"എസ് .ഡി. പി. എച്ച്. എസ്. ധർമ്മത്തടുക്ക/Sub Dist Kalolsavam" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
വരി 71: വരി 71:
<font size="5" color="black" face="Noto Serif Kannada" font>
<font size="5" color="black" face="Noto Serif Kannada" font>
ಧರ್ಮತ್ತಡ್ಕ:  62 ನೇ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವವು ಧರ್ಮತ್ತಡ್ಕದ  ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ನವಂಬರ್ 7 ರಿಂದ 10 ರ ತನಕ  ವಿಜ್ರಂಭಣೆಯಿಂದ ನಡೆಯಲಿರುವುದು. ಆ ಪ್ರಯುಕ್ತ 7 ನೇ ತಾರೀಕಿಗೆ  ಎಲ್ಲಾ ರಚನಾ ಸ್ಪರ್ಧೆಗಳನ್ನು ನಡೆಸಲಾಗುವುದು. ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆಯು 8ನೇ ತಾರೀಕಿಗೆ ನಡೆಯುವುದು. ವಿದ್ಯಾಸಂಸ್ಥೆಗಳ ಕರೆಸ್ಪಾಂಡೆಂಟ್ ಶ್ರೀಮತಿ ಶಾರದಾ ಅಮ್ಮ ಧ್ವಜಾರೋಹಣವನ್ನು ಗೈಯುವರು. ಮಂಜೇಶ್ವರ ಶಾಸಕ ಶ್ರೀ ಎ.ಕೆ.ಎಂ ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸುವರು.ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮಂಜೇಶ್ವರ ಉಪ ವಿದ್ಯಾಧಿಕಾರಿ ಶ್ರೀ ಜಿತೇಂದ್ರ ಎಸ್.ಎಚ್ ಪ್ರಾಸ್ತಾವಿಕ ನುಡಿಗಳನ್ನಾಡುವರು‌.ಪುತ್ತಿಗೆ ಪಂಚಾಯತ್ ಅಧ್ಯಕ್ಷ ಶ್ರೀ ಸುಬ್ಬಣ್ಣ ಆಳ್ವ, ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್,ಕಾಸರಗೋಡು ಡಿ.ಡಿ.ಇ ಶ್ರೀ ನಂದಿಕೇಶನ್ ಎನ್, ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀ ಅಬ್ದುಲ್ ಮಜೀದ್ ಎಂ ಎಚ್,ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯೆ ಶ್ರೀಮತಿ ಚಂದ್ರಾವತಿ ಎಂ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಶಾಂತಿ ವೈ,ಶ್ರೀ ಗಂಗಾಧರ,ಶ್ರೀ ಆಸಿಫ್ ಅಲಿ ಸಿ.ಎಂ, ಶ್ರೀಮತಿ ಜಯಂತಿ, ಶ್ರೀಮತಿ ಕಾವ್ಯಶ್ರೀ ಪಿ‌.ಕೆ, ಶ್ರೀಮತಿ ಇರ್ಶಾನ ಎಸ್,ಶ್ರೀಮತಿ ಪುಷ್ಪಲಕ್ಷ್ಮಿ ಎನ್,ಡಯಟ್ ಪ್ರಾಂಶುಪಾಲ ಶ್ರೀ ರಘುರಾಮ ಭಟ್ ಕೆ,ಪಿ.ಟಿ.ಎ ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ , ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಕಮಲಾಕ್ಷ, ವ್ಯವಸ್ಥಾಪಕ ಶ್ರೀ ಶಂಕರನಾರಾಯಣ ಭಟ್,ಶುಭಾಶಯಗಳನ್ನು ತಿಳಿಸುವರು.ಪ್ರಾಂಶುಪಾಲ ಶ್ರೀ ರಾಮಚಂದ್ರ ಭಟ್ ಸ್ವಾಗತಿಸಿ ಮುಖ್ಯೋಪಾಧ್ಯಾಯ ಶ್ರೀ ಗೋವಿಂದ ಭಟ್ ವಂದಿಸುವರು‌. ಸ್ವಾಗತ ಗೀತೆಯೊಂದಿಗೆ ಆರಂಭಗೊಳ್ಳುವ ಈ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸಾಂಪ್ರದಾಯಿಕ ಮೆರವಣಿಗೆಗಳೊಂದಿಗೆ ವೇದಿಕೆಗೆ ಕರೆದುಕೊಂಡು ಬರಲಾಗುವುದು.120 ಕ್ಕೂ ಅಧಿಕ ಶಾಲೆಗಳಿಂದ ಸುಮಾರು 4000 ಕ್ಕೂ ಅಧಿಕ ಪ್ರತಿಭೆಗಳು 10 ರಷ್ಟು ಮುಖ್ಯ ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಈ ಮಹಾ ಉತ್ಸವವನ್ನು ಯಶಸ್ವಿಗೊಳಿಸುವಲ್ಲಿ ಎಲ್ಲಾ  ವಿದ್ಯಾಭಿಮಾನಿಗಳು ,ರಕ್ಷಕರು ಸರ್ವ ಸಹಕಾರವನ್ನು ನೀಡಬೇಕೆಂದು ಸಂಘಟನಾ ಸಮಿತಿಯವರು ವಿನಂತಿಸಿಕೊಂಡಿದ್ದಾರೆ.</font>
ಧರ್ಮತ್ತಡ್ಕ:  62 ನೇ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವವು ಧರ್ಮತ್ತಡ್ಕದ  ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ನವಂಬರ್ 7 ರಿಂದ 10 ರ ತನಕ  ವಿಜ್ರಂಭಣೆಯಿಂದ ನಡೆಯಲಿರುವುದು. ಆ ಪ್ರಯುಕ್ತ 7 ನೇ ತಾರೀಕಿಗೆ  ಎಲ್ಲಾ ರಚನಾ ಸ್ಪರ್ಧೆಗಳನ್ನು ನಡೆಸಲಾಗುವುದು. ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆಯು 8ನೇ ತಾರೀಕಿಗೆ ನಡೆಯುವುದು. ವಿದ್ಯಾಸಂಸ್ಥೆಗಳ ಕರೆಸ್ಪಾಂಡೆಂಟ್ ಶ್ರೀಮತಿ ಶಾರದಾ ಅಮ್ಮ ಧ್ವಜಾರೋಹಣವನ್ನು ಗೈಯುವರು. ಮಂಜೇಶ್ವರ ಶಾಸಕ ಶ್ರೀ ಎ.ಕೆ.ಎಂ ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸುವರು.ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮಂಜೇಶ್ವರ ಉಪ ವಿದ್ಯಾಧಿಕಾರಿ ಶ್ರೀ ಜಿತೇಂದ್ರ ಎಸ್.ಎಚ್ ಪ್ರಾಸ್ತಾವಿಕ ನುಡಿಗಳನ್ನಾಡುವರು‌.ಪುತ್ತಿಗೆ ಪಂಚಾಯತ್ ಅಧ್ಯಕ್ಷ ಶ್ರೀ ಸುಬ್ಬಣ್ಣ ಆಳ್ವ, ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್,ಕಾಸರಗೋಡು ಡಿ.ಡಿ.ಇ ಶ್ರೀ ನಂದಿಕೇಶನ್ ಎನ್, ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀ ಅಬ್ದುಲ್ ಮಜೀದ್ ಎಂ ಎಚ್,ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯೆ ಶ್ರೀಮತಿ ಚಂದ್ರಾವತಿ ಎಂ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಶಾಂತಿ ವೈ,ಶ್ರೀ ಗಂಗಾಧರ,ಶ್ರೀ ಆಸಿಫ್ ಅಲಿ ಸಿ.ಎಂ, ಶ್ರೀಮತಿ ಜಯಂತಿ, ಶ್ರೀಮತಿ ಕಾವ್ಯಶ್ರೀ ಪಿ‌.ಕೆ, ಶ್ರೀಮತಿ ಇರ್ಶಾನ ಎಸ್,ಶ್ರೀಮತಿ ಪುಷ್ಪಲಕ್ಷ್ಮಿ ಎನ್,ಡಯಟ್ ಪ್ರಾಂಶುಪಾಲ ಶ್ರೀ ರಘುರಾಮ ಭಟ್ ಕೆ,ಪಿ.ಟಿ.ಎ ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ , ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಕಮಲಾಕ್ಷ, ವ್ಯವಸ್ಥಾಪಕ ಶ್ರೀ ಶಂಕರನಾರಾಯಣ ಭಟ್,ಶುಭಾಶಯಗಳನ್ನು ತಿಳಿಸುವರು.ಪ್ರಾಂಶುಪಾಲ ಶ್ರೀ ರಾಮಚಂದ್ರ ಭಟ್ ಸ್ವಾಗತಿಸಿ ಮುಖ್ಯೋಪಾಧ್ಯಾಯ ಶ್ರೀ ಗೋವಿಂದ ಭಟ್ ವಂದಿಸುವರು‌. ಸ್ವಾಗತ ಗೀತೆಯೊಂದಿಗೆ ಆರಂಭಗೊಳ್ಳುವ ಈ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸಾಂಪ್ರದಾಯಿಕ ಮೆರವಣಿಗೆಗಳೊಂದಿಗೆ ವೇದಿಕೆಗೆ ಕರೆದುಕೊಂಡು ಬರಲಾಗುವುದು.120 ಕ್ಕೂ ಅಧಿಕ ಶಾಲೆಗಳಿಂದ ಸುಮಾರು 4000 ಕ್ಕೂ ಅಧಿಕ ಪ್ರತಿಭೆಗಳು 10 ರಷ್ಟು ಮುಖ್ಯ ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಈ ಮಹಾ ಉತ್ಸವವನ್ನು ಯಶಸ್ವಿಗೊಳಿಸುವಲ್ಲಿ ಎಲ್ಲಾ  ವಿದ್ಯಾಭಿಮಾನಿಗಳು ,ರಕ್ಷಕರು ಸರ್ವ ಸಹಕಾರವನ್ನು ನೀಡಬೇಕೆಂದು ಸಂಘಟನಾ ಸಮಿತಿಯವರು ವಿನಂತಿಸಿಕೊಂಡಿದ್ದಾರೆ.</font>
<center><gallery mode="packed-overlay" widths="250" heights="230">
പ്രമാണം:11051 KALOSTHAVAINVITAION4.jpg|alt=|'''<b class="term"><font size="3" color="blue" face="Century Schoolbook L" font></font></b></h1>'''
പ്രമാണം:11051 KALOSTHAVAINVITAION3.jpg|alt=
പ്രമാണം:11051 KALOSTHAVAINVITAION2.jpg|alt=
പ്രമാണം:11051 KALOSTHAVAINVITAION1.jpg|alt=
</gallery></CENTER>


