ ಶಂಖಧ್ವನಿ ಹಾಗೂ ಶ್ರದ್ಧಾ ಮತ್ತು ತಂಡದವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕು . ಅನನ್ಯಾ ಸ್ವಾಗತಿಸಿ , ರಶ್ಮಿ ಇವರು ವಂದಿಸಿದರು . ಕಾರ್ಯಕ್ರಮದಲ್ಲಿ ಅಷ್ಟಾವಧಾನ ಸೇವೆ ವಿಶೇಷವಾಗಿ ಎಲ್ಲರ ಗಮನಸೆಳೆಯಿತು.ಇದನ್ನು ಶ್ರೀಶ ನಾರಾಯಣ ಹಾಗೂ ತಂಡದವರು ನೆರವೇರಿಸಿದರು . ಕು .ರೇಖಾ ಹಾಗೂ ಮಾ . ಕಾರ್ತಿಕೇಯ ಇವರು ನಿರೂಪಣೆಗೈದರು . ಎಲ್ಲ ಗುರುವೃಂದದವರು ಹಾಗೂ ವಿದ್ಯಾಲಯದ ಮಕ್ಕಳೆಲ್ಲರೂ ಉಪಸ್ಥಿತರಿದ್ದರು .