== <b class="term"><font size="5" color="#FF029F" face="Noto Serif Kannada" font>ಧರ್ಮತ್ತಡ್ಕ ಶಾಲೆಯಲ್ಲಿ ಕಲೋತ್ಸವಕ್ಕೆ ಸಂಭ್ರಮದ ತೆರೆ</font></b> ==
== <b class="term"><font size="5" color="#FF029F" face="Noto Serif Kannada" font>ಧರ್ಮತ್ತಡ್ಕ ಶಾಲೆಯಲ್ಲಿ ಕಲೋತ್ಸವಕ್ಕೆ ಸಂಭ್ರಮದ ತೆರೆ</font></b> ==

22:22, 7 സെപ്റ്റംബർ 2024-നു നിലവിലുണ്ടായിരുന്ന രൂപം

ಮಂಜೇಶ್ವರ ಉಪಜಿಲ್ಲೆಯ 62ನೇ ಶಾಲಾ ಕಲೋತ್ಸವದ ಸಂಘಟನಾ ಸಮಿತಿ ರೂಪೀಕರಣ

ಧರ್ಮತ್ತಡ್ಕ : ಸೆ.23; ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾ ಸಂಸ್ಥೆಗಳಲ್ಲಿ ನವೆಂಬರ್ 7 ರಿಂದ 10 ರ ತನಕ ನಡೆಯಲಿರುವ, ಮಂಜೇಶ್ವರ ಉಪಜಿಲ್ಲಾ ಮಟ್ಟದ 62ನೇ ಶಾಲಾಕಲೋತ್ಸವದ ಸಂಘಟನಾ ಸಮಿತಿ ರೂಪೀಕರಣವು ಹೈಸ್ಕೂಲ್ ಸಭಾಂಗಣದಲ್ಲಿ ಜರಗಿತು. ಪುತ್ತಿಗೆ ಪಂಚಾಯತ್ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಎಂ.ಎಚ್ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವಿದ್ಯಾರ್ಥಿಯು ಪಠ್ಯದೊಂದಿಗೆ ಪಠ್ಯೇತರ ವಿಷಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಾಗ ಮಾದಕ ವ್ಯಸನಗಳಂತಹ ಸಾಮಾಜಿಕ ಪಿಡುಗುಗಳಿಂದ ದೂರವಿರುವುದಕ್ಕೆ ಸಾಧ್ಯವಾಗುತ್ತದೆ. ಕಲೋತ್ಸವದಂತಹ ವೇದಿಕೆಗಳು, ಮನಸ್ಸನ್ನು ಸತ್ ವಿಚಾರಗಳ ಕಡೆಗೆ ಕೇಂದ್ರೀಕರಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎಂದರು. ಏಷ್ಯಾದಲ್ಲಿ ಅತ್ಯುತ್ತಮ ಕಾರ್ಯಕ್ರಮಗಳಲ್ಲೊಂದಾದ ಕೇರಳ ಶಾಲಾ ಕಲೋತ್ಸವದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು. ಪುತ್ತಿಗೆ ಪಂಚಾಯತ್ ಅಧ್ಯಕ್ಷ ಶ್ರೀ ಡಿ ಸುಬ್ಬಣ್ಣ ಆಳ್ವ ದೀಪ ಬೆಳಗಿಸಿ ಉದ್ಘಾಟಿಸಿದರು. ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಹಸಿರು ಪ್ರೋಟೋಕೋಲ್ ನ್ನು ಕಾರ್ಯಕ್ರಮದುದ್ದಕ್ಕೂ ಅನುಸರಿಸಿ ಯಶಸ್ವಿಗೊಳಿಸಬೇಕೆಂದೂ ಇದಕ್ಕಾಗಿ ಪ್ರತಿಯೊಬ್ಬರೂ ಸಹಕರಿಸಬೇಕೆಂದು ಕರೆಯಿತ್ತರು. ಮಂಜೇಶ್ವರ ವಿದ್ಯಾಭ್ಯಾಸ ಉಪಜಿಲ್ಲೆಯ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಶ್ರೀ ಜಿತೇಂದ್ರ ಮಾತನಾಡಿ , 5 ಬಾರಿ ಕಲೋತ್ಸವವನ್ನು ಯಶಸ್ವಿಯಾಗಿ ನಡೆಸಿದ ಧರ್ಮತ್ತಡ್ಕ ವಿದ್ಯಾಸಂಸ್ಥೆಗೆ ಹಿಂದಿನ ಅನುಭವಗಳೇ ದಾರಿದೀಪವಾಗಲಿ, ಶಾಲಾ ಕಲೋತ್ಸವವು ಊರಿನ ಉತ್ಸವವಾಗಲಿ, ನೈಜ ಪ್ರತಿಭೆಗಳು ರಾಜ್ಯಮಟ್ಟದಲ್ಲಿಯೂ ಗುರುತಿಸುವಂತಾಗಲಿ ಎಂದು ಶುಭವನ್ನು ಹಾರೈಸಿದರು. ಹೈಸ್ಕೂಲ್, ಹೈಯರ್ ಸೆಕೆಂಡರಿ ವಿಭಾಗದ ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ ಭಟ್ ಮಾತನಾಡಿ ಸರ್ವರ ಸಹಕಾರದಿಂದ ಈ ಕಲೋತ್ಸವವು ಯಶಸ್ವಿಗೊಂಡು, ಮುಂದಿನ ದಿನಗಳಲ್ಲಿ ಇತರರಿಗೆ ಮಾದರಿಯಾಗಲಿ ಎಂದು ಹಾರೈಸಿದರು. ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್ , ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯ ಅಶೋಕ ಭಂಡಾರಿ, ಮಂಜೇಶ್ವರ ಮುಖ್ಯ ಶಿಕ್ಷಕರ ವೇದಿಕೆಯ ಕಾರ್ಯದರ್ಶಿ ಶ್ಯಾಮ ಭಟ್, ಬಿ.ಪಿ.ಒ ವಿಜಯಕುಮಾರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಹೈಯರ್ ಸೆಕೆಂಡರಿ ಪ್ರಾಂಶುಪಾಲರ ವೇದಿಕೆ ಸಂಚಾಲಕ ಶ್ರೀ ರಮೇಶ್ , ಎಂ.ಪಿ.ಟಿ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಕಮಲಾಕ್ಷ ಶುಭಾಶಂಸನೆಗೈದರು‌. ಈ ಸಂದರ್ಭ ವಾರ್ಡ್ ಸದಸ್ಯೆ ಶ್ರೀಮತಿ ಶಾಂತಿ ವೈ, ಯು.ಪಿ ಶಾಲಾ ಎಂ.ಪಿ‌.ಟಿ.ಎ ಶ್ರೀಮತಿ ಜಯಲಕ್ಷ್ಮಿ, ಯು.ಪಿ ಶಾಲಾ ವ್ಯವಸ್ಥಾಪಕಿ ಶ್ರೀಮತಿ ವಿಜಯಶ್ರೀ, ಪಿ.ಟಿ.ಎ ಉಪಾಧ್ಯಕ್ಷ ವೇಣುಗೋಪಾಲ ಶೆಟ್ಟಿ ಉಪಸ್ಥಿತರಿದ್ದರು‌. ಪುತ್ತಿಗೆ ಪಂಚಾಯತ್ ಅಧ್ಯಕ್ಷ ಶ್ರೀ ಡಿ ಸುಬ್ಬಣ್ಣ ಆಳ್ವ ಆಧ್ಯಕ್ಷರಾಗಿ, ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳ ಕರೆಸ್ಪಾಂಡೆಂಟ್ ಶ್ರೀಮತಿ ಶಾರದಾ ಅಮ್ಮ ಉಪಾಧ್ಯಕ್ಷರಾಗಿ, ಹೈಯರ್ ಸೆಕೆಂಡರಿ ಪ್ರಾಂಶುಪಾಲ ಶ್ರೀ ಎನ್. ರಾಮಚಂದ್ರ ಭಟ್ ಜನರಲ್ ಕನ್ವೀನರ್, ಹೈಸ್ಕೂಲ್ ಮುಖ್ಯೋಪಾಧ್ಯಾಯ ಶ್ರೀ ಈ.ಎಚ್ ಗೋವಿಂದ ಭಟ್ ಮತ್ತು ಧರ್ಮತ್ತಡ್ಕ ಯು.ಪಿ ಶಾಲಾ ಮುಖ್ಯೋಪಾಧ್ಯಾಯ ಶ್ರೀ ಎನ್ ಮಹಾಲಿಂಗ ಭಟ್ ಜನರಲ್ ಜೋಯಿಂಟ್ ಕನ್ವೀನರ್ ಹಾಗೂ ಮಂಜೇಶ್ವರ ಉಪಜಿಲ್ಲೆಯ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಶ್ರೀ ಜಿತೇಂದ್ರ ಖಜಾಂಚಿಯಾಗಿರುವ ಸಂಘಟನಾ ಸಮಿತಿಯನ್ನು ರೂಪಿಸಲಾಯಿತು. ಇದರೊಂದಿಗೆ ಕಲೋತ್ಸವವನ್ನು ಯಶಸ್ವಿಯಾಗಿ ನಡೆಸಲು ಇತರ ಒಂಭತ್ತು ಉಪಸಮಿತಿಗಳನ್ನು ರೂಪೀಕರಿಸಲಾಯಿತು. ಯು.ಪಿ ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗ ಭಟ್ ಈ ಸಮಿತಿಯನ್ನು ಅನಾವರಣಗೊಳಿಸಿದರು. ಸಭೆಯಲ್ಲಿ ಪೂರ್ಣ ಅಂಗೀಕಾರವನ್ನು ಪಡೆಯಲಾಯಿತು. ಇದೇ ಸಂದರ್ಭ ಇತ್ತೀಚೆಗೆ ನಮ್ಮನ್ನಗಲಿದ ನಿವೃತ್ತ ವಿದ್ಯಾಧಿಕಾರಿಗಳೂ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷರಾಗಿದ್ದ ಶ್ರೀ ಎಸ್.ವಿ ಭಟ್ ಅವರಿಗೆ ನುಡಿನಮನವನ್ನು ಅರ್ಪಿಸಿ ಮೌನಪ್ರಾರ್ಥನೆಯನ್ನು ಸಲ್ಲಿಸಲಾಯಿತು‌. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಶ್ರೀ ಎನ್ ರಾಮಚಂದ್ರ ಭಟ್ ಅಭ್ಯಾಗತರನ್ನು ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಈ.ಎಚ್ ಗೋವಿಂದ ಭಟ್ ವಂದಿಸಿದರು‌. ಅಧ್ಯಾಪಕ ಸತೀಶ್ ಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು‌. ಯು.ಪಿ ಶಾಲಾ ಶಿಕ್ಷಕಿಯರು ಪ್ರಾರ್ಥನೆಯನ್ನು ಹಾಡಿದರು. ಮಂಜೇಶ್ವರ ಉಪಜಿಲ್ಲೆಯ ಹಲವು ಶಾಲೆಗಳ ಮುಖ್ಯ ಶಿಕ್ಷಕರು, ಅಧ್ಯಾಪಕರು, ಪಿ‌.ಟಿ.ಎ ಪದಾಧಿಕಾರಿಗಳು, ಧರ್ಮತ್ತಡ್ಕ ವಿದ್ಯಾಸಂಸ್ಥೆಗಳ ಎಲ್ಲಾ ಅಧ್ಯಾಪಕ, ಸಿಬ್ಬಂಧಿ ವರ್ಗದವರ ಸಹಕಾರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.


ಧರ್ಮತ್ತಡ್ಕದಲ್ಲಿ ವಿವಿಧ ಸಮಿತಿಗಳ ಸಮಾಲೋಚನಾ ಸಭೆ

ಧರ್ಮತ್ತಡ್ಕ: ನವಂಬರ್ 7ರಿಂದ 10ರ ವರೆಗೆ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ನಡೆಯಲಿರುವ 62 ನೇ ಕೇರಳ ರಾಜ್ಯ ಉಪಜಿಲ್ಲಾ ಶಾಲಾ ಕಲೋತ್ಸವದ ಅಂಗವಾಗಿ ರೂಪುಗೊಂಡ ವಿವಿಧ ಸಮಿತಿಗಳ ಸಮಾಲೋಚನಾ ಸಭೆ ಇಂದು ಇಲ್ಲಿನ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಿತು. ಮಂಜೇಶ್ವರ ವಿದ್ಯಾಭ್ಯಾಸ ಉಪಜಿಲ್ಲೆಯ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಶ್ರೀ ಜಿತೇಂದ್ರ ಸಭಾಧ್ಯಕ್ಷತೆಯನ್ನು ವಹಿಸಿ ಸೂಕ್ತವಾದ ಸಲಹೆ ಸೂಚನೆಗಳನ್ನು ಇತ್ತರು. ಕಲೋತ್ಸವದಾದ್ಯಂತ ತಾನು ಜೊತೆಗಿರುವುದಾಗಿ ಪ್ರೋತ್ಸಾಹದ ನುಡಿಗಳನ್ನಾಡಿದರು. ಸಂಘಟನಾ ಸಮಿತಿಗಳ ಕಾರ್ಯವೈಖರಿಯ ಪ್ರಗತಿಯ ದಾಖಲೀಕರಣದ ಮಹತ್ವವನ್ನು ತಿಳಿಸಿದರು. ಇದೇ ಸಂದರ್ಭ ಅಧ್ಯಾಪಕ ಶ್ರೀ ಶಿವಪ್ರಸಾದ್ ನಿರ್ಮಿಸಿದ ಲೋಗೋವನ್ನು ಪುತ್ತಿಗೆ ಪಂಚಾಯತ್ ಅಧ್ಯಕ್ಷ ಶ್ರೀ ಡಿ ಸುಬ್ಬಣ್ಣ ಆಳ್ವ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಇವರು ದೇಶ ವಿದೇಶಗಳಲ್ಲಿ ಉತ್ತಮ ನೆಲೆಯಲ್ಲಿರುವ ಸಂಸ್ಥೆಯ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗಾಗಿ ಕೈಜೋಡಿಸಬೇಕೆಂದು ಕೋರಿದರು. ಶಾಲಾ ವ್ಯವಸ್ಥಾಪಕ ಶ್ರೀ ಶಂಕರನಾರಾಯಣ ಭಟ್ ವಿನಂತಿ ಪತ್ರವನ್ನು ಬಿಡುಗಡೆಗೊಳಿಸಿ ಸರ್ವರೂ ತನು ಮನ ಧನಗಳಿಂದ ಸಹಕರಿಸಬೇಕೆಂದು ವಿನಂತಿಸಿದರು. ಈ ಸಂದರ್ಭ ಸಾಂಕೇತಿಕವಾಗಿ ರಶೀದಿ ಹಸ್ತಾಂತರವನ್ನು ಮಾಡಲಾಯಿತು. ಶಂಕರ ರಾವ್, ಡಾ. ಗೋಪಾಲಕೃಷ್ಣ ಭಟ್, ಎಂ ಮಾಧವ ಭಟ್ ಇವರಿಗೆ ವಾರ್ಡ್ ಸದಸ್ಯರುಗಳಾದ ಶ್ರೀಮತಿ ಶಾಂತಿ ವೈ, ಶ್ರೀ ಗಂಗಾಧರ, ಶ್ರೀ ಪಾಲಾಕ್ಷ ಇವರು ರಶೀದಿಯನ್ನು ಹಸ್ತಾಂತರಿಸಿದರು. ಪ್ರೋಗ್ರಾಂ ಕಮಿಟಿಯ ಕನ್ವೀನರ್ ಸತೀಶ್ ಶೆಟ್ಟಿ, ಫುಡ್ ಕಮಿಟಿ ಕನ್ವೀನರ್ ರಾಜಕುಮಾರ್ , ರಿಸೆಪ್ಷನ್ ಸಮಿತಿ ಕನ್ವೀನರ್ ಶ್ರೀಮತಿ ಉಷಾ ಕೆ.ಆರ್, ಫೈನಾನ್ಸ್ ಸಮಿತಿ ಕನ್ವೀನರ್ ರಾಮಮೋಹನ್, ಸ್ಟೇಜ್ ಲೈಟ್ ಹಾಗೂ ಸೌಂಡ್ಸ್ ಸಮಿತಿ ಕನ್ವೀನರ್ ಪ್ರಶಾಂತ ಹೊಳ್ಳ, ಡಿಸಿಪ್ಲಿನ್ ಸಮಿತಿ ಕನ್ವೀನರ್ ಉಣ್ಣಿಕೃಷ್ಣನ್, ಟ್ರೋಫಿ ಕಮಿಟಿ ಕನ್ವೀನರ್ ಶಿವಪ್ರಸಾದ್, ಪಬ್ಲಿಸಿಟಿ ಸಮಿತಿ ಕನ್ವೀನರ್ ಪ್ರದೀಪ್ ಕೆ ಹಾಗೂ ಹೆಲ್ತ್ ಹಾಗೂ ಸಾನಿಟೈಸೇಶನ್ ಸಮಿತಿ ಕನ್ವೀನರ್ ರಾಮಕೃಷ್ಣ ಭಟ್ ಹೀಗೆ ಕಲೋತ್ಸವದ ಯಶಸ್ಸಿಗಾಗಿ ರಚಿಸಿದ ಎಲ್ಲಾ 9 ಉಪಸಮಿತಿಗಳ ಕನ್ವೀನರ್ ತಮ್ಮ ಸಮಿತಿಯ ಪ್ರಗತಿಯನ್ನು ಮಂಡಿಸಿದರು. ಸಮಿತಿಗಳ ಕಾರ್ಯಕ್ಷಮತೆಯನ್ನು ಉತ್ತಮಪಡಿಸುವುದಕ್ಕಾಗಿ ಸಭಿಕರ ಅಭಿಪ್ರಾಯಗಳನ್ನೂ ಶೇಖರಿಸಲಾಯಿತು. ಎಚ್.ಎಂ ಫೋರಂ ಸೆಕ್ರೆಟರಿ ಶಾಮ ಭಟ್, ಸಹ ಕಾರ್ಯದರ್ಶಿ ಸತ್ಯಪ್ರಕಾಶ್, ಸ್ಥಳೀಯ ವೈದ್ಯಾಧಿಕಾರಿ ಡಾ.ಶ್ರೀಮತಿ ಸೀತಾರತ್ನ, ಹೈಸ್ಕೂಲ್ ಹಾಗೂ ಯುಪಿ ಶಾಲೆಗಳ ಪಿ.ಟಿ.ಎ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಮತ್ತು ಅಶೋಕ, ಎಂ.ಪಿ.ಟಿ ಎ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಕಮಲಾಕ್ಷ, ವಾರ್ಡ್ ಸದಸ್ಯರಾದ ಅಶೋಕ ಭಂಢಾರಿ, ಶಾಂತಿ ವೈ, ಗಂಗಾಧರ್, ಪಾಲಾಕ್ಷ, ಯು.ಪಿ ಶಾಲಾ ವ್ಯವಸ್ಥಾಪಕಿ ಶ್ರೀಮತಿ ವಿಜಯಶ್ರೀ ಮುಂತಾದವರು ಉಪಸ್ಥಿತರಿದ್ದರು. ಯು.ಪಿ ಮುಖ್ಯೋಪಾಧ್ಯಾಯ ಮಹಾಲಿಂಗ ಭಟ್ ಪ್ರಾರ್ಥಿಸಿದರು.ಪ್ರಾಂಶುಪಾಲ ರಾಮಚಂದ್ರ ಭಟ್ ಸ್ವಾಗತಿಸಿ, ಹೈಸ್ಕೂಲ್ ಮುಖ್ಯೋಪಾಧ್ಯಾಯ ಗೋವಿಂದ ಭಟ್ ವಂದಿಸಿದರು.ಶ್ರೀನಿವಾಸ್ ಕೆ.ಎಚ್ ನಿರೂಪಿಸಿದರು.


ಕಲೋತ್ಸವದ ಪೂರ್ವಭಾವಿ ಸಭೆ

10/10/2023 ಉಪಜಿಲ್ಲಾ ಶಾಲಾ ಕಲೋತ್ಸವದ ಪ್ರಯುಕ್ತ ಇಂದು ವಿವಿಧ ಸ್ಥಳೀಯ ಸಂಘ ಸಂಸ್ಥೆಗಳನ್ನು ಆಹ್ವಾನಿಸಿ ಧರ್ಮತ್ತಡ್ಕ ಶಾಲೆಯ ಹೈಸ್ಕೂಲ್ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು


ಕಲೋತ್ಸವದ ಆಮಂತ್ರಣ ಪತ್ರಿಕೆ

ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆ ಧರ್ಮತ್ತಡ್ಕದಲ್ಲಿ ನವೆಂಬರ್ 7 ರಿಂದ 10ರ ತನಕ ಜರಗಲಿರುವ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಆಮಂತ್ರಣ ಪತ್ರಿಕೆಯನ್ನು ಪುತ್ತಿಗೆ ಪಂಚಾಯತ್ ಅಧ್ಯಕ್ಷ ಶ್ರೀ ಡಿ ಸುಬ್ಬಣ್ಣ ಆಳ್ವ ಬಿಡುಗಡೆಗೊಳಿಸಿದರು. ಈ ಸುಸಂಧರ್ಭದಲ್ಲಿ ಉಪ ಶಿಕ್ಷಣಾಧಿಕಾರಿ ಜಿತೇಂದ್ರ ಎಸ್ , ಶಾಲಾ ವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್, ಪ್ರಾಂಶುಪಾಲ ಶ್ರೀ ಎನ್ ರಾಮಚಂದ್ರ ಭಟ್, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.


ಧರ್ಮತ್ತಡ್ಕದಲ್ಲಿ ಉಪಜಿಲ್ಲಾ ಕಲೋತ್ಸವದ ಅವಲೋಕನಾ ಸಭೆ

ಧರ್ಮತ್ತಡ್ಕ; ನವಂಬರ್ ,1; ನವಂಬರ್ 7 ರಿಂದ 10ರ ವರೆಗೆ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ನಡೆಯಲಿರುವ 62 ನೇ ಕೇರಳ ರಾಜ್ಯ ಉಪಜಿಲ್ಲಾ ಶಾಲಾ ಕಲೋತ್ಸವದ ಅವಲೋಕನಾ ಸಭೆ ಇಂದು ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಿತು. ಮಂಜೇಶ್ವರ ವಿದ್ಯಾಭ್ಯಾಸ ಉಪಜಿಲ್ಲೆಯ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಶ್ರೀ ಜಿತೇಂದ್ರ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಇಲ್ಲಿಯ ತನಕದ ಪ್ರಗತಿಯನ್ನು ಶ್ಲಾಘಿಸಿದರು. ಕಲೋತ್ಸವದ ಯಶಸ್ಸಿಗಾಗಿ ರಚಿಸಿದ ಎಲ್ಲಾ 9 ಉಪಸಮಿತಿಗಳ ಕನ್ವೀನರ್ ತಮ್ಮ ಸಮಿತಿಯ ಪ್ರಗತಿಯನ್ನು ಮಂಡಿಸಿದರು.ಶಾಲಾ ವ್ಯವಸ್ಥಾಪಕ ಶಂಕರ ನಾರಾಯಣ ಭಟ್,ಹೈಸ್ಕೂಲ್ ಮುಖ್ಯೋಪಾಧ್ಯಾಯ ಗೋವಿಂದ ಭಟ್,ಯು.ಪಿ ಮುಖ್ಯೋಪಾಧ್ಯಾಯ ಮಹಾಲಿಂಗಭಟ್, ಎಚ್.ಎಂ ಫೋರಂ ಸೆಕ್ರೆಟರಿ ಶಾಮ ಭಟ್, ಪಿ.ಟಿ.ಎ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ , ಸ್ಥಳೀಯ ಆರೋಗ್ಯಾಧಿಕಾರಿ ತಿರುಮಲೇಶ್, ಶಂಕರ ರಾವ್ ಕಕ್ವೆ, ಮುಂತಾದವರು ಉಪಸ್ಥಿತರಿದ್ದರು. ಪ್ರಾಂಶುಪಾಲ ರಾಮಚಂದ್ರ ಭಟ್ ಸ್ವಾಗತಿಸಿ, ಸೂರ್ಯನಾರಾಯಣ ಭಟ್ ವಂದಿಸಿದರು . ಶ್ರೀಮತಿ ಉಮಾದೇವಿ ನಿರೂಪಿಸಿದರು.


ಮಂಜೇಶ್ವರ ಉಪಜಿಲ್ಲಾ ಕಲೋತ್ಸವ ನಾಳೆಯಿಂದ ಧರ್ಮತ್ತಡ್ಕದಲ್ಲಿ...

ಧರ್ಮತ್ತಡ್ಕ: 62 ನೇ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವವು ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ನವಂಬರ್ 7 ರಿಂದ 10 ರ ತನಕ ವಿಜ್ರಂಭಣೆಯಿಂದ ನಡೆಯಲಿರುವುದು. ಆ ಪ್ರಯುಕ್ತ 7 ನೇ ತಾರೀಕಿಗೆ ಎಲ್ಲಾ ರಚನಾ ಸ್ಪರ್ಧೆಗಳನ್ನು ನಡೆಸಲಾಗುವುದು. ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆಯು 8ನೇ ತಾರೀಕಿಗೆ ನಡೆಯುವುದು. ವಿದ್ಯಾಸಂಸ್ಥೆಗಳ ಕರೆಸ್ಪಾಂಡೆಂಟ್ ಶ್ರೀಮತಿ ಶಾರದಾ ಅಮ್ಮ ಧ್ವಜಾರೋಹಣವನ್ನು ಗೈಯುವರು. ಮಂಜೇಶ್ವರ ಶಾಸಕ ಶ್ರೀ ಎ.ಕೆ.ಎಂ ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸುವರು.ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮಂಜೇಶ್ವರ ಉಪ ವಿದ್ಯಾಧಿಕಾರಿ ಶ್ರೀ ಜಿತೇಂದ್ರ ಎಸ್.ಎಚ್ ಪ್ರಾಸ್ತಾವಿಕ ನುಡಿಗಳನ್ನಾಡುವರು‌.ಪುತ್ತಿಗೆ ಪಂಚಾಯತ್ ಅಧ್ಯಕ್ಷ ಶ್ರೀ ಸುಬ್ಬಣ್ಣ ಆಳ್ವ, ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್,ಕಾಸರಗೋಡು ಡಿ.ಡಿ.ಇ ಶ್ರೀ ನಂದಿಕೇಶನ್ ಎನ್, ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀ ಅಬ್ದುಲ್ ಮಜೀದ್ ಎಂ ಎಚ್,ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯೆ ಶ್ರೀಮತಿ ಚಂದ್ರಾವತಿ ಎಂ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಶಾಂತಿ ವೈ,ಶ್ರೀ ಗಂಗಾಧರ,ಶ್ರೀ ಆಸಿಫ್ ಅಲಿ ಸಿ.ಎಂ, ಶ್ರೀಮತಿ ಜಯಂತಿ, ಶ್ರೀಮತಿ ಕಾವ್ಯಶ್ರೀ ಪಿ‌.ಕೆ, ಶ್ರೀಮತಿ ಇರ್ಶಾನ ಎಸ್,ಶ್ರೀಮತಿ ಪುಷ್ಪಲಕ್ಷ್ಮಿ ಎನ್,ಡಯಟ್ ಪ್ರಾಂಶುಪಾಲ ಶ್ರೀ ರಘುರಾಮ ಭಟ್ ಕೆ,ಪಿ.ಟಿ.ಎ ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ , ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಕಮಲಾಕ್ಷ, ವ್ಯವಸ್ಥಾಪಕ ಶ್ರೀ ಶಂಕರನಾರಾಯಣ ಭಟ್,ಶುಭಾಶಯಗಳನ್ನು ತಿಳಿಸುವರು.ಪ್ರಾಂಶುಪಾಲ ಶ್ರೀ ರಾಮಚಂದ್ರ ಭಟ್ ಸ್ವಾಗತಿಸಿ ಮುಖ್ಯೋಪಾಧ್ಯಾಯ ಶ್ರೀ ಗೋವಿಂದ ಭಟ್ ವಂದಿಸುವರು‌. ಸ್ವಾಗತ ಗೀತೆಯೊಂದಿಗೆ ಆರಂಭಗೊಳ್ಳುವ ಈ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸಾಂಪ್ರದಾಯಿಕ ಮೆರವಣಿಗೆಗಳೊಂದಿಗೆ ವೇದಿಕೆಗೆ ಕರೆದುಕೊಂಡು ಬರಲಾಗುವುದು.120 ಕ್ಕೂ ಅಧಿಕ ಶಾಲೆಗಳಿಂದ ಸುಮಾರು 4000 ಕ್ಕೂ ಅಧಿಕ ಪ್ರತಿಭೆಗಳು 10 ರಷ್ಟು ಮುಖ್ಯ ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಈ ಮಹಾ ಉತ್ಸವವನ್ನು ಯಶಸ್ವಿಗೊಳಿಸುವಲ್ಲಿ ಎಲ್ಲಾ ವಿದ್ಯಾಭಿಮಾನಿಗಳು ,ರಕ್ಷಕರು ಸರ್ವ ಸಹಕಾರವನ್ನು ನೀಡಬೇಕೆಂದು ಸಂಘಟನಾ ಸಮಿತಿಯವರು ವಿನಂತಿಸಿಕೊಂಡಿದ್ದಾರೆ.


ಧರ್ಮತ್ತಡ್ಕ ಶಾಲೆಯಲ್ಲಿ ಕಲೋತ್ಸವಕ್ಕೆ ಸಂಭ್ರಮದ ತೆರೆ

ಧರ್ಮತ್ತಡ್ಕ: ಮಂಜೇಶ್ವರ ಉಪಜಿಲ್ಲಾ ಮಟ್ಟದ 62ನೇ ಶಾಲಾ ಕಲೋತ್ಸವವು ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ನವಂಬರ್ 7 ರಿಂದ ಆರಂಭಗೊಂಡು ಇಂದು ಸಮಾಪ್ತಿಯಾಯಿತು.4 ದಿನಗಳಲ್ಲಾಗಿ 120 ಶಾಲೆಗಳಿಂದ ಸುಮಾರು 4000 ಕ್ಕೂ ಅಧಿಕ ಮಂದಿ ತಮ್ಮ ಪ್ರತಿಭಾ ಪ್ರದರ್ಶನವನ್ನುಗೈದರು. ಈ ಸಂದರ್ಭ ವಿವಿಧ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದ ಶಾಲೆಗಳಿಗೆ ಪ್ರಶಸ್ತಿ ಫಲಕವನ್ನಿತ್ತು ಅಭಿನಂದಿಸಲಾಯಿತು. ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಮೀನಾ ಟೀಚರ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು. ಬಳಿಕ ಮಾತನಾಡಿ, ಮಂಜೇಶ್ವರದ ಆಂತರಿಕ ಭಾಗದಲ್ಲಿರುವ ಧರ್ಮತ್ತಡ್ಕ ಪ್ರದೇಶದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಲು ಕಾರಣವಾದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು. ಮಂಜೇಶ್ವರ ಶಾಸಕ ಶ್ರೀ ಎ.ಕೆ.ಎಂ ಅಶ್ರಫ್ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಹಲವು ಭಾಷೆಗಳ , ಹಲವು ಸಂಸ್ಕೃತಿಗಳ ಸಾಂಸ್ಕೃತಿಕ ವಿನಿಮಯವು ರಾಷ್ಟ್ರಕವಿ ಗೋವಿಂದ ಪೈಗಳು ಜನಿಸಿದ ಮಂಜೇಶ್ವರದ ನಾಡಿನಲ್ಲಿ ಕಲೋತ್ಸವದ ವೇದಿಕೆಯ ಮೂಲಕ ಬಹಳ ಪರಿಣಾಮಕಾರಿಯಾಗಿ ಸಾಧ್ಯವಾಗಿದೆ ಎಂದರು.ಇದನ್ನು ಶಿಸ್ತುಬದ್ಧವಾಗಿ ಸಂಘಟಿಸಿದ ಧರ್ಮತ್ತಡ್ಕ ವಿದ್ಯಾಸಂಸ್ಥೆಗೆ ಹಾಗೂ ವಿದ್ಯಾಭಿಮಾನಿ ಜನತೆಗೆ ಅಭಿನಂದನೆಯನ್ನು ಸಲ್ಲಿಸಿದರು. ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಂತಿ ಕೆ , ಪುತ್ತಿಗೆ ಪಂಚಾಯತ್ ಅಧ್ಯಕ್ಷ ಶ್ರೀ ಸುಬ್ಬಣ್ಣ ಆಳ್ವ ,ಉಪಾಧ್ಯಕ್ಷೆ ಶ್ರೀಮತಿ ಜಯಂತಿ, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಪಾಲಾಕ್ಷ ರೈ, ಕಾಸರಗೋಡು ಎಸ್.ಎಸ್.ಕೆ ಜಿಲ್ಲಾ ಪ್ರೋಗ್ರಾಂ ಆಫೀಸರ್ ಶ್ರೀ ನಾರಾಯಣ ದೇಲಂಪಾಡಿ, ಮಂಗಳೂರು ಕಾಂಪ್ಕೋ ಲಿಮಿಟೆಡ್ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ಟಿ, ಎಚ್. ಎಂ ಫೋರಂ ಸಂಚಾಲಕ ಶ್ರೀ ಶಾಮ ಭಟ್ ಚೇವಾರ್ ಶುಭಾಶಯಗಳನ್ನು ತಿಳಿಸಿದರು. ಪುತ್ತಿಗೆ ಪಂಚಾಯತ್ ವೆಲ್ಫೇರ್ ಸ್ಟಾಂಡಿಂಗ್ ಸಮಿತಿ ಅಧ್ಯಕ್ಷೆ ಶ್ರೀಮತಿ ಅನಿತಾ ಎಂ,ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್ , ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ಜಿತೇಂದ್ರ ಎಸ್.ಎಚ್, ವಾರ್ಡ್ ಸದಸ್ಯರುಗಳಾದ ಕೇಶವ ಎಸ್ ಆರ್, ಶ್ರೀ ಜನಾರ್ಧನ‌ ಪೂಜಾರಿ ಕೆ, ಶ್ರೀ ಅಶೋಕ ಭಂಡಾರಿ, ಶ್ರೀಮತಿ ಗೀತಾ ಎಂ, ಶ್ರೀಮತಿ ಪ್ರೇಮ ಎಸ್ ರೈ, ಶ್ರೀಮತಿ ಸುನಿತಾ ವಾಲ್ಟಿ ಡಿಸೋಜ, ಜೆಡ್ ಎ ಕಯ್ಯಾರ್, ಶ್ರೀ ಆಸಿಪ್ ಅಲಿ, ಶ್ರೀಮತಿ ರಹಮತ್ ರಹಮಾನ್ , ಶ್ರೀಮತಿ ಶಾಂತಿ ವೈ, ಮಂಜೇಶ್ವರ ಬಿ.ಪಿ.ಸಿ ವಿಜಯಕುಮಾರ್ ಪಿ, ಸಾಮಾಜಿಕ ಕಾರ್ಯಕರ್ತ ಶಂಕರ ರಾವ್.ಕೆ, ಪಿ.ಟಿ.ಎ ಅಧ್ಯಕ್ಷ ರಾದ ಶಿವಪ್ರಸಾದ್ ಶೆಟ್ಟಿ ಹಾಗೂ ಅಶೋಕ ಎನ್, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ, ವಿದ್ಯಾಸಂಸ್ಥೆಗಳ ಕರೆಸ್ಪಾಂಡಂಟ್ ಶಾರದಾ ಅಮ್ಮ, ಹೈಯರ್ ಸೆಕೆಂಡರಿ ಶಾಲಾ ವ್ಯವಸ್ಥಾಪಕ ಶ್ರೀ ಶಂಕರ ನಾರಾಯಣ ಭಟ್, ಏ.ಯು.ಪಿ ಶಾಲೆ ವ್ಯವಸ್ಥಾಪಕಿ ಶ್ರೀಮತಿ ವಿಜಯಶ್ರೀ , ಮಾಜಿ ವಾರ್ಡ್ ಸದಸ್ಯ ಅಮಿರ್ ಅಲಿ, ಎಸ್.ಎಂ.ಸಿ ಅಧ್ಯಕ್ಷ ಅಜೀಜ್ ಕಲಾಯಿ , ಪ್ರಾಂಶುಪಾಲ ರಾಮಚಂದ್ರ ಭಟ್, ಮುಖ್ಯೋಪಾಧ್ಯಾಯ ಗೋವಿಂದ ಭಟ್, ಉದ್ಯಮಿ ಶ್ರೀ ಮಹಾಬಲೇಶ್ವರ ಭಟ್ ಎಡಕ್ಕಾನ ಉಪಸ್ಥಿತರಿದ್ದರು. ಅಧ್ಯಾಪಕ ಶ್ರೀ ಸತೀಶ್ ಕುಮಾರ್ ಶೆಟ್ಟಿ 8 ಭಾಷೆಗಳಲ್ಲಿ ಅತಿಥಿಗಳನ್ನು ವಿಶೇಷವಾಗಿ ಸ್ವಾಗತಿಸಿ ಕಾಸರಗೋಡಿನ ಬಹುಭಾಷಾ ಸಂಗಮ ಭೂಮಿಯ ಶ್ರೀಮಂತಿಕೆಯನ್ನು ಸಭಿಕರಿಗೆ ಪರಿಚಯಿಸಿದರು. ಮುಖ್ಯೋಪಾಧ್ಯಾಯ ಶ್ರೀ ಮಹಾಲಿಂಗ ಭಟ್ ವಂದಿಸಿದರು‌. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಅಧ್ಯಾಪಕ ಶ್ರೀನಿವಾಸ ಕೆ.ಎಚ್ ಹಾಗೂ ವಿಮಲ್ ಅಡಿಯೋಡಿ ಕಾರ್ಯಕ್ರಮವನ್ನು ನಿರೂಪಿಸಿದರು..

ಮಂಜೇಶ್ವರ ಉಪಜಿಲ್ಲಾ ಕಲೋತ್ಸವದ ಯಶಸ್ವಿಗೆ ಸಹಕರಿಸಿದ ಸಂಘ ಸಂಸ್ಥೆಗಳಿಗೆ ಅಭಿವಂದನಾ ಕಾರ್ಯಕ್ರಮ

ಧರ್ಮತ್ತಡ್ಕ : ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವವು ನವೆಂಬರ್ 7 ರಿಂದ 10ರ ತನಕ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಯಲ್ಲಿ ನಡೆದಿದ್ದು ಈ ಕಲೋತ್ಸವದ ಯಶಸ್ವಿಗೆ ಸಹಕರಿಸಿದ ಸಂಘ ಸಂಸ್ಥೆಗಳನ್ನು ಗೌರವಿಸುವ ಕಾರ್ಯಕ್ರಮವು ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ. ಶಿವಪ್ರಸಾದ್ ಶೆಟ್ಟಿ ಕುಡಾಲು ವಹಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀ ರಾಮಚಂದ್ರ ಭಟ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.ಶಾಲಾ ವ್ಯವಸ್ಥಾಪಕ ಶ್ರೀ. ಶಂಕರನಾರಾಯಣ ಭಟ್, ಶಾಲಾ ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಕಮಲಾಕ್ಷ , ಪೈವಳಿಕೆ ಪಂಚಾಯತ್ ವಾರ್ಡ್ ಸದಸ್ಯ ಶ್ರೀ. ಅಶೋಕ್ ಭಂಡಾರಿ , ಎಯುಪಿ ಶಾಲಾ ಮ್ಯಾನೇಜರ್ ಶ್ರೀಮತಿ ವಿಜಯಶ್ರೀ ಬಿ ಮತ್ತು ಹಿರಿಯ ಅಧ್ಯಾಪಕ ಶ್ರೀ. ರಾಮ್ ಮೋಹನ್ ಸಿ ಯಚ್. ಸಂಘ ಸಂಸ್ಥೆಗಳನ್ನು ಅಭಿನಂದಿಸಿದರು. ಈ ಸಂಧರ್ಭದಲ್ಲಿ ಶ್ರೀ ಸತೀಶ್ಚಂದ್ರ ಭಂಡಾರಿ ಕೋಳಾರು, ಶ್ರೀ ಶಂಕರ ರಾವ್ ಕಕ್ವೆ , ಶ್ರೀ ಜಾನ್ ಡಿಸೋಜಾ , ಶ್ರೀ ಅಶ್ರಫ್ ಸೋಕೆ, ಶ್ರೀ ಗೋವಿಂದ ಭಟ್ ಕನಿಯಾಲ, ಶ್ರೀ. ಕೃಷ್ಣ ಕಿಶೋರ್ ಮೊದಲಾದವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಸಹಕರಿಸಿದ 45 ಸಂಘ ಸಂಸ್ಥೆಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಘ ಸಂಸ್ಥೆಗಳ ಹೆಸರುಗಳನ್ನು ಶ್ರೀ ಉಣ್ಣಿಕೃಷ್ಣನ್ ಮತ್ತು ಶ್ರೀಮತಿ ನಿವೇದಿತಾ ವಾಚಿಸಿದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ. ಗೋವಿಂದ ಭಟ್ ಸ್ವಾಗತಿಸಿ , ಎಯುಪಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ. ಮಹಾಲಿಂಗ ಭಟ್ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಅಧ್ಯಾಪಿಕೆಯರು ಪ್ರಾರ್ಥಿಸಿದರು. ಶ್ರೀ. ಸತೀಶ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಮಂಜೇಶ್ವರ ಉಪಜಿಲ್ಲೆಯ 62 ನೇ ಶಾಲಾ ಕಲೋತ್ಸವದ ಸಂಘಟನಾ ಸಮಿತಿಯ ಸಭೆ:

ಧರ್ಮತ್ತಡ್ಕ :ಡಿಸೆಂಬರ್ 22: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾ ಸಂಸ್ಥೆಗಳಲ್ಲಿ ನವೆಂಬರ್ 7 ರಿಂದ 10 ರ ತನಕ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ 62ನೇ ಶಾಲಾಕಲೋತ್ಸವದ ಸಂಘಟನಾ ಸಮಿತಿಯ ಸಭೆಯು ಇಂದು ಹೈಸ್ಕೂಲ್ ಸಭಾಂಗಣದಲ್ಲಿ ಜರಗಿತು. ಮಂಜೇಶ್ವರ ವಿದ್ಯಾಭ್ಯಾಸ ಉಪಜಿಲ್ಲೆಯ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಶ್ರೀ ಜಿತೇಂದ್ರ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿ ವಿದ್ಯಾರ್ಥಿಗಳ ಕಲಾ ಉತ್ಸವವನನ್ನು ಧರ್ಮತ್ತಡ್ಕ ಊರಿನ ಮಹಾ ಉತ್ಸವವನ್ನಾಗಿಸಿದ ಕಲೋತ್ಸವ ಸಮಿತಿಗೂ ಸಹಕಾರವನ್ನಿತ್ತ ಊರ ಬಾಂಧವರಿಗೂ,ವಿದ್ಯಾಭಿಮಾನಿಗಳಿಗೂ ಅಭಿನಂದನೆಯನ್ನು ಸಲ್ಲಿಸಿದರು‌. ಶಾಲಾ ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ ಭಟ್, ವ್ಯವಸ್ಥಾಪಕಿ ಶ್ರೀಮತಿ ವಿಜಯಶ್ರೀ ಬಿ, ಎಚ್.ಎಂ ಫೋರಂ ಸಹ ಕಾರ್ಯದರ್ಶಿ ಶ್ರೀ ಸತ್ಯಪ್ರಕಾಶ್, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಕಮಲಾಕ್ಷ, ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯ ಅಶೋಕ ಭಂಡಾರಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಮುಂತಾದವರು ಶುಭವನ್ನು ಹಾರೈಸಿದರು‌.ಶ್ರೀ ರಾಮಮೋಹನ್ ಸಿ.ಎಚ್ ಲೆಕ್ಕಪತ್ರವನ್ನು ಮಂಡಿಸಿದರು.ಸಭಿಕರ ಸರ್ವ ಸಹಮತದೊಂದಿಗೆ ಕಲೋತ್ಸವದ ಸಂಘಟನಾ ಸಮಿತಿಯನ್ನು ವಿಸರ್ಜಿಸಲಾಯಿತು‌. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಶ್ರೀ ಎನ್ ರಾಮಚಂದ್ರ ಭಟ್ ಸ್ವಾಗತಿಸಿ, ಮುಖ್ಯೋಪಾಧ್ಯಾಯ ಶ್ರೀ ಈ.ಎಚ್ ಗೋವಿಂದ ಭಟ್ ವಂದಿಸಿದರು‌. ಅಧ್ಯಾಪಕ ಶ್ರೀ ಶ್ರೀನಿವಾಸ ಕೆ.ಎಚ್ ಕಾರ್ಯಕ್ರಮವನ್ನು ನಿರೂಪಿಸಿದರು‌. ಯು.ಪಿ ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗ ಭಟ್ ಪ್ರಾರ್ಥಿಸಿದರು‌. ಮಂಜೇಶ್ವರ ಉಪಜಿಲ್ಲೆಯ ಹಲವು ಶಾಲೆಗಳ ಮುಖ್ಯ ಶಿಕ್ಷಕರು, ಅಧ್ಯಾಪಕರು, ಪಿ‌.ಟಿ.ಎ ಪದಾಧಿಕಾರಿಗಳು, ಧರ್ಮತ್ತಡ್ಕ ವಿದ್ಯಾಸಂಸ್ಥೆಗಳ ಎಲ್ಲಾ ಅಧ್ಯಾಪಕ, ಸಿಬ್ಬಂಧಿ ವರ್ಗದವರ ಸಹಕಾರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